ಮೈಸೂರು ಜಿಲ್ಲೆಯಲ್ಲಿ ಶೇ.91.38ರಷ್ಟು ತೇರ್ಗಡೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಶೇ.91.38ರಷ್ಟು ತೇರ್ಗಡೆ

May 20, 2022

ಮೈಸೂರು, ಮೇ ೧೯(ಎಸ್‌ಬಿಡಿ)- ಮೈಸೂರು ಜಿಲ್ಲೆಗೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೧.೩೮ರಷ್ಟು ಫಲಿತಾಂಶ ಬಂದಿದೆ.ಜಿಲ್ಲೆಯಲ್ಲಿ ೨೦೨೧-೨೨ನೇ ಸಾಲಿನ ೧೬,೧೧೪ ಬಾಲಕರು ಹಾಗೂ ೧೬,೮೯೮ ಬಾಲಕಿಯರು ಸೇರಿ ಒಟ್ಟು ೩೩,೦೧೨ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಕೊರೊನಾ ಕಾರಣದಿಂದ ೮ ಹಾಗೂ ೯ನೇ ತರಗತಿಯಲ್ಲಿ ಸರಿಯಾಗಿ ಪರೀಕ್ಷೆ ನಡೆಯ ದಿದ್ದರೂ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವುದು ವಿಶೇಷ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ೨೦೨೦-೨೧ನೇ ಸಾಲಿನಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳನ್ನೂ ಉತ್ತೀರ್ಣಗೊಳಿ ಸಿದ ಕಾರಣ ಸಹಜವಾಗಿ ಶೇ.೧೦೦ ರಷ್ಟು ಫಲಿತಾಂಶ ಬಂದಿತ್ತು. ೨೦೧೯-೨೦ನೇ ಸಾಲಿನಲ್ಲಿ ಶೇ.೭೪.೪೫ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದರು.

ಫಲಿತಾಂಶದಲ್ಲಿ ಶೇ.೯೧.೩೮ರಷ್ಟು ಸಾಧನೆಯಾಗಿರುವುದು ಗಮನಾರ್ಹ. ಪರೀಕ್ಷೆಗೆ ಹಾಜ ರಾಗಿದ್ದ ೧೬,೧೭೮ ನಗರ ಪ್ರದೇಶದ ವಿದ್ಯಾರ್ಥಿಗಳಲ್ಲಿ ೧೪,೪೮೫(ಶೇ.೮೯.೫೪) ಹಾಗೂ ಗ್ರಾಮಿಣ ಪ್ರದೇಶದ ೧೯,೯೫೦ರಲ್ಲಿ ೧೮,೫೨೭(ಶೇ.೯೨.೮೭) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ ೧೮,೦೨೮ರಲ್ಲಿ ೧೬,೮೯೮(ಶೇ.೯೩.೭೩) ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದಿದ್ದ ೧೮,೧೦೦ ಬಾಲಕರಲ್ಲಿ ೧೬,೧೧೪(ಶೇ.೮೯.೦೨) ಮಂದಿ ಉತ್ತೀರ್ಣರಾಗಿದ್ದಾರೆ.

ಜಿಲ್ಲೆಯ ೨೭೬ ಸರ್ಕಾರಿ ಶಾಲೆಗಳ ೧೬,೧೨೫ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ ೧೪,೪೯೩ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.೮೯.೮೮ ಫಲಿತಾಂಶ ಬಂದಿದೆ. ೧೩೪ ಅನುದಾನಿತ ಶಾಲೆಗಳ ೭,೭೪೭ ವಿದ್ಯಾರ್ಥಿಗಳಲ್ಲಿ ೬,೯೯೭(ಶೇ.೯೦.೩೨) ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳ ೧೨,೨೫೬ರಲ್ಲಿ ೧೧,೫೨೨(ಶೇ.೯೪.೦೧) ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

