SSLC ಫಲಿತಾಂಶ: ಶೇ.85.63ರಷ್ಟು ತೇರ್ಗಡೆ
ಮೈಸೂರು

SSLC ಫಲಿತಾಂಶ: ಶೇ.85.63ರಷ್ಟು ತೇರ್ಗಡೆ

May 20, 2022
  • ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ  ಬಿ.ಸಿ.ನಾಗೇಶ್ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಿದರು.
  • ೧೪೫ ಮಂದಿ ೬೨೫ಕ್ಕೆ ೬೨೫, ೩೦೯ ಮಂದಿ ೬೨೪, ೪೭೨ ಮಂದಿ ೬೨೩, ೬೧೫ ಮಂದಿ ೬೨೨ ಅಂಕ ಗಳಿಕೆ
  • ವಿದ್ಯಾರ್ಥಿಸ್ನೇಹಿ ಮೌಲ್ಯಮಾಪನದ ಹಿನ್ನೆಲೆ: ದಶಕದ ಫಲಿತಾಂಶ ಮೀರಿದ ಸಾಧನೆ; ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ

ಬೆಂಗಳೂರು, ಮೇ ೧೯ (ಕೆಎಂಶಿ)- ಕೋವಿಡ್ ಸಂಕಷ್ಟದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದಾಖಲೆಯ ಫಲಿತಾಂಶ ಬಂದಿದೆ.

ಕಳೆದ ಮಾರ್ಚ್ ಮಾಹೆಯಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ ೮೫.೬೩ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿ, ಕಳೆದ ಹತ್ತು ವರ್ಷದ ದಾಖಲೆಗಳನ್ನು ಮುರಿದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ೧೪೫ ಮಕ್ಕಳು ಪೂರ್ಣ ಅಂಕ ೬೨೫ಕ್ಕೆ ೬೨೫ ಪಡೆದು ತೇರ್ಗಡೆ ಹೊಂದಿದ್ದಾರೆ ಎಂದರು.

ಈ ಬಾರಿ ೮,೫೩,೪೩೬ ವಿದ್ಯಾರ್ಥಿಗಳು ಪರೀಕ್ಷೆ ತೆಗೆದು ಕೊಂಡಿದ್ದು, ಅದರಲ್ಲಿ ೭,೩೦,೮೮೧ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಒಟ್ಟಾರೆ ಶೇ.೮೫.೬೩ ತೇರ್ಗಡೆ ಹೊಂದಿದAತಾಗಿದೆ ಎಂದರು.
೩೦೯ ವಿದ್ಯಾರ್ಥಿಗಳು ೬೨೪ ಅಂಕ ಪಡೆದು ೨ನೇ ಸ್ಥಾನದಲ್ಲಿ ದ್ದಾರೆ. ಈ ವರ್ಷ ಮಾರ್ಚ್ ೨೮ರಿಂದ ಏಪ್ರಿಲ್ ೧೧ರವರೆಗೆ ಪರೀಕ್ಷೆ ನಡೆದಿತ್ತು. ಈ ಸಲ ೧೫,೩೮೭ ಶಾಲೆಗಳಿಂದ ೮,೭೩,೮೫೯ ವಿದ್ಯಾರ್ಥಿ ಗಳು ಪರೀಕ್ಷೆಗೆ ನೋಂದಾಯಿಸಿಕೊAಡಿದ್ದರು. ರಾಜ್ಯಾದ್ಯಂತ ೩,೪೪೪ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು ಎಂದರು.

೨೦೧೯-೨೦ನೇ ಸಾಲಿನಿಂದಲೇ ರ‍್ಯಾಂಕ್ ಬದಲಿಗೆ ಗ್ರೇಡ್ ನೀಡುವ ಪದ್ಧತಿ ಜಾರಿಯಲ್ಲಿದೆ. ಹೀಗಾಗಿ ಈ ವರ್ಷವೂ ಗ್ರೇಡ್ ನೀಡಲಾಗಿದೆ. ಈ ಸಲ ಮೌಲ್ಯಮಾಪನ ವಿದ್ಯಾರ್ಥಿಸ್ನೇಹಿಯಾಗಿ ಮಾಡಿದ್ದೇವೆ. ಹೀಗಾಗಿ ಹೆಚ್ಚು ಫಲಿತಾಂಶ ಬಂದಿದೆ.

ಪ್ರಶ್ನೆ ಪತ್ರಿಕೆ ಕೂಡಾ ವಿದ್ಯಾರ್ಥಿಸ್ನೇಹಿಯಾಗಿತ್ತು. ಶೇ.೧೦ ಮಾತ್ರ ಕಠಿಣ ಪ್ರಶ್ನೆಗಳನ್ನು ಪತ್ರಿಕೆಯಲ್ಲಿ ನೀಡಲಾಗಿದ್ದು, ಶೇ.೧೦ರಷ್ಟು ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ೧೭೫ ಅಂಕ ಪಡೆದವರು ಮಾತ್ರ ಇದಕ್ಕೆ ಎಲಿಜಬಲ್ ಆಗಿರುತ್ತಾರೆ. ೩೫,೯೩೧ ವಿದ್ಯಾರ್ಥಿಗಳಿಗೆ ೧ ವಿಷಯದಲ್ಲಿ ಮಾತ್ರ ಗ್ರೇಸ್ ಮಾರ್ಕ್ಸ್ ನೀಡಿದ್ದೇವೆ. ೩,೯೪೦ ವಿದ್ಯಾರ್ಥಿಗಳಿಗೆ ಎರಡು ವಿಷಯದಲ್ಲಿ ಗ್ರೇಸ್ ಮಾರ್ಕ್ಸ್ ನೀಡಿದ್ದೇವೆ ಎಂದರು. ಈ ಸಲ ೧೪೫ ಮಕ್ಕಳು ೬೨೫ ಅಂಕಕ್ಕೆ ೬೨೫ ಅಂಕ ಪಡೆದುಕೊಂಡಿದ್ದಾರೆ. ಹಾಗೆಯೇ ೩೦೯ ಮಂದಿ ೬೨೫ಕ್ಕೆ ೬೨೪ ಅಂಕ ಗಳಿಸಿದ್ದಾರೆ. ೪೭೨ ಮಕ್ಕಳು ೬೨೩ ಅಂಕ ಹಾಗೂ ೬೧೫ ಮಕ್ಕಳು ೬೨೨ ಅಂಕ ಪಡೆದು ತೇರ್ಗಡೆ ಯಾಗಿದ್ದಾರೆ. ಪ್ರಥಮ ಭಾಷೆ-೧೯,೧೨೫ ವಿದ್ಯಾರ್ಥಿಗಳು, ದ್ವಿತೀಯ ಭಾಷೆ-೧೩,೪೫೮ ವಿದ್ಯಾರ್ಥಿಗಳು, ತೃತೀಯ ಭಾಷೆ-೪೩,೧೨೬ ವಿದ್ಯಾರ್ಥಿಗಳು, ಗಣ ತ-೧೩,೬೮೩ ವಿದ್ಯಾರ್ಥಿ ಗಳು, ವಿಜ್ಞಾನ-೬೫೯೨ ವಿದ್ಯಾರ್ಥಿಗಳು, ಸಮಾಜ ವಿಜ್ಞಾನ-೫೦,೭೮೨ ವಿದ್ಯಾರ್ಥಿಗಳು.

Translate »