ಕೆ.ಆರ್.ಆಸ್ಪತ್ರೆಯ ವೈರಾಲಜಿ ವಿಭಾಗಕ್ಕೆ ಡಿಎಫ್‍ಆರ್‍ಎಲ್‍ನಿಂದ ಮೊಬೈಲ್ ಪರಕ್ ಯೂನಿಟ್ ಕೊಡುಗೆ
ಮೈಸೂರು

ಕೆ.ಆರ್.ಆಸ್ಪತ್ರೆಯ ವೈರಾಲಜಿ ವಿಭಾಗಕ್ಕೆ ಡಿಎಫ್‍ಆರ್‍ಎಲ್‍ನಿಂದ ಮೊಬೈಲ್ ಪರಕ್ ಯೂನಿಟ್ ಕೊಡುಗೆ

May 12, 2020

ಮೈಸೂರು, ಮೇ 11(ಆರ್‍ಕೆಬಿ)- ಕೊರೊನಾ ಪಿಡುಗು ಹೆಚ್ಚುತ್ತಿರುವ ಸಂದರ್ಭದಲ್ಲಿ ಕೊರೊನಾ ಪ್ರಕರಣಗಳ ಪರೀಕ್ಷೆಗೆ ನೆರವಾಗುವ ಉದ್ದೇಶದಿಂದ ಮೈಸೂರಿನ ಡಿಎಫ್ ಆರ್‍ಎಲ್ (ರಕ್ಷಣಾ ಆಹಾರ ಸಂಶೋಧನಾ ಪ್ರಯೋ ಗಾಲಯ) ಕೆ.ಆರ್.ಆಸ್ಪತ್ರೆಯ ವೈರಾಲಜಿ (ಮೈಕ್ರೋ ಬಯಾ ಲಜಿ) ವಿಭಾಗಕ್ಕೆ ಮೊಬೈಲ್ ಪರಕ್ ಯೂನಿಟ್ ಕೊಡುಗೆ ನೀಡಿದೆ. ಸುಮಾರು 1 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಈ ಮೊಬೈಲ್ ಪರಕ್ ಯೂನಿಟ್‍ನಿಂದ ಪ್ರತಿದಿನ 100 ರಿಂದ 150ಕ್ಕೂ ಹೆಚ್ಚಿನ ಕೊರೊನಾ ಪ್ರಕರಣಗಳ ಪರೀಕ್ಷೆ ನಡೆಸಬಹುದಾಗಿದೆ. ಡಿಎಫ್‍ಆರ್‍ಎಲ್ ನಿರ್ದೇಶಕ ಡಾ. ಎ.ಡಿ.ಸೇಮ್‍ವಾಲ್ ಸೋಮವಾರ ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಮತ್ತು ನಿರ್ದೇಶಕ ಡಾ.ಸಿ.ಪಿ.ನಂಜ ರಾಜ್ ಅವರಿಗೆ ಪರಕ್ ಯೂನಿಟ್ ಹಸ್ತಾಂತರಿಸಿದರು. ಡಿಎಫ್‍ಆರ್‍ಎಲ್ ಮೊಬೈಲ್ ಲ್ಯಾಬ್ ಯಂತ್ರದಿಂದ ಪೂರಕವಾದ ಹೆಚ್ಚಿನ ಸಂಖ್ಯೆಯ ಕೊರೊನಾ ಪರೀಕ್ಷೆ ಗಳನ್ನು ನಡೆಸಲು ಅನುಕೂಲವಾಗಲಿದೆ ಎಂದರು.

ಕೆ.ಆರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಬಿ.ಎಲ್. ನಂಜುಂಡಸ್ವಾಮಿ, ಡಾ.ಅನುರಾಧಾ, ಡಾ.ಅಮೃತಾ, ಡಾ.ಹೆಚ್.ಬಿ.ಶಶಿಧರ್, ಡಾ.ಹೆಚ್.ಎನ್.ದಿನೇಶ್, ಡಾ. ಜೋಸೆಫ್, ಡಾ.ಪರಿಧಾ, ಡಾ.ಜಯಪ್ರಕಾಶ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »