ಪಿಡಿಓ ವಿರುದ್ಧ ಅಗಸರಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಮಂಡ್ಯ

ಪಿಡಿಓ ವಿರುದ್ಧ ಅಗಸರಹಳ್ಳಿ ಗ್ರಾಮಸ್ಥರ ಪ್ರತಿಭಟನೆ

February 6, 2022

ಕೆ.ಆರ್.ಪೇಟೆ, ಫೆ.5-ಮೀನು ಸಾಕಾ ಣಿಕೆಗೆ ಈಗಾಗಲೇ ನಿಯಮಾನುಸಾರ ಹರಾಜಾಗಿರುವ ಅಗಸರಹಳ್ಳಿ ಕೆರೆಯನ್ನು ಮರು ಹರಾಜಿಗೆ ಒಳಪಡಿಸಿರುವ ಪಿಡಿಓ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ತಾಲೂಕಿನ ಅಗಸರಹಳ್ಳಿ ಗ್ರಾಮಸ್ಥರು ತಾಲೂಕು ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಅಗಸರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ದೇವರಾಜು ಮಾತನಾಡಿ, ತಾಲೂಕಿನ ಮುರು ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಅಗಸರಹಳ್ಳಿ ಕೆರೆಯಲ್ಲಿ ಅಗಸರಹಳ್ಳಿ ಗ್ರಾಮದ ವೆಂಕಟೇಶ್ ಬಿನ್ ವೆಂಕಟೇಗೌಡ ಅವರಿಗೆ 2016 ರ ಜ. 22ರಲ್ಲಿ ಹರಾಜು ಮೂಲಕ 5 ವರ್ಷಗಳ ಅವಧಿಗೆ ಮೀನು ಸಾಕಾಣಿಕೆ ಹಕ್ಕನ್ನು ನೀಡಲಾಗಿತ್ತು. ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಮೀನುಗಳ ಹಿಡುವಳಿ ಮಾಡಲು ಸಾಧ್ಯ ವಾಗದ ಕಾರಣ ರಾಜ್ಯ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ನಿರ್ದೇ ಶಕರು 2021ರ ಜೂ.30ಕ್ಕೆ ಮುಕ್ತಾಯವಾಗು ತ್ತಿರುವ ಕೆರೆ, ಜಲಾಶಯಗಳ ಮೀನು ಗಾರಿಕೆಯ ಗುತ್ತಿಗೆಯ ಅವಧಿಯನ್ನು ಗುತ್ತಿಗೆ ಮೊತ್ತಕ್ಕೆ ನಿಯಮಾನುಸಾರ ಶೇ.5ರಷ್ಟು ಹೆಚ್ಚಿಸಿ 2 ವರ್ಷಕ್ಕೆ ವಿಸ್ತರಿಸು ವಂತೆ ಆದೇಶಿಸಿದ್ದರು. ಇದರನ್ವಯ ಮುರು ಕನಹಳ್ಳಿ ಗ್ರಾಮ ಪಂಚಾಯಿತಿಯು ಮೀನು ಸಾಕಾಣಿಕೆದಾರ ವೆಂಕಟೇಶ್ ಅವರ ಅರ್ಜಿ ಪರಿಶೀಲಿಸಿ ಕೆರೆಯ ಮೀನು ಸಾಕಾಣಿಕೆಯ ಅವಧಿಯನ್ನು 2 ವರ್ಷಗಳ(2023ರ ಜ.8) ವರೆಗೆ ವಿಸ್ತರಿಸಿ ಹೆಚ್ಚುವರಿ ಹಣ ಕಟ್ಟಿಸಿಕೊಂಡಿ ದ್ದರು. ಕೆರೆ ಹರಾಜು ಪಡೆದ ವೆಂಕಟೇಶ್ ಸುಮಾರು 6 ಲಕ್ಷ ವ್ಯಯಿಸಿ ಕೆರೆಗೆ ಮೀನು ಮರಿಗಳನ್ನು ಬಿಡಿಸಿ ಸಾಕಾಣಿಕೆ ಆರಂಭಿಸಿ ದ್ದಾರೆ. ಆದರೆ ನಿಯಮಾನುಸಾರ ಗುತ್ತಿಗೆ ಅವಧಿ ಜನವರಿ 2023 ರವರೆಗಿದ್ದರೂ ಸಹ ಲಂಚ ನೀಡಲಿಲ್ಲ ಎನ್ನುವ ಕಾರಣಕ್ಕೆ ಹಿಂದಿನ ಆದೇಶವನ್ನು ರದ್ದು ಪಡಿಸಿ ಮುರುಕನಹಳ್ಳಿ ಗ್ರಾಮ ಪಂಚಾಯತಿ ಪಿಡಿಓ ಗೀತಾ ಅವರು 2022ರ ಫೆ.7ರಂದು ಕೆರೆಯ ಬಹಿರಂಗ ಹರಾಜು ಪ್ರಕಟಣೆ ಹೊರಡಿಸಿ ಸರ್ಕಾರಿ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿ ದ್ದಾರೆ. ಕೂಡಲೇ ವಿರುದ್ಧ ಕ್ರಮ ಜರುಗಿಸ ಬೇಕು ಹಾಗೂ ಫೆ.7 ರಂದು ನಿಗದಿಯಾ ಗಿರುವ ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ತಾಪಂ ಸಹಾಯಕ ನಿರ್ದೇಶಕ ಸಂದೀಪ್ ಅವರಿಗೆ ಮನವಿ ಪತ್ರ ಸಲಿಸಲಾಯಿತು. ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ಎ.ಎನ್.ದೇವರಾಜು, ಮೀನು ಕೃಷಿಕ ವೆಂಕಟೇಶ್, ಅಗಸರಹಳ್ಳಿ ಗ್ರಾಮದ ಮುಖಂಡರಾದ ಎ.ಆರ್.ವೆಂಕಟರಾಮು, ಯುವ ಮುಖಂಡರಾದ ಎ.ಎಲ್.ಯತೀಶ್, ಎ.ಹೆಚ್.ಮಹದೇವೇಗೌಡ, ಎ.ಆರ್. ಮಹೇಶ್, ಎ.ಆರ್.ಮಂಜುನಾಥ್, ಸಣ್ಣತಮ್ಮೇ ಗೌಡ, ವೆಂಕಟೇಶ್, ಕುಮಾರ್, ಸುರೇಶ್, ಎಸ್.ಲೋಕೇಶ್, ಎ.ಹೆಚ್.ರಮೇಶ್ ಸೇರಿ ದಂತೆ ಇತರರು ಪ್ರತಿಭಟನೆಯಲ್ಲಿದ್ದರು.

Translate »