೬೨೦ಕ್ಕಿಂತ ಹೆಚ್ಚು ಅಂಕ: ೬೨೫ಕ್ಕೆ ೬೨೫ ಅಂಕ ಗಳಿಸಿರುವ ಆರು ವಿದ್ಯಾರ್ಥಿನಿಯರಲ್ಲಿ ಖಾಸಗಿ ಶಾಲೆಗಳ ನಾಲ್ವರು, ಸರ್ಕಾರಿ ಹಾಗೂ ಅನುದಾನಿತ ಶಾಲೆಯ ತಲಾ ಓರ್ವ ವಿದ್ಯಾರ್ಥಿನಿ ಇದ್ದಾರೆ. ಅನುದಾನಿತ ಶಾಲೆಗಳ ನಾಲ್ವರು ಹಾಗೂ ಖಾಸಗಿ ಶಾಲೆಗಳ ೯ ಸೇರಿ ೧೩ ವಿದ್ಯಾರ್ಥಿಗಳು ೬೨೪, ಸರ್ಕಾರಿ ೩, ಅನುದಾನಿತ ೮ ಹಾಗೂ ಖಾಸಗಿ ಶಾಲೆಯ ೧೨ ಸೇರಿ ೨೩ ವಿದ್ಯಾರ್ಥಿಗಳು ೬೨೩, ಸರ್ಕಾರಿ ೧, ಅನುದಾನಿತ ೯ ಹಾಗೂ ಖಾಸಗಿ ಶಾಲೆಯ ೧೩ ಸೇರಿ ೨೩ ವಿದ್ಯಾರ್ಥಿಗಳು ೬೨೨, ಅನುದಾನಿತ ಶಾಲೆಯ ೬ ಹಾಗೂ ಖಾಸಗಿ ಶಾಲೆಯ ೧೬ ಸೇರಿ ೨೨ ವಿದ್ಯಾರ್ಥಿಗಳು ೬೨೧, ಸರ್ಕಾರಿ ೧, ಅನುದಾನಿತ ಶಾಲೆಯ ೧೫ ಹಾಗೂ ಖಾಸಗಿ ಶಾಲೆಗಳ ೧೭ ಸೇರಿ ಒಟ್ಟು ೩೩ ವಿದ್ಯಾರ್ಥಿಗಳು ೬೨೦ ಅಂಕಗಳೊAದಿಗೆ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳ ಗ್ರೇಡ್: ಒಟ್ಟು ವಿದ್ಯಾರ್ಥಿಗಳಲ್ಲಿ ೪,೪೭೪ `ಎ+’, ೮,೧೧೩ `ಎ’, ೮,೪೧೫ `ಬಿ+’, ೭,೧೪೧ `ಬಿ’, ೪,೧೯೪ `ಸಿ+’ ಹಾಗೂ ೬೭೫ `ಸಿ’ ಗ್ರೇಡ್‌ನಲ್ಲಿ ಉತ್ತೀರ್ಣರಾಗಿದ್ದಾರೆ.

ಈ ಬಾರಿ ಜಿಲ್ಲೆಯಲ್ಲಿ ಯಾವುದೇ ಶಾಲೆ ಶೂನ್ಯ ಫಲಿತಾಂಶಕ್ಕೆ ಗುರಿಯಾಗಿಲ್ಲ. ಬದಲಾಗಿ ೩೪ ಸರ್ಕಾರಿ, ೯ ಅನುದಾನಿತ ಹಾಗೂ ೭೪ ಖಾಸಗಿ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ ದಾಖಲಿಸಿರುವುದು ಗಮನಾರ್ಹ. ಇನ್ನು ಪರೀಕ್ಷೆಗೆ ಹಾಜರಾಗಿದ್ದ ೩೧೬ ವಿಶೇಷ ಅಗತ್ಯತೆವುಳ್ಳ ಮಕ್ಕಳಲ್ಲಿ ೨೫೫ ಮಕ್ಕಳು(ಶೇ.೮೦.೬೯) ಉತ್ತೀರ್ಣವಾಗಿ, ತಮ್ಮ ಕಲಿಕಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು.

ಫಲಿತಾಂಶ ಸಾಧನೆಗೆ ಶಿಕ್ಷಕರು, ಪೋಷಕರ ಸಹಕಾರ ಕಾರಣ: ಡಿಡಿಪಿಐ ಅರಸ್
ಮೈಸೂರು, ಮೇ ೧೯(ಎಸ್‌ಬಿಡಿ)- ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಉತ್ತಮ ಸಾಧನೆಗೆ ಶಿಕ್ಷಕರು ಹಾಗೂ ಪೋಷಕರ ಸಹಕಾರ ಮುಖ್ಯವಾಗಿದೆ ಎಂದು ಡಿಡಿಪಿಐ ರಾಮಚಂದ್ರರಾಜೇ ಅರಸ್ ಹೇಳಿದರು.

