ಚೀನಾದಿಂದ ಹೊರ ಬರುವ ಕಂಪನಿಗಳನ್ನು ಸೆಳೆಯಲು ರಾಜ್ಯದಲ್ಲಿ ಕಾರ್ಯಪಡೆ
ಮೈಸೂರು

ಚೀನಾದಿಂದ ಹೊರ ಬರುವ ಕಂಪನಿಗಳನ್ನು ಸೆಳೆಯಲು ರಾಜ್ಯದಲ್ಲಿ ಕಾರ್ಯಪಡೆ

May 12, 2020

ಬೆಂಗಳೂರು: ಚೀನಾ ದೇಶದಿಂದ ಹೊರ ಬರುತ್ತಿರುವ ಕಂಪನಿಗಳನ್ನು ರಾಜ್ಯಕ್ಕೆ ಸೆಳೆಯುವ ದೃಷ್ಟಿಯಿಂದ ರಾಜ್ಯ ಸರಕಾರ ವಿಶೇಷ ಹೂಡಿಕೆ ಪ್ರೋತ್ಸಾಹ ಕಾರ್ಯಪಡೆಯನ್ನು ರಚಿಸಿದೆ.

ಕೊರೊನಾ ಜನಕ ಚೀನಾದಿಂದ ಈಗಾಗಲೇ ಹಲವು ಕಂಪೆನಿಗಳು ಹೊರಬರಲು ಮುಂದಾ ಗಿವೆ. ಈ ಸಂಬಂಧ ಹಲವು ಕಂಪೆನಿ ಗಳು ತಮ್ಮ ಇಂಗಿತ ವ್ಯಕ್ತಪಡಿಸಿವೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ರಾಜ್ಯ ಸರ್ಕಾರ ಚೀನಾದಿಂದ ಹೊರ ಬರುವ ಕಂಪೆನಿಗಳನ್ನು ರಾಜ್ಯಕ್ಕೆ ಕರೆ ತರುವ ನಿಟ್ಟಿನಲ್ಲಿ ಕಾರ್ಯಪಡೆಯನ್ನು ರಚಿಸಿದೆ.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಇತ್ತೀಚೆಗೆ ಈ ಸಂಬಂಧ ಸಭೆ ನಡೆಸಿ ಚರ್ಚಿಸಲಾಗಿತ್ತು. ಅದರಂತೆ ಇದೀಗ ಸ್ಷೆಷಲ್ ಇನ್ವೆಸ್ಟ್ ಮೆಂಟ್ ಪ್ರೊಮೋಷನ್ ಟಾಸ್ಕ್‍ಫೋರ್ಸ್ ರಚಿಸಿ ಆದೇಶ ಹೊರಡಿಸಲಾಗಿದೆ. ಸರ್ಕಾ ರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆ ಯಲ್ಲಿ ಈ ಟಾಸ್ಕ್‍ಫೋರ್ಸ್ ಇರಲಿದೆ.

ಒಟ್ಟು 15 ಸದಸ್ಯರ ಈ ಟಾಸ್ಕ್‍ಫೋರ್ಸ್ ನಲ್ಲಿ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯ ದರ್ಶಿ ಸೇರಿದಂತೆ ವಿವಿಧ ಅಧಿಕಾರಿಗಳು ಇರಲಿದ್ದಾರೆ. ಜೊತೆಗೆ ಕರ್ನಾಟಕದಲ್ಲಿನ ಅಮೇರಿಕಾ, ಕೊರಿಯಾ, ತೈವಾನ್, ಫ್ರಾನ್ಸ್ ಹಾಗೂ ಜರ್ಮನಿ ಕಂಪನಿಗಳ ಪ್ರತಿನಿಧಿ ಗಳು ಕಾರ್ಯಪಡೆಯಲ್ಲಿ ಇರಲಿದ್ದಾರೆ.

Translate »