ಮೈಸೂರು,ಸೆ.5(ಪಿಎಂ)-ಮಧ್ಯ ಪ್ರದೇಶದ ಭೋಪಾಲ್‍ನಲ್ಲಿ ಯುವಜನರ ಮೇಲೆ ಪೊಲೀಸರು ಶುಕ್ರವಾರ ಲಾಠಿ ಪ್ರಹಾರ ನಡೆಸಿರುವುದನ್ನು ಖಂಡಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಮೈಸೂರು ಜಿಲ್ಲಾ ಸಮಿತಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಯುವಜನತೆ ಮೇಲೆ ಬಿಜೆಪಿ ಸರ್ಕಾರ ಲಾಠಿ ಪ್ರಹಾರ ನಡೆಸಿದೆ. ಉದ್ಯೋಗ ನೀಡಬೇಕೆಂ ಬುದೂ ಸೇರಿದಂತೆ ರೈಲ್ವೆ, ಶಿಕ್ಷಕರು, ಪೊಲೀಸ್ ಇಲಾಖೆ ನೇಮಕ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಲು ಕ್ರಮ ವಹಿಸುವಂತೆ ಸಿಎಂಗೆ ಮನವಿಪತ್ರ ಸಲ್ಲಿಸಲು ಮುಂದಾ ದರು. ಆಗ ಲಾಠಿ ಪ್ರಹಾರ ನಡೆಸಲಾಗಿದೆ. ಪ್ರತಿಭಟನೆ ನೇತೃತ್ವ ವಹಿಸಿದ್ದ ಎಐಡಿವೈಓ ಮಧ್ಯಪ್ರದೇಶದ ರಾಜ್ಯ ಕಾರ್ಯದರ್ಶಿ ಪ್ರಮೋದ್ ನಾಮದೇವ್ ಸೇರಿದಂತೆ ನೂರಾರು ಯುವಕರನ್ನು ಬಂಧಿಸ ಲಾಗಿದೆ ಎಂದು ಖಂಡಿಸಿದರು.
ಪ್ರತಿಭಟನಾಕಾರರ ವಿರುದ್ಧ ಸುಳ್ಳು ಆರೋಪ ಮಾಡಲಾಗಿದ್ದು, ಕೂಡಲೇ ಹಿಂಪಡೆಯಬೇಕು. ಯುವಜನತೆಯ ಬೇಡಿಕೆ ಗಳನ್ನು ಕೂಡಲೇ ಈಡೇರಿಸಬೇಕು. ಎಸ್‍ಎಸ್‍ಸಿ, ಶಿಕ್ಷಕರು, ರೈಲ್ವೆ ಮತ್ತು ಪೊಲೀಸ್ ನೇಮಕಾತಿ ಪರೀಕ್ಷೆಗಳ ಫಲಿತಾಂಶ ಪ್ರಕ ಟಿಸಲು ತಕ್ಷಣ ಕ್ರಮ ವಹಿಸಬೇಕು. ದೇಶ ವ್ಯಾಪಿ ಯುವಜನತೆಗೆ ಉದ್ಯೋಗ ಖಾತ್ರಿ ಪಡಿಸಬೇಕು. ದೇಶದ ಸರ್ಕಾರಿ ಇಲಾಖೆ ಗಳಲ್ಲಿ ಖಾಲಿ ಇರುವ 23 ಲಕ್ಷ ಹುದ್ದೆ ಗಳನ್ನು ಕೂಡಲೇ ಭರ್ತಿ ಮಾಡಲು ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಎಐಡಿವೈಓ ಜಿಲ್ಲಾಧ್ಯಕ್ಷ ಎಸ್.ಹೆಚ್.ಹರೀಶ್, ಜಿಲ್ಲಾ ಕಾರ್ಯದರ್ಶಿ ಟಿ.ಆರ್.ಸುನಿಲ್, ಕಾರ್ಯಕರ್ತರಾದ ಅನಿಲ್, ಆನಂದ್, ರೆಹಮಾನ್, ಸೋಮಣ್ಣ, ತನ್ವೀರ್, ಚಿಕ್ಕಣ್ಣ ಮತ್ತಿತರರು ಪ್ರತಿಭಟನೆಯಲ್ಲಿದ್ದರು.