ಮೈಸೂರಿನ ಅವರ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದ ವಿವರ ನೀಡಿದ ಅವರು, ಎಲ್ಲರ ಪರಿಶ್ರಮದಿಂದ ನಿರೀಕ್ಷಿತ ಫಲಿತಾಂಶ ಬಂದಿರುವುದರಿAದ ಸಂತಸವಾಗಿದೆ. ಶಿಕ್ಷಕರು, ಮುಖ್ಯಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಈ ಸಾಧನೆಯ ಕೀರ್ತಿ ಸಲ್ಲುತ್ತದೆ. ನಂತರದಲ್ಲಿ ಇಲಾಖೆ ಅಧಿಕಾರಿಗಳ ಪರಿಶ್ರಮಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು. ಈ ಬಾರಿ ಉತ್ತಮ ಸಾಧನೆ ಗುರಿಯೊಂ ದಿಗೆ ೫೩ಕ್ಕಿಂತ ಹೆಚ್ಚು ಶೈಕ್ಷಣ ಕ ಕಾರ್ಯಕ್ರಮ ಗಳನ್ನು ಅನುಷ್ಠಾನಕ್ಕೆ ತಂದು ಸರಣ ಸಭೆ ನಡೆಸಲಾಗಿತ್ತು. ಮುಖ್ಯ ಪರೀಕ್ಷೆ ಪೂರ್ವ ಸಿದ್ಧತೆಗಾಗಿ ಎಸ್‌ಎಸ್‌ಎಲ್‌ಸಿ ಮಂಡಳಿ ವತಿಯಿಂದ ೨ ಪತ್ರಿಕೆಗಳ ಜೊತೆಗೆ ಜಿಲ್ಲಾ ಮಟ್ಟದಲ್ಲಿ ೪ ಹಾಗೂ ತಾಲೂಕು ಮಟ್ಟದ ೨ ಸೇರಿದಂತೆ ಒಟ್ಟು ೮ ಪತ್ರಿಕೆಗಳಿಗೆ ಈ ಬಾರಿ ಮಕ್ಕಳು ಉತ್ತರಿಸುವ ಮೂಲಕ ಪರೀಕ್ಷೆಗೆ ಸಿದ್ಧರಾಗಿದ್ದರು. ರಾತ್ರಿ ಶಾಲೆಯನ್ನೂ ನಡೆಸಲಾಗಿತ್ತು. ಶಿಕ್ಷಕರು ಇಲಾಖೆ ನೀಡಿದ ಗುರಿ ಮೀರಿ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು. ಮರ‍್ನಾಲ್ಕು ವರ್ಷಗಳ ಹಿಂದೆ ದಾಖಲಾತಿ ಯಿಲ್ಲದೆ ಮುಚ್ಚಿದ್ದ ೨ ಶಾಲೆಗಳ ಪುನಾರಂಭಕ್ಕೆ ಮನವಿ ಸಲ್ಲಿಸಿದ್ದಾರೆ. ಸಿದ್ದರಾಮನಹುಂಡಿ ಶಾಲೆಯಲ್ಲಿ ದಾಖಲಾತಿ ಸಿಗದೆ ತರಗತಿ ಹೆಚ್ಚಿಸಲು ಕರೆ ಮಾಡಿ ಆಗ್ರಹಿಸುತ್ತಿದ್ದಾರೆ. ಒಟ್ಟಾರೆ ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಮುಂದಾಗುತ್ತಿದ್ದಾರೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಮತ್ತಷ್ಟು ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯಿಸಿದರು.

ಜಿಲ್ಲಾವಾರು ಫಲಿತಾಂಶ
ಹಾಸನ- ಶೇ.೯೫.೬೦
ಮಂಡ್ಯ- ಶೇ.೯೪.೭೦
ಚಾ.ನಗರ- ಶೇ.೯೨.೧೩
ಕೊಡಗು- ಶೇ.೯೧.೪೪

ಪಿರಿಯಾಪಟ್ಟಣಕ್ಕೆ ಅಗ್ರಸ್ಥಾನ
ಮೈಸೂರು: ಜಿಲ್ಲೆಯಲ್ಲಿ ಪಿರಿಯಾಪಟ್ಟಣ ತಾಲೂಕು ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾಗಿದ್ದ ೩೦೦೬ರಲ್ಲಿ ೨,೮೪೫ ವಿರ್ದ್ಯಾರ್ಥಿಗಳು ಪಾಸ್ ಆಗಿದ್ದು, ಇದರೊಂದಿಗೆ ಶೇ.೯೪.೬೪ರಷ್ಟು ಸಾಧನೆಯಾಗಿದೆ. ಹೆಚ್.ಡಿ.ಕೋಟೆ ಶೇ.೯೩.೭೭ರೊಂದಿಗೆ ದ್ವಿತೀಯ, ಹುಣಸೂರು ಶೇ.೯೩.೬೪ರೊಂದಿಗೆ ತೃತೀಯ ಸ್ಥಾನದಲ್ಲಿವೆ. ಮೈಸೂರು ಗ್ರಾಮಾಂ ತರ ೯೩.೨೭, ನಂಜನಗೂಡು ಶೇ.೯೨.೧೦, ತಿ.ನರಸೀಪುರ ಶೇ.೯೧.೦೩, ಮೈಸೂರು ಉತ್ತರ ವಲಯ ಶೇ.೮೯.೦೭, ದಕ್ಷಿಣ ವಲಯ ಶೇ.೮೮.೬೭, ಕೆ.ಆರ್.ನಗರ ತಾಲೂಕು ಶೇ.೮೭.೩೫ರಷ್ಟು ಪಡೆದಿವೆ.

Translate »