ಮೇನಲ್ಲಿ ಶ್ರೀರಂಗಪಟ್ಟಣ-ಗುಡ್ಡೆಹೊಸೂರು  ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭ
ಕೊಡಗು

ಮೇನಲ್ಲಿ ಶ್ರೀರಂಗಪಟ್ಟಣ-ಗುಡ್ಡೆಹೊಸೂರು ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭ

February 6, 2022

ಮಡಿಕೇರಿ, ಫೆ.5- ಶ್ರೀರಂಗಪಟ್ಟಣ-ಗುಡ್ಡೆಹೊಸೂರು ನಡುವೆ 4 ಸಾವಿರ ಕೋಟಿ ರೂ. ವೆಚ್ಚ ದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಾಗಲಿದ್ದು, ಮೇ ತಿಂಗಳಿನಿಂದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 4 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿ ಎರಡೂವರೆ ವರ್ಷ ಗಳಲ್ಲಿ ಸಂಪೂರ್ಣ ಮುಕ್ತಾಯವಾಗಲಿದೆ. ಎರಡು ಪ್ಯಾಕೇಜ್‍ಗಳ ಮೂಲಕ ನಿರ್ಮಾಣ ಕಾಮಗಾರಿ ನಡೆಯಲಿದ್ದು, ಶ್ರೀರಂಗಪಟ್ಟಣ ದಿಂದ ಪಿರಿಯಾಪಟ್ಟಣದವರೆಗೆ ಪ್ಯಾಕೇಜ್-3 ಹಾಗೂ ಪಿರಿಯಾಪಟ್ಟಣದಿಂದ ಗುಡ್ಡೆ ಹೊಸೂರುವರೆಗೆ ಪ್ಯಾಕೇಜ್-2ರ ಅಡಿ ಯಲ್ಲಿ ನಿರ್ಮಾಣ ಕಾರ್ಯ ನಡೆಯಲಿದೆ. ಈಗಾಗಲೇ ಟೆಂಡರ್ ಕರೆದಿದ್ದು, ಪ್ರಕ್ರಿಯೆ ಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.

ಈಗಾಗಲೇ ಕೆಪಿಟಿಸಿಎಲ್, ಪವರ್ ಗ್ರಿಡ್, ಚೆಸ್ಕಾಂ, ಅರಣ್ಯ ಇಲಾಖೆ, ಕಂದಾಯ, ಸಣ್ಣ ನೀರಾವರಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮುಂದಿನ ಒಂದು ತಿಂಗಳ ಒಳಗೆ ಕಾಮ ಗಾರಿಗೆ ಪೂರ್ವ ತಯಾರಿ ಮಾಡಿಕೊಳ್ಳು ವಂತೆ ಸೂಚಿಸಲಾಗಿದೆ. ಭೂ ಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ 4 ವರ್ಷ ಗಳ ಮಾರುಕಟ್ಟೆ ದರ ಆಧರಿಸಿ 3 ಪಟ್ಟು ಹೆಚ್ಚು ಪರಿಹಾರ ನೀಡಲು ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರತಾಪ್ ಸಿಂಹ ಮಾಹಿತಿ ನೀಡಿದರು.
ಗುಡ್ಡೆಹೊಸೂರುವಿನಿಂದ ಮಡಿಕೇರಿ-ಸಂಪಾಜೆ-ಮಾಣಿಯವರೆಗೆ ರಸ್ತೆಯ ಅಗಲೀಕರಣ ಮಾಡಲಾಗುತ್ತದೆ. ಎನ್.ಹೆಚ್. 275 ಅನ್ನು ಮಾಣಿಯ ಎನ್.ಹೆಚ್. 75ಗೆ ಜೋಡಿಸಲಾಗುತ್ತದೆ. ಮಡಿಕೇರಿಯಿಂದ ಗುಡ್ಡಗಾಡು ರಸ್ತೆ ಆರಂಭವಾಗುವ ಕಾರಣ ಈಗಿರುವ ರಸ್ತೆಯನ್ನೇ ಅಗಲೀಕರಣದ ಮೂಲಕ ಮೇಲ್ದರ್ಜೆಗೇರಿಸಲಾಗುತ್ತದೆ. ಸುಂಟಿಕೊಪ್ಪದಲ್ಲಿ ಬೈಪಾಸ್ ರಸ್ತೆ ನಿರ್ಮಾ ಣದ ಕುರಿತು ಮುಂದಿನ ದಿನಗಳಲ್ಲಿ ಸಭೆ ನಡೆಸಿ ನಿರ್ಧಾರ ಮಾಡಲಾಗುತ್ತದೆ. ಎಲ್ಲಿಯೂ ಕೂಡ ಪರಿಸರಕ್ಕೆ ಹಾನಿಯಾಗದಂತೆ ನೋಡಿ ಕೊಳ್ಳಲಾಗುತ್ತದೆ. ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದು ಭರವಸೆ ನೀಡಿದರು.

