ರಾಸಾಯನಿಕ ಸೋರಿಕೆಯಿಂದ ಬೆಳೆ ನಾಶ ಪ್ರಕರಣ ಸ್ಥಳ ಪರಿಶೀಲನೆ ನಡೆಸಿದ ಶಾಸಕ ಎಂ.ಶ್ರೀನಿವಾಸ್
ಮಂಡ್ಯ

ರಾಸಾಯನಿಕ ಸೋರಿಕೆಯಿಂದ ಬೆಳೆ ನಾಶ ಪ್ರಕರಣ ಸ್ಥಳ ಪರಿಶೀಲನೆ ನಡೆಸಿದ ಶಾಸಕ ಎಂ.ಶ್ರೀನಿವಾಸ್

February 6, 2022

ಮಂಡ್ಯ,ಫೆ.5(ಮೋಹನ್‍ರಾಜ್)- ತಾಲೂಕಿನ ಬಸರಾಳು ಹೋಬಳಿಯ ಕಾರೇಕಟ್ಟೆ ಗ್ರಾಮದ ಸಮೀಪ ಕೀರ್ತಿ ಇಂಡ ಸ್ಟ್ರೀಸ್ ಹೆಸರಿನ ರಾಸಾಯನಿಕಗಳ ತಯಾ ರಿಕಾ ಕಾರ್ಖಾನೆಯಲ್ಲಿ ಸಲ್ಫೂರಿಕ್ ಆಸಿಡ್ ಸೋರಿಕೆಯಿಂದ ಉಂಟಾದ ದುರಂತದಿಂ ದಾಗಿ ಸುತ್ತಮುತ್ತಲಿನ 10 ಎಕರೆ ಪ್ರದೇಶ ದಲ್ಲಿ ಬೆಳೆ ನಾಶವಾಗಿದ್ದ ಹಿನ್ನೆಲೆಯಲ್ಲಿ ಶಾಸಕ ಎಂ.ಶ್ರೀನಿವಾಸ್ ಅಧಿಕಾರಿಗಳೊಂ ದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಮಾತನಾಡಿದ ಅವರು, ಕಾರ್ಖಾ ನೆಯ ರಾಸಾಯನಿಕ ಸೋರಿಕೆಯಿಂದಾಗಿ ತೆಂಗು, ಟೊಮ್ಯಾಟೋ, ರಾಗಿ ಮುಂತಾದ ಬೆಳೆ ನಾಶವಾಗಿವೆ. ಇದಕ್ಕೆ ಹೊಂದಿ ಕೊಂಡಂತಿರುವ ಬಾಳೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಬಹುತೇಕ ಸತ್ಯ ಸಂಪತ್ತು ವಿನಾಶವಾಗಿವೆ. ಸುತ್ತಮುತ್ತಲ ಗ್ರಾಮಗಳ ಬಹುತೇಕ ಜನರು ಉಸಿರಾಟ ಸಮಸ್ಯೆ, ಚರ್ಮ ಸಂಬಂಧಿ ಸಮಸ್ಯೆಯಿಂದ ಬಳಲು ತ್ತಿದ್ದಾರೆ. ಪರಿಸರ ಬಹುತೇಕ ಸುಟ್ಟು ಸ್ತಬ್ಧ ವಾಗಿದ್ದು, ಕಾರ್ಖಾನೆಯ ವಿಷಕಾರಿ ತ್ಯಾಜ್ಯಕ್ಕೆ ಹತ್ತಿರದ ಕಾರೇಕಟ್ಟೆ ಕೆರೆಗೆ ಸಂಪರ್ಕ ಕಲ್ಪಿಸಿರುವುದರಿಂದ ಆ ನೀರನ್ನು ಸೇವಿಸಿದ ವರೂ ಸಹ ಆರೋಗ್ಯ ಸಮಸ್ಯೆಯಿಂದ ಬಳತ್ತಿದ್ದಾರೆ. ಈಗಾಗಲೇ ಎಸಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ರಚಿಸಿದ ತಹಸೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಗಳ ಸಮಿತಿ ಅಧ್ಯಯನ ನಡೆಸಿದ್ದು, ಈಗಾಗಲೇ ಜಿಲ್ಲಾಧಿಕಾರಿಗೆ ವರದಿ ನೀಡಿದ್ದಾರೆ ಎಂದು ಹೇಳಿದರು.

ಸಮಿತಿ ನೀಡಿರುವ ವರದಿಯನ್ನಾಧರಿಸಿ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳ ಬೇಕು. ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಧಿಕಾರಿಯನ್ನು ಒತ್ತಾಯಿಸಿದ ಶಾಸಕರು, ಬೆಳೆ ನಷ್ಟವಾಗಿರುವ ರೈತರಿಗೆ ಸೂಕ್ತ ಪರಿ ಹಾರ ನೀಡಬೇಕು. ಕಾರ್ಖಾನೆಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಈ ಭಾಗದ ಜನತೆ ಮನವಿ ಮಾಡಿದ್ದು, ತಕ್ಷಣ ಸ್ಥಳಾಂ ತರಿಸಬೇಕು. ಇದು ರಾಸಾಯನಿಕ ಉತ್ಪಾದ ನೆಗೆ ಸುರಕ್ಷಿತ ಸ್ಥಳವಲ್ಲ. ಇಲ್ಲೇ ಕಾರ್ಖಾನೆ ಇದ್ದರೆ ಜನ-ಜಾನುವಾರುಗಳಿಗೆ ಹಾನಿ ಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಫೆ.14ರಿಂದ ನಡೆಯುವ ವಿಧಾನ ಸಭಾ ಅಧಿವೇಶನದಲ್ಲಿ ಈ ಬಗ್ಗೆ ಗಮನ ಸೆಳೆಯುವು ದಾಗಿ ಅವರು ಭರವಸೆ ನೀಡಿದರು.
ಉಪ ವಿಭಾಗಾಧಿಕಾರಿ ಐಶ್ವರ್ಯ, ತಹಸೀ ಲ್ದಾರ್ ಚಂದ್ರಶೇಖರ ಶಂ.ಗಾಳಿ, ಕೃಷಿ ಇಲಾಖೆ ಅಧಿಕಾರಿ ಪ್ರತಿಮಾ, ತೋಟಗಾರಿಕೆ ಇಲಾಖೆ ಅಧಿಕಾರಿ ಡಾ.ಪುಷ್ಪಲತಾ, ಆರೋಗ್ಯ ಇಲಾಖೆಯ ಡಾ.ಜವರೇಗೌಡ, ಪಶು ಪಾಲನೆ, ಪೆÇಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಾರ್ಖಾನೆ ಮಾಲೀಕರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿ ಅಹವಾಲು ಆಲಿಸಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ತಿಮ್ಮೇಗೌಡ, ಮುಖಂಡರಾದ ಕೆಂಚನ ಹಳ್ಳಿ ಪುಟ್ಟಸ್ವಾಮಿ ಇತರರಿದ್ದರು.

Translate »