ಮೈಸೂರಿನ 6 ಮಂದಿ 625 ಅಂಕ ಸಾಧನೆ
ಮೈಸೂರು

ಮೈಸೂರಿನ 6 ಮಂದಿ 625 ಅಂಕ ಸಾಧನೆ

May 20, 2022

ಮೈಸೂರು, ಮೇ ೧೯(ಎಂಟಿವೈ)- ಮೈಸೂರು ಜಿಲ್ಲೆಯ ಆರು ವಿದ್ಯಾರ್ಥಿನಿಯರು ೬೨೫ಕ್ಕೆ ೬೨೫ ಅಂಕ ಪಡೆ ಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ರಾಜ್ಯದಲ್ಲಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಲ್ಲಿ ೧೪೫ ವಿದ್ಯಾರ್ಥಿಗಳು ೬೨೫ಕ್ಕೆ ೬೨೫ ಅಂಕ ಪಡೆದು ಸಾಧನೆ ಮಾಡಿದ್ದು, ಆ ಸಾಧಕರ ಸಾಲಿಗೆ ಮೈಸೂರಿನ ೬ ವಿದ್ಯಾರ್ಥಿನಿಯರು ಸೇರಿದ್ದಾರೆ. ಅದರಲ್ಲೂ ಖಾಸಗಿ ಶಾಲೆಗಳಿಗೆ ಸೆÀಡ್ಡು ಹೊಡೆದಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಕೂಡ ೬೨೫ಕ್ಕೆ ೬೨೫ ಅಂಕ ಪಡೆಯುವ ಮೂಲಕ ಸರ್ಕಾರಿ ಶಾಲೆಗಳತ್ತ ಜನರು ದೃಷ್ಟಿ ಹಾಯಿ ಸುವಂತೆ ಮಾಡಿದ್ದಾರೆ. ಜಿಲ್ಲೆಯ ಆರು ಮಂದಿ ಟಾಪರ್‌ಗಳಿಗೂ ಅವರ ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಹಾಗೂ ಸಂಬAಧಿ ಗಳು ಅಭಿನಂದಿಸುವ ಮೂಲಕ ಸಾಧಕ ವಿದ್ಯಾರ್ಥಿ ಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದ್ದಾರೆ.

ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿ: ಮೈಸೂ ರಿನ ಜಾಕಿ ಕ್ವಾಟ್ರಸ್‌ನಲ್ಲಿರುವ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿ ಎಂ.ಜಿ.ಏಕ್ತಾ ೬೨೫ ಅಂಕ ಪಡೆದು ಗಮನ ಸೆಳೆದಿದ್ದಾರೆ. ಈಕೆ ಮೈಸೂರಿನ ಸಿದ್ದಾರ್ಥನಗರದ ನಿವಾಸಿ ಎಲ್‌ಐಸಿ ಏಜೆಂಟ್ ಎಂ.ಸಿ.ಗಣಪತಿ ಹಾಗೂ ಎಂ.ಎಸ್.ಗAಗಮ್ಮ ದಂಪತಿ ಪುತ್ರಿ. ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಯಾಗಿರುವ ಆದರ್ಶ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಏಕ್ತಾ ಪ್ರತಿಭಾನ್ವಿತ ವಿದ್ಯಾರ್ಥಿ ನಿಯಾಗಿದ್ದು ಇದೀಗ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ರೈತನ ಮಗಳ ಸಾಧನೆ: ತಿ.ನರಸೀಪುರ ತಾಲೂಕು ಬನ್ನೂ ರಿನ ಬಿಜಿಎಸ್ ಶಾಲೆಯ ವಿದ್ಯಾರ್ಥಿನಿ ಬಿ.ಎಂ.ದಿಶಾ ೬೨೫ಕ್ಕೆ ೬೨೫ ಅಂಕ ಪಡೆದ ಗ್ರಾಮೀಣ ವಿದ್ಯಾರ್ಥಿನಿ. ಬನ್ನೂ ರಿನ ಬವನಹಳ್ಳಿ ಗ್ರಾಮದ ಮಹೇಶ್ ಹಾಗೂ ಲಕ್ಷಿö್ಮÃ ದಂಪತಿ ಪುತ್ರಿ ಬಿ.ಎಂ.ದಿಶಾ ಕೃಷಿಕ ಕುಟುಂಬದಿAದ ಬಂದವರಾಗಿದ್ದಾರೆ. ಈಕೆ ಟ್ಯೂಷನ್‌ಗೆ ಹೋಗದೆ ಸಾಧನೆ ಮಾಡಿರುವ ವಿದ್ಯಾರ್ಥಿನಿ. ಶಾಲೆಯ ಮುಖ್ಯ ಶಿಕ್ಷಕಿ ಪಲ್ಲವಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ದಿಶಾ ಹಾಗೂ ಆಕೆಯ ಪೋಷಕರಿಗೆ ಸನ್ಮಾನಿಸಿ, ಉತ್ತೇಜಿಸಿದ್ದಾರೆ.

