ಎಸ್‌ಎಸ್‌ಎಲ್‌ಸಿ ಫೇಲ್: ನೇಣು ಬಿಗಿದುಕೊಂಡು ಆತ್ಮಹತ್ಯೆ
ಮೈಸೂರು

ಎಸ್‌ಎಸ್‌ಎಲ್‌ಸಿ ಫೇಲ್: ನೇಣು ಬಿಗಿದುಕೊಂಡು ಆತ್ಮಹತ್ಯೆ

May 20, 2022

ಹನಗೋಡು, ಮೇ ೧೯(ಮಹೇಶ್)- ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ದುರಂತ ನಡೆದಿದೆ. ಇಲ್ಲಿಗೆ ಸಮೀ ಪದ ಭೂತಾಳೆ ಪೇಂಜಳ್ಳಿ ನಿವಾಸಿ ವಿಜಯ್ ಅವರ ಪುತ್ರ ಹಾಗೂ ನಾಗಪುರ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯ ಸಂಜಯ್‌ಕುಮಾರ್(೧೬) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ವಿವರ: ಗುರುವಾರ ರಾಜ್ಯಾದ್ಯಂತ ಎಸ್‌ಎಸ್ ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿತ್ತು. ಸಂಜಯ್‌ಕುಮಾರ್ ಕೂಡ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ವಿಶ್ವಾಸದಲ್ಲಿದ್ದ. ಆದರೆ ಇಂಗ್ಲಿಷ್‌ನಲ್ಲಿ ೨೫ ಅಂಕ ಹಾಗೂ ಸಮಾಜ ವಿಜ್ಞಾನದಲ್ಲಿ ೩೦ ಅಂಕ ಪಡೆದು ಅನುತ್ತೀರ್ಣನಾಗಿದ್ದ. ಈ ವಿಷಯ ಪೋಷಕರಿಗೆ ತಿಳಿದರೆ ಅವರು ಬೈಯ್ಯು ತ್ತಾರೆ ಎಂಬ ಭಯದಿಂದ ಸಂಜಯ್ ಇಂದು ಮಧ್ಯಾಹ್ನ ತಂದೆ, ತಾಯಿ ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ಮನೆ ಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿ ದ್ದಾನೆ. ಸಂಜಯ್ ತಂದೆ ತಾಯಿ ಕೆಲಸದಿಂದ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಹುಣ ಸೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಶವವನ್ನು ಹುಣಸೂರು ಸಾರ್ವ ಜನಿಕ ಆಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »