ಮೈಸೂರು, ಜೂ.27(ಎಂಟಿವೈ)- ಕೊರೊನಾ ಭಯವಿಲ್ಲದೆ ಮೈಸೂರು ಜಿಲ್ಲೆಯ 139 ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ ನಡೆದ ಎಸ್‍ಎಸ್‍ಎಲ್‍ಸಿ ಗಣಿತ ಪರೀಕ್ಷೆ ಯನ್ನು 38,886 ವಿದ್ಯಾರ್ಥಿಗಳು ಬರೆದರೆ, 411 ವಿದ್ಯಾರ್ಥಿಗಳು ಗೈರಾದರು. ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಕೈಗೊಂಡಿದ್ದ ಕಟ್ಟುನಿಟ್ಟಿನ ಕ್ರಮಗಳಿಂ ದಾಗಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾ ಗದೆ ಸಂತೋಷದಿಂದಲೇ ಪರೀಕ್ಷೆ ಬರೆದರು.
ಕೊರೊನಾ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ಸಂಬಂಧ ಪರ-ವಿರೋಧ ಚರ್ಚೆ ಮಧ್ಯೆಯೇ ಜೂ. 25ರಂದು ಆರಂಭವಾದ ಪರೀಕ್ಷೆ ಮೈಸೂರು ಜಿಲ್ಲೆಯಲ್ಲಿ ಯಾವುದೇ ಗೊಂದಲವಿಲ್ಲದೆ ನಡೆಯುತ್ತಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಸಮಾಧಾನ ತಂದಿದೆ. ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಂತಿ ರುವ ಗಣಿತ ಪರೀಕ್ಷೆಯನ್ನು ಬರೆಯಲು ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳು ಲವಲವಿಕೆಯಿಂದಲೇ ಪರೀಕ್ಷೆ ಎದುರಿಸಿದರು.
ಗಣಿತ ಪರೀಕ್ಷೆಗೆ ಹೊಸಬರು ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ದಂತೆ 39,297 ಮಂದಿ ನೋಂದಣಿ ಮಾಡಿ ಕೊಂಡಿದ್ದರು. ಬೇರೆ ಜಿಲ್ಲೆಯಿಂದ ಬಂದು ಲಾಕ್‍ಡೌನ್ ವೇಳೆ ವಾಪಸಾಗಲಾಗದ ವಿದ್ಯಾರ್ಥಿಗಳು ಮೈಸೂರು ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು 274 ಮಂದಿ ನೋಂದಾ ಯಿಸಿಕೊಂಡಿದ್ದರು. ಅವರಲ್ಲಿ ಇಂದು ಪರೀಕ್ಷೆಗೆ ಒಬ್ಬರು ಗೈರು ಹಾಜರಾದರು.
ಪ್ರತ್ಯೇಕ ಕೊಠಡಿ: ಕೊರೊನಾ ಸೋಂಕಿ ತರ ಪತ್ತೆಯಾದ ಬಡಾವಣೆಯ ಕಂಟೈ ನ್ಮೆಂಟ್ ಜೋನ್‍ನಲ್ಲಿರುವ 52 ವಿದ್ಯಾರ್ಥಿ ಗಳು ಇಂದು ಗಣಿತ ಪರೀಕ್ಷೆ ಬರೆಯಲು ಬಂದಿದ್ದರು. ಅವರನ್ನು ನಿಯಮಾನುಸಾರ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಯಿತು. ಎಂದಿನಂತೆ ಪರೀಕ್ಷಾ ಕೇಂದ್ರದ ಆವರಣ ಪ್ರವೇಶಕ್ಕೂ ಮುನ್ನ ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ಮಾಡ ಲಾಯಿತು. 17 ವಿದ್ಯಾರ್ಥಿಗಳಲ್ಲಿ ಕೆಮ್ಮು, ಜ್ವರದ ಲಕ್ಷಣ ಕಂಡು ಬಂದಿದ್ದರಿಂದ ವೈದ್ಯರ ಸಲಹೆ ಪಡೆದು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಯಿತು.