ಡಾಕ್ಟರ್ ಆಗಬೇಕೆಂಬ ಹಂಬಲ: ಫಲಿತಾಂಶದಿAದ ಸಂತಸಗೊAಡಿರುವ ದಿಶಾ `ಮೈಸೂರು ಮಿತ್ರ’ನೊಂ ದಿಗೆ ಮಾತನಾಡಿ, ನನಗೆ ಪರೀಕ್ಷೆಯಲ್ಲಿ ೬೦೦ ಅಂಕ ಬರಬಹುದೆಂದು ನಿರೀಕ್ಷಿಸಿದ್ದೆ. ಪರೀಕ್ಷೆಯನ್ನು ಚೆನ್ನಾಗಿ ಬರೆದಿದ್ದರಿಂದ ಉತ್ತಮ ಅಂಕದೊAದಿಗೆ ಪಾಸಾಗುವ ಆತ್ಮವಿಶ್ವಾಸವಿತ್ತು. ಪೂರ್ಣ ಪ್ರಮಾಣದಲ್ಲಿ ಅಂಕ ಗಳಿಸಿ ದ್ದಕ್ಕೆ ಸಂತೋಷವಾಗಿದೆ. ನನ್ನ ಈ ಸಾಧನೆಗೆ ಪೋಷ ಕರು ಹಾಗೂ ಶಾಲೆಯ ಶಿಕ್ಷಕರು ನೀಡಿದ ಪ್ರೋತ್ಸಾಹವೇ ಕಾರಣ ಎಂದರು. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ೨ ವರ್ಷದಿಂದ ಸರಿಯಾದ ಶಿಕ್ಷಣ ದೊರೆತಿರಲಿಲ್ಲ. ಇಂತಹ ಸಂದರ್ಭದ ನಡುವೆಯೂ ಶಾಲೆಯ ಶಿಕ್ಷಕರು ವಿದ್ಯಾರ್ಥಿ ಗಳಿಗೆ ಉತ್ತಮ ಶಿಕ್ಷಣ ನೀಡಿ, ಪ್ರೋತ್ಸಾಹ ನೀಡಿದರು. ನಾನು ಮುಂದೆ ನೀಟ್ ಪರೀಕ್ಷೆಗೆ ಸಿದ್ಧನಾಗುತ್ತೇನೆ. ಮುಂದೆ ಡಾಕ್ಟರ್ ಆಗಬೇಕು ಎಂಬುದು ನನ್ನಾಸೆ ಎಂದರು.

ನAಜನಗೂಡಿನ ವಿದ್ಯಾರ್ಥಿನಿ: ನಂಜನಗೂಡು ಕಾರ್ಮೆಲ್ ಆಂಗ್ಲ ಮಾದ್ಯಮದ ಶಾಲೆಯ ವಿದ್ಯಾರ್ಥಿನಿ ಜಿ.ದೇವಿಕಾ ಸಹ ೬೨೫ ಅಂಕ ಪಡೆದಿದ್ದಾರೆ. ಕಡಕೊಳದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಗಣೇಶ್ ಹಾಗೂ ಎಸ್.ರೂಪ ದಂಪತಿ ಪುತ್ರಿ ದೇವಿಕಾ ಹೆಚ್ಚು ಅಂಕ ಗಳಿಸುವ ಮೂಲಕ ನಂಜನಗೂಡು ತಾಲೂಕಿಗೆ ಪ್ರಪ್ರಥಮ ಸಾಧನೆ ಮಾಡಿದ ವಿದ್ಯಾರ್ಥಿನಿ ಎನಿಸಿದ್ದಾರೆ. ಹೆಚ್ಚು ಅಂಕ ಗಳಿಸಿದ ಹಿನ್ನೆಲೆಯಲ್ಲಿ ನಂಜನಗೂಡಿನ ಬಿಇಓ ಸಿ.ಎನ್.ರಾಜು ಅವರು ದೇವಿಕಾ ನಿವಾಸಕ್ಕೆ ತೆರಳಿ ಸನ್ಮಾನಿಸುವ ಮೂಲಕ ಪ್ರೋತ್ಸಾಹ ನೀಡಿ, ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ವಿದ್ಯಾ ಶಾಲೆ: ಮೈಸೂರಿನ ಸದ್ವಿದ್ಯಾ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ೬೨೫ಕ್ಕೆ ೬೨೫ ಅಂಕ ಪಡೆದಿದ್ದಾರೆ. ಶಾಲೆಯ ಅಧಿತಿ ಹಾಗೂ ಯಶಸ್ವಿ ಅರಸ್ ಈ ಸಾಧನೆ ಮಾಡಿದ ವಿದ್ಯಾರ್ಥಿನಿಯರು. ಮೈಸೂರಿನ ವಿಶ್ವೇಶ್ವರನಗರದ ನಿವಾಸಿ, ಎಲ್‌ಐಸಿ ವಿಭಾಗೀಯ ವ್ಯವಸ್ಥಾಪಕರಾದ ಬಿ.ಎನ್.ಸಂಜೀವ್ ಹಾಗೂ ಕೆ.ಎಂ.ಕಲಾ ದಂಪತಿ ಪುತ್ರಿ ಅಧಿತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯಾಗಿದ್ದಾರೆ.