ರೈಲು ಮಾರ್ಗಕ್ಕೆ ಬದ್ಧ: ಮೈಸೂರು ಕುಶಾಲ ನಗರ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ 1854 ಕೋಟಿ ರೂ. ಅಂದಾಜು ವೆಚ್ಚ ಮಾಡ ಲಾಗಿದ್ದು, ಅಂತಿಮ ಹಂತದ ಯೋಜನಾ ವರದಿ ತಯಾರಾಗುತ್ತಿದೆ ಎಂದು ಮಾಹಿತಿ ನೀಡಿದರು. ರಾಜ್ಯ ಸರ್ಕಾರದಿಂದ ಶೇ.50ರ ಯೋಜನಾ ವೆಚ್ಚ ಮತ್ತು ಭೂಸ್ವಾಧೀನ ಪ್ರಕ್ರಿಯೆ ಕಾರ್ಯಗಳು ಬಾಕಿಯಿದೆ. ರಾಜ್ಯ ಸರ್ಕಾರ ತ್ವರಿತಗತಿಯಲ್ಲಿ ಕಡತ ವಿಲೇ ವಾರಿ ಮಾಡಿದ್ದೇ ಆದಲ್ಲಿ ರೈಲು ಯೋಜನೆ ಕೂಡ ಬಿರುಸು ಪಡೆಯಲಿದೆ ಎಂದು ಹೇಳಿದರು. ಕುಶಾಲನಗರದವರೆಗೆ ರೈಲು ಮಾರ್ಗ ಯೋಜನೆಗೆ ಬದ್ಧನಾಗಿದ್ದೇನೆ. ಈ ರೈಲ್ವೇ ಮಾರ್ಗವನ್ನು ಕೇರಳಕ್ಕೆ ಲಿಂಕ್ ಮಾಡುವುದಿಲ್ಲ ಎಂದು ಹೇಳಿದರಲ್ಲದೇ, ಮೈಸೂರು-ಕುಶಾಲನಗರ ರೈಲು ಮಾರ್ಗ ಯೋಜನೆ ಜಾರಿ ಖಂಡಿತಾ ಎಂದು ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದರು.

ಹಕ್ಕು ಕಸಿಯಲ್ಲ: ಕೊಡಗಿನಲ್ಲಿ ಕೋವಿ ಹಕ್ಕಿನ ವಿವಾದದ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಕೋವಿ ಹಕ್ಕನ್ನು ಬ್ರಿಟಿಷರ ಕಾಲದಲ್ಲಿಯೇ ವಿಶೇಷವಾದ ಹಕ್ಕಾಗಿ ನೀಡಲಾಗಿದೆ. ತಾನು ಕೂಡ ಅದರ ಪರ ವಾಗಿಯೇ ಇರುತ್ತೇನೆ ಎಂದು ಭರವಸೆ ನೀಡಿ ದರು. ಕನ್ನಡನಾಡಿಗೆ ಕೊಡಗಿನ ಜಿಲ್ಲೆ, ಅನ್ನ, ನೀರು, ನೆರಳು ನೀಡಿದೆ. ರಾಜ್ಯದ ಶೇ.50 ರಷ್ಟು ಮಂದಿ ಕಾವೇರಿ ನೀರನ್ನು ಅವಲಂ ಬಿಸಿದ್ದಾರೆ. ಕೋವಿ ಹಕ್ಕಿನ ಬಗ್ಗೆ ಯಾವುದೇ ತಕರಾರು ಇಲ್ಲ. ಕೊಡಗಿನ ಜನತೆಯ ಕೋವಿ ಹಕ್ಕು ಕಸಿಯುವ ಪ್ರಶ್ನೆಯೇ ಇಲ್ಲ ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ಉಪಸ್ಥಿತರಿದ್ದರು.

Translate »