ಮೈಸೂರು, ಸೆ.5(ಎಂಕೆ)- ಮೈಸೂರು ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಎಂ.ಎನ್. ವಿಹಾನ್ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮರು ಮೌಲ್ಯಮಾಪನ ಬಳಿಕ 625ಕ್ಕೆ 623 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ತೃತೀಯ ಹಾಗೂ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.
ಮಡಿಕೇರಿಯ ವಕೀಲ ನಿರಂಜನ್-ಸೌಮ್ಯ ದಂಪತಿ ಪುತ್ರನಾದ ಎಂ.ಎನ್.ವಿಹಾನ್ ಕನ್ನಡದಲ್ಲಿ 125, ಇಂಗ್ಲಿಷ್‍ನಲ್ಲಿ 100, ಹಿಂದಿ ಯಲ್ಲಿ 100, ಗಣಿತದಲ್ಲಿ 100, ವಿಜ್ಞಾನದಲ್ಲಿ 98 ಹಾಗೂ ಸಮಾಜ -ವಿಜ್ಞಾನದಲ್ಲಿ 100 ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ ನಾಗಿದ್ದಾನೆ. ಮರುಮೌಲ್ಯಮಾಪನಕ್ಕೂ ಮೊದಲು 625ಕ್ಕೆ 622 ಅಂಕ ಪಡೆದಿದ್ದ. ಮರುಮೌಲ್ಯಮಾಪನದಲ್ಲಿ ಹಿಂದಿಯಲ್ಲಿ 99 ಅಂಕಗಳ ಬದಲಿಗೆ 100 ಅಂಕ ಸಿಕ್ಕಿದೆ.