ಡಾಕ್ಟರ್ ಆಗಬೇಕು: ಆಧಿತಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ೬೨೫ ಅಂಕ ಗಳಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಈ ನನ್ನ ಸಾಧನೆಗೆ ಪ್ರೇರಣೆ ನೀಡಿದವರಿಗೆ ಎಷ್ಟು ಥ್ಯಾಂಕ್ಸ್ ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಪ್ರತಿದಿನ ಕನಿಷ್ಟ ೪ ಗಂಟೆಯಾದರೂ ಓದುತ್ತಿದ್ದೆ. ಶಾಲೆಯಲ್ಲಿ ಕಲಿತ್ತಿದ್ದರೊಂದಿಗೆ ಟ್ಯೂಷನ್‌ನಲ್ಲಿ ಹೇಳಿಕೊಟ್ಟಿದ್ದನ್ನು ಮನನ ಮಾಡಿಕೊಳ್ಳುತ್ತಿದ್ದೆ. ಇದರಿಂದ ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು. ಪರೀಕ್ಷೆ ಸಮೀಪಿಸುತ್ತಿದ್ದಂತೆ ನಿದ್ದೆಗೆಟ್ಟು ಓದಿದ ನಿದರ್ಶನವೂ ಇದೆ. ಆಗ ತಂದೆ, ತಾಯಿ, ಅಣ್ಣ ನನಗೆ ಆತ್ಮವಿಶ್ವಾಸ ತುಂಬಿದರು. ಮುಂದೆ ವೈದ್ಯೆಯಾಗಬೇಕೆಂಬ ಹಂಬಲವಿದೆ ಎಂದರು.

ಮುAದೆ ಇನ್ನಷ್ಟು ಸಾಧನೆ ಮಾಡಬೇಕು: ಸದ್ವಿದ್ಯಾ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಯಶಸ್ವಿ ಅರಸ್ ಅವರಿಗೂ ೬೨೫ ಅಂಕ ಲಭಿಸಿದೆ. ಮೈಸೂರಿನ ರಾಜಾರಾಮ್ ಅಗ್ರಹಾರದ ರಾಮಾನುಜಾ ರಸ್ತೆ ನಿವಾಸಿ, ಆಟೊಮೋಟಿವ್ ಆಕ್ಸಲ್ ಉದ್ಯೋಗಿ ಎಂ.ಆರ್.ಮAಜು ನಾಥ್ ಹಾಗೂ ಬಿಬಿ ಗಾರ್ಡ್ನ್ ರಸ್ತೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಲಕ್ಷಿö್ಮÃ ದಂಪತಿ ಪುತ್ರಿ ಯಶಸ್ವಿ ಅರಸ್ ಪಿಯುಸಿಯಲ್ಲೂ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದಾರೆ.