ಪೋಷಕರಿಗೆ ಆತಂಕ: ವಿದ್ಯಾರ್ಥಿಗಳಿಗೆ ಕೊರೊನಾ ಭಯ ಇಲ್ಲದಿದ್ದರೂ, ಪೋಷಕ ರಲ್ಲಿ ಭಯವಿತ್ತು. ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಕರೆತಂದ ಪೋಷಕರು ಕೊನೆ ಕ್ಷಣದವರೆಗೂ ಕೊರೊನಾ ಬಗ್ಗೆ ಕೈಗೊಳ್ಳ ಬೇಕಾದ ಜಾಗ್ರತೆಯ ಬಗ್ಗೆ ಉಪದೇಶ ಮಾಡುತ್ತಲೇ ಇದ್ದರು. ಅಲ್ಲದೇ ಪರೀಕ್ಷೆ ಮುಗಿ ಯುವ ಮುನ್ನವೇ ಪರೀಕ್ಷಾ ಕೇಂದ್ರದ ಬಳಿ ಬಂದು ಕಾದು ನಿಂತಿದ್ದ ಪೋಷ ಕರು, ಮಕ್ಕಳನ್ನು ಪರೀಕ್ಷೆ ಹೇಗೆ ಬರೆದಿರಿ? ಏನನ್ನೂ ಮುಟ್ಟಲಿಲ್ಲ ತಾನೆ? ಸ್ಯಾನಿಟೈಸರ್ ಬಳಸಿದಿರಾ ಎಂದು ಪ್ರಶ್ನಿಸುತ್ತಿದ್ದರು. ಕೆಲವು ಪೋಷಕರು ಮಾತ್ರ ಕೊರೊನಾ ಭಯ ಹುಟ್ಟಿಸದೆ, ಪರೀಕ್ಷೆ ಬಗ್ಗೆ ಮಾತ್ರ ಗಮನ ಹರಿಸುವಂತೆ ಉತ್ತೇಜಿಸಿ ಕಳುಹಿಸುತ್ತಿದ್ದರು.
ಕಟ್ಟುನಿಟ್ಟಿನ ಕ್ರಮ: ಪರೀಕ್ಷಾ ಕೇಂದ್ರದಿಂದ 100 ಮೀ. ದೂರದಲ್ಲಿಯೇ ಪೋಷಕರ ಪ್ರವೇಶ ನಿರ್ಬಂಧಿಸಲಾಗಿತ್ತು. ವಿದ್ಯಾರ್ಥಿಗಳು ಅಂತರ ಕಾಯ್ದುಕೊಂಡು ಪರೀಕ್ಷಾ ಕೇಂದ್ರಕ್ಕೆ ತೆರಳಲು ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷಾ ಕೇಂದ್ರದ ಆವರಣದಲ್ಲಿ ಎಲ್ಲಾ ವಿದ್ಯಾರ್ಥಿ ಗಳಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲು ಡೆಸ್ಕ್ ವ್ಯವಸ್ಥೆ ಮಾಡಲಾಗಿತ್ತು. ದಾದಿಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರೇಂಜರ್ ಹಾಗೂ ರೋವರ್ಸ್‍ಗಳನ್ನು ನಿಯೋಜಿಸಲಾಗಿತ್ತು. ಡೆಸ್ಕ್ ಬಳಿ ಮಾಸ್ಕ್‍ಗಳನ್ನು ಇಡಲಾಗಿತ್ತು. ಪ್ರತಿ ವಿದ್ಯಾರ್ಥಿಯೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಪರೀಕ್ಷಾ ಕೇಂದ್ರ ಪ್ರವೇಶಿಸುವಂತೆ ಸೂಚನೆ ನೀಡಲಾಗುತ್ತಿತ್ತು