ತಿದ್ದುಪಡಿ ಕಾಯ್ದೆಗಳ ಸುಗ್ರೀವಾಜ್ಞೆಗೆ ವಿಧಾನಮಂಡಲ ಅಂಗೀಕಾರ ದೊರೆಯದಿರಲಿ
ಮೈಸೂರು

ತಿದ್ದುಪಡಿ ಕಾಯ್ದೆಗಳ ಸುಗ್ರೀವಾಜ್ಞೆಗೆ ವಿಧಾನಮಂಡಲ ಅಂಗೀಕಾರ ದೊರೆಯದಿರಲಿ

September 6, 2020

ಮೈಸೂರು, ಸೆ.5(ಎಸ್‍ಪಿಎನ್)-ಕೊರೊನಾ ಸಂದರ್ಭ ರಾಜ್ಯ ಸರ್ಕಾರ ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಿದೆ. ಈ ಸುಗ್ರೀವಾಜ್ಞೆಗಳಿಗೆ ವಿಧಾನ ಮಂಡಲ ದಲ್ಲಿ ಅಂಗೀಕಾರ ಸಿಗುವುದನ್ನು ತಡೆಯಲು ಹೋರಾಟ ತೀವ್ರಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿಪ್ರಾಯಪಟ್ಟರು.

ಮೈಸೂರು-ಹುಣಸೂರು ರಸ್ತೆಯ ಜಲದರ್ಶಿನಿ ಯಲ್ಲಿ ಶುಕ್ರವಾರ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸೆ.21ರಿಂದ 30ರವರೆಗೆ ವಿಧಾನಮಂಡಲ ಅಧಿವೇಶನ ನಡೆಯುವ ಸಂದರ್ಭ ಕರ್ನಾಟಕ ಭೂ-ಸುಧಾರಣಾ ತಿದ್ದುಪಡಿ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದು ಪಡಿಯ ಸುಗ್ರೀವಾಜ್ಞೆ ಅಂಗೀಕಾರಗೊಳ್ಳದಂತೆ ತಡೆಯಲು 3 ಪಕ್ಷಗಳ ನಾಯಕರ ಮೇಲೆ ಒತ್ತಡ ತರುವÀ ದೃಷ್ಟಿಯಿಂದ ವಿವಿಧ ಸಂಘ ಟನೆಗಳ ಮೂಲಕ ಹೋರಾಟ ಹಮ್ಮಿಕೊಂಡಿದ್ದೇವೆ ಎಂದರು.

ರೈತ ಸಂಘ, ದಸಂಸ, ಜನಚೇತನ ಟ್ರಸ್ಟ್, ಸ್ವರಾಜ್ ಇಂಡಿಯಾ ಪಕ್ಷ ಹಾಗೂ ಜನಾಂದೋಲನ ಮಹಾಮೈತ್ರಿಯಿಂದ ಹೋರಾಟ ಈಗಾಗಲೇ ಆರಂಭವಾಗಿದ್ದು, ನಮ್ಮನ್ನು ವಿಪಕ್ಷನಾಯಕ ಸಿದ್ದ ರಾಮಯ್ಯ ಅವರು ಬೆಂಬಲಿಸಿರುವುದು ಉತ್ತಮ ಸಂಗತಿ. ಸುಗ್ರೀ ವಾಜ್ಞೆ ವಿರೋಧಿಸಿ ಸಭಾತ್ಯಾಗ ಮಾಡಲು ವಿಪಕ್ಷಗಳಿಗೆ ಅವಕಾಶ ನೀಡದೇ, ವಿಧಾನಮಂಡಲದಲ್ಲಿ ಅಹೋರಾತ್ರಿ ಧರಣಿ ನಡೆಸು ವಂತೆಯೂ ಮನವಿ ಮಾಡಲಾಗುವುದು ಎಂದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯನ್ನು ರಾಜ್ಯ ಮಟ್ಟದಲ್ಲಿ ಬಲಗೊಳಿಸಲು ಸಂಘದ ಆಂತರಿಕ ನೀತಿ-ನಿಯಮ ಗಳನ್ನು ರೂಪಿಸಲು ಸಮಿತಿ ರಚಿಸಿದ್ದು, ಅದು ನೀಡುವ ಶಿಫಾರಸುಗಳನ್ನು ರಾಜ್ಯ ಸಮಿತಿಯ ಮುಂದಿಟ್ಟು ಅನು ಮೋದನೆ ಪಡೆದುಕೊಳ್ಳಲಾಗುವುದು. ರೈತ ಸಂಘದಲ್ಲಿ ಗುರುತಿಸಿಕೊಳ್ಳುವ ಮುಖಂಡರು, ವರ್ಷಕ್ಕೊಮ್ಮೆ ಆಸ್ತಿ ಘೋಷಣೆ, ಸಂಘದ ಹೆಸರು, ಲೋಗೋ ಮಾರ್ಪಾಡು ಹಾಗೂ ಹಸಿರು ಬಣ್ಣ ಟವಲು ಬಳಕೆಯನ್ನು ಸಂಘದ ಕಾರ್ಯಕರ್ತರಲ್ಲದವರು ಬಳಕೆ ಮಾಡುವುದನ್ನು ತಡೆ ಹಿಡಿಯುವ ಸಂಬಂಧ ಬೈಲಾದಲ್ಲಿ ಉಲ್ಲೇಖಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು. ಇನ್ನು ಮುಂದೆ ರೈತ ಸಂಘದ ಹೋರಾಟಗಳನ್ನು ಕರಪತ್ರಗಳಿಗೆ ಸೀಮಿತಗೊಳಿಸದೆ, ಸಾಮಾಜಿಕ ಜಾಲತಾಣದ ಮೂಲಕ ಪ್ರಸಾರ ಮಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಗಮನ ಸೆಳೆಯುವ ಸಂಬಂಧ ಕಾರ್ಯಕರ್ತರಿಗೆ ಅವಕಾಶ ನೀಡುವ ಬಗ್ಗೆಯೂ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಪ್ರಧಾನ ಕಾರ್ಯದರ್ಶಿ ನುಲೇನೂರು ಎಂ.ಶಂಕರಪ್ಪ, ಮುಖಂಡರಾದ ರವಿಕಿರಣ್, ಪಿ.ಗೋಪಾಲ್, ರಾಮಕೃಷ್ಣಯ್ಯ, ಪ್ರಸನ್ನ ಎನ್.ಗೌಡ, ವೀರಸಂಗಯ್ಯ, ರಾಮಣ್ಣ, ನಟರಾಜು, ಸುರೇಶ್, ಶ್ರೀನಿವಾಸ್, ಗೋಪಾಲಯ್ಯ, ರಾಮಣ್ಣ, ಮರಂಕಯ್ಯ ಇದ್ದರು.

 

 

Translate »