ಈ ಕುರಿತು ಮಾತನಾಡಿದ ಯಶಸ್ವಿ ಅರಸ್, ಪರೀಕ್ಷೆಯನ್ನು ಉತ್ತಮವಾಗಿ ಬರೆದಿದ್ದೆ. ೬೨೫ ಅಂಕಕ್ಕೂ ಸರಿಯಾದ ಉತ್ತರವನ್ನೇ ಬರೆದಿದ್ದೆ. ಆದರೆ ಯಾವುದಾದರೂ ಕಾರಣ ದಿಂದ ಒಂದೆರಡು ಅಂಕ ಕಡಿಮೆಯಾಗಬಹುದು ಎನಿಸಿತ್ತು. ಹೆಚ್ಚು ಅಂಕ ಗಳಿಸುವ ದೃಡ ವಿಶ್ವಾಸವಿತ್ತು. ಶಾಲೆಯಲ್ಲಿ ಓದು, ಕಲಿಕೆಯೊಂದಿಗೆ ಕೋಚಿಂಗ್ ಸೆಂಟರ್‌ನಲ್ಲೂ ಕಲಿತಿದ್ದೆ. ಇದರ ಜೊತೆಗೆ ಶಾಲೆಯಲ್ಲಿ ನಾಲ್ಕೆöÊದು ಪೂರ್ವಭಾವಿ ಪರೀಕ್ಷೆ ನಡೆಸಿದ್ದರು. ಅದು ನನಗೆ ವರದಾನವಾಗಿತ್ತು ಎಂದು ತಮ್ಮ ಸಾಧನೆಗೆ ಕಾರಣವನ್ನು ವಿವರಿಸಿದರು
.
ಮರಿಮಲ್ಲಪ್ಪ ಶಾಲೆ: ಮೈಸೂರಿನ ಮರಿ ಮಲ್ಲಪ್ಪ ಶಾಲೆಯ ವಿದ್ಯಾರ್ಥಿನಿ ಚಾರುಕೀರ್ತಿ ಅವರೂ ೬೨೫ ಅಂಕ ಪಡೆದು ಸಾಧನೆ ಮಾಡಿದ್ದಾರೆ. ಶಾಲೆಗೇ ಮಾತ್ರವಲ್ಲದೆ ರಾಜ್ಯದಲ್ಲಿ ಅತಿ ಹೆಚ್ಚು ಅಂಕ ಪಡೆದವರ ಸಾಲಿಗೆ ಸೇರಿದ್ದಾರೆ. ಮೈಸೂರಿನ ಕನಕದಾಸ ನಗರದ ನಿವಾಸಿ ಎಲ್.ಕುಮಾರ್ ಹಾಗೂ ವಿಜಯಲಕ್ಷಿö್ಮ ದಂಪತಿ ಪುತ್ರಿಯಾಗಿರುವ ಚಾರುಕೀರ್ತಿ ಎಲ್ಲರ ಗಮನ ಸೆಳೆದಿದ್ದಾರೆ. ತಂದೆ ಎಲ್.ಕುಮಾರ್ ಕೃಷಿಕರಾಗಿದ್ದು, ಮಹದೇವಪುರದ ಬಳಿ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.

ಐಎಎಸ್ ಅಧಿಕಾರಿ ಆಗುವ ಬಯಕೆ: `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಚಾರುಲತಾ ನಾನು ಐಎಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದೇನೆ. ಮೈಸೂರಲ್ಲಿ ಶಿಖಾ ಹಾಗೂ ರೋಹಿಣ ಸಿಂಧೂರಿ ಅವರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದನ್ನು ನೋಡಿ, ಕೇಳಿದ್ದೇನೆ. ಇದರಿಂದ ಆ ಇಬ್ಬರು ನನಗೆ ರೋಲ್ ಮಾಡೆಲ್ ಎಂದಿದ್ದಾರೆ.

ಟ್ಯೂಷನ್‌ಗೇ ಹೋಗಿಲ್ಲ
ನಾನು ಟ್ಯೂಷನ್‌ಗೆ ಹೋಗಿಲ್ಲ. ಶಾಲೆಯಲ್ಲಿ ಶಿಕ್ಷಕರು ಕಲಿಸಿದ್ದನ್ನೇ ಮನನ ಮಾಡಿಕೊಳ್ಳು ತ್ತಿದ್ದೆ. ಶಾಲೆಯ ಶಿಕ್ಷಕರು ನನ್ನ ಸಾಧನೆಗೆ ಪ್ರೇರಣೆ ನೀಡಿದ್ದಾರೆ. ಮನೆಯಲ್ಲಿ ಪೋಷಕರು ನನಗೆ ಆತ್ಮಸ್ಥೆöÊರ್ಯ ತುಂಬಿದರು. ಇದರಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು. ಈ ಹಿಂದೆ ಶಾಲೆಯ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಶಾಸಕ ಎಸ್.ಎ. ರಾಮದಾಸ್ ಅವರು ಸಾಧನೆ ಮಾಡುವಂತೆ ಪ್ರೇರಣೆ ನೀಡಿದ್ದರು. ಈ ಎಲ್ಲಾ ಅಂಶಗಳು ನನ್ನ ಈ ಸಾಧನೆಗೆ ಸಹಕಾರಿಯಾದವು. ಮುಂಬರುವ ದಿನಗಳಲ್ಲಿ ಸೇನೆಗೆ ಸೇರಬೇಕೆಂಬ ಹಂಬಲ ನನ್ನದಾಗಿದೆ. -ಎಂ.ಜಿ.ಏಕ್ತಾ

 

Translate »