ಮೈಸೂರು, ಸೆ. 5- ಎಲ್ಲಾ ವರ್ಗದ ಜನರು ಮುಖ್ಯ ವಾಹಿನಿಗೆ ಬರಲು ವಚನಗಳು ಸಹಕಾರಿಯಾದವು ಎಂದು ನಿವೃತ್ತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ಜಿ.ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದರು.
ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಅಂತ ರ್ಜಾಲದಲ್ಲಿ ವಚನ ವಚನನೃತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶರಣರು ವಚನಗಳಲ್ಲಿ ತಮ್ಮ ಆಲೋಚನೆ ಮತ್ತು ವಿಚಾರಗಳನ್ನು ಅನುಭಾವದ ಮೂಲಕ ಧಾರೆ ಎರೆದಿದ್ದು, ಮನುಕುಲ ವಚನದ ಅರ್ಥ ಅರಿತು ಅದರಂತೆ ನಡೆದರೆ ಸುಖ ಸಂತೋಷದಿಂದ ಜೀವನ ನಡೆಸಲು ಸಹಾಯಕವಾಗುತ್ತದೆ. ಶರಣರ ವಚನ ಗಳು ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಸಾಹಿತ್ಯ ಪ್ರಕಾರವಾಗಿದ್ದು, ಇವು ಭಕ್ತಿ, ಶ್ರದ್ಧೆ ಉಂಟು ಮಾಡುವುದರ ಜೊತೆಗೆ ಜಾತ್ಯಾತೀತ ಹಾಗೂ ಸಹೋದರ ಭಾವವನ್ನು ಹೊಂದಿವೆ. ಇಡೀ ವಿಶ್ವವೇ ಕೊರೊನಾವನ್ನು ಎದುರಿಸಲು ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ವಚನ ಪ್ರಸಾರಕ್ಕೆ ಅಂತರ್ಜಾಲವನ್ನೇ ಮಾಧ್ಯಮ ವನ್ನಾಗಿ ಮಾಡಿಕೊಂಡು ಶರಣು ವಿಶ್ವವಚನ ಫೌಂಡೇಷನ್ ಮಹಿಳೆಯರಿಗೆ, ಚಿಕ್ಕ ಮಕ್ಕಳಿಗೆ, ವಿಶೇಷಚೇತನರಿಗೆ, ಮೂರು ತಲೆಮಾರಿನವರಿಗೆ, ದಂಪತಿಗಳಿಗೆ ಮತ್ತು ಯುವಕರಿಗೆ ವಚನ ತಲುಪಿಸುತ್ತಿರುವ ಕಾರ್ಯ ವೈಖರಿ ಎಲ್ಲರಿಗೂ ಅನುಕರಣೀಯ ಹಾಗೂ ಹೆಮ್ಮೆಪಡಬೇಕಾದ ಸಂಗತಿ ಎಂದು ಹೇಳಿದರು.
ನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ರೂಪ ಕುಮಾರಸ್ವಾಮಿ ಬಸವಾದಿ ಶರಣರು ಬಾಳಿದ ಹನ್ನೆರಡನೆಯ ಶತಮಾನ ಕನ್ನಡ ನೆಲದಲ್ಲಿ ಮೂಡಿದ ಭಕ್ತಿ ಮಾರ್ಗದ ಮೊದಲ ಹೆಜ್ಜೆ. ದೇವರು, ಧರ್ಮ ಮತ್ತು ಆಧ್ಯಾತ್ಮಗಳೆಂಬ ವಿಶೇಷ ಕ್ಷೇತ್ರಗಳು ಕೆಲವರಿಗೆ ಮಾತ್ರ ಸೀಮಿತವಾಗಿ ದ್ದಂತಹ ಸಮಯದಲ್ಲಿ ಜನಸಾಮಾನ್ಯರೂ ಕೂಡಾ ವಚನ ರಚಿಸು ವಂತೆ ಪ್ರೇರೇಪಿಸಿದವರು ಶರಣರು ಎಂದು ಹೇಳಿದರು.
ನಂತರ ನಡೆದ ವಚನ ನೃತ್ಯ ಕಾರ್ಯಕ್ರಮದಲ್ಲಿ ಮೈಸೂ ರಿನ ಸಿ.ಕೆ.ವಚನ, ವೈಷ್ಣವಿ, ಭವಾನಿ, ತನೀಷ, ಜಮ ಖಂಡಿಯ ವಚನಾಂಬಿಕ ವಾಜಂತ್ರಿ, ಅಕ್ಕಮಹಾದೇವಿ ವಾಜಂತ್ರಿ, ಹುಬ್ಬಳ್ಳಿಯ ಅನನ್ಯ, ಅಪೂರ್ವ ತಡಸದ, ಪೂರ್ವಿ ಎಸ್.ಭುಸನೂರ್, ಬೆಂಗಳೂರಿನ ಛಾಯ ಹೆಚ್ ಕೊಡೇಕಲ್, ಬೆಳಗಾವಿಯ ಬಸವಾಕ್ಷರ, ಪ್ರಾರ್ಥನಾ ಮಹಂತೇಶ ಗುಡಸ, ಬಳ್ಳಾರಿಯ ನಿಶ್ಚಿತ ವೀಕ್ಷಕರ ಕಣ್ಮನ ಸೆಳೆಯುವಂತೆ ನೃತ್ಯ ಮಾಡಿದರು.
ಕಾರ್ಯಕ್ರಮದಲ್ಲಿ ಲಾಳನಹಳ್ಳಿ ಮಠದ ಜಯದೇವಿ ತಾಯಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ.ವಚನ ಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್‍ಕುಮಾರ್ ವಾಜಂತ್ರಿ, ಅಂತರ್ಜಾಲ ಸಂಚಾಲಕ ಪಿ.ವಿ.ರುದ್ರೇಶ್, ಕೇಂದ್ರೀಯ ಸಂಚಾಲಕಿ ಸುಧಾ ಮೃತ್ಯುಂಜಯಪ್ಪ, ಕಾರ್ಯದರ್ಶಿ ಅನಿತಾ ನಾಗರಾಜ್, ಬಹ್ರೈನ್ ಅಧ್ಯಕ್ಷ ಶಿವಾನಂದ ಪಾಟೀಲ್, ಮಸ್ಕತ್‍ನ ಭೀಮ ನೀಲಕಂಠರಾವ್ ಹಂಗರಗೆ, ನಂದೀಶ್ವರ ದಾವಣಗೆರೆ, ಸುಮಂಗಳ ಆರ್, ಶೈಲ ಸಿದ್ದರಾಮಪ್ಪ, ದಾವಣಗೆರೆ ಶರಣು ವಿಶ್ವವಚನ ಫೌಂಡೇಷನ್ ಗೌರವಾಧ್ಯಕ್ಷ ನಾಗಭೂಷಣಗೌಡ ಪಿ.ಬಸವರಾಜ್ ಎಸ್ ಗವಾತಿ, ಸುನಿತಾ ಅಂಗಡಿ ಕೊಡೇಕಲ್, ಯು.ಎಂ.ಉಮಾದೇವಿ, ಡಾ.ಶಿವಮೂರ್ತಿ, ನೀಲಾಂಬಿಕಾ ದೇವಿ ನಾಗರಾಜು, ಚಂಚಲ ಜಯದೇವ್, ಗಿರಿಜಾಂಬ ಡಿ.ಬಿ, ಚನ್ನಪ್ಪ ಎಚ್.ಕೆ, ಶೋಭರಾಣಿ, ಉಮಾಪತಿ, ಅಶ್ವಿನಿ