`ಲಕ್ಷ ವೃಕ್ಷ ಅಭಿಯಾನ’ದಡಿ ಕುವೆಂಪುನಗರದಲ್ಲಿ ಸಾವಿರ ಗಿಡ ವಿತರಣೆ
ಮೈಸೂರು

`ಲಕ್ಷ ವೃಕ್ಷ ಅಭಿಯಾನ’ದಡಿ ಕುವೆಂಪುನಗರದಲ್ಲಿ ಸಾವಿರ ಗಿಡ ವಿತರಣೆ

June 28, 2020

ಮೈಸೂರು, ಜೂ.27(ಎಸ್‍ಪಿಎನ್)- `ಲಕ್ಷ ವೃಕ್ಷ ಅಭಿಯಾನ’ದಡಿ ಹೆಚ್.ವಿ. ರಾಜೀವ ಸ್ನೇಹ ಬಳಗದಿಂದ ಮೈಸೂರು ಕುವೆಂಪುನಗರದ ಸುಮಸೋಪಾನ ಉದ್ಯಾನವನದಲ್ಲಿ ವಿವಿಧ ಜಾತಿಯ ಸಾವಿರ ಗಿಡಗಳನ್ನು ಸಾರ್ವಜನಿಕರಿಗೆ ಶನಿವಾರ ವಿತರಿಸಲಾಯಿತು.

ಕಾರ್ಯಕ್ರಮದಂಗವಾಗಿ ಉದ್ಯಾನವನ ದಲ್ಲಿ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ನೇತೃತ್ವ ದಲ್ಲಿ ಹೊಂಗೆಗಿಡ ನೆಡಲಾಯಿತು.

ಬಳಿಕ ಬಳಗದ ಸಂಚಾಲಕ ಆರ್. ಕುಮಾರ್, ಈವರೆಗೆ ಅಭಿಯಾನದಡಿ 20 ಸಾವಿರಕ್ಕೂ ಹೆಚ್ಚು ಗಿಡಗಳನ್ನು ವಿತರಿಸಲಾಗಿದೆ ಎಂದರು.

ದಾಳಿಂಬೆ, ಕರಿಬೇವು, ದಾಸವಾಳ, ಗುಲಾಬಿ, ಇನ್ಸುಲಿನ್, ಬೆಟ್ಟದ ನೆಲ್ಲಿಕಾಯಿ, ಬೇವು, ರಣಕಳ್ಳಿ, ಅಮೃತಬಳ್ಳಿ, ಹೊಂಗೆ ಗಿಡ, ವಿವಿಧ ಜಾತಿಯ ಅಲಂಕಾರಿಕ ಗಿಡಗಳನ್ನು ವಿತರಿಸಲಾಯಿತು.

ಈ ವೇಳೆ ಬಳಗದ ಕಾರ್ಯಕರ್ತರಾದ ನಾಗೇಶ್, ಎನ್.ಜಿ.ಗಿರೀಶ್, ಆಟೋ ಕುಮಾರ್, ಲಲಿತಮ್ಮ, ಗಾಯಿತ್ರಿ, ಮುರುಳಿ, ಎಂ.ಎಸ್.ಸತ್ಯಾನಂದ, ದೇವೇಂ ದ್ರಪ್ಪ, ರಂಗಣ್ಣ, ಎಸ್.ರಂಗನಾಥ್, ಬಸವ ರಾಜ್, ಅಮರ್‍ನಾಥ್, ರಶ್ಮಿ ಸ್ವಾಮಿ, ಕೆಂಡ ಗಣ್ಣಪ್ಪ, ಸೇರಿದಂತೆ ಇತರರಿದ್ದರು.

 

 

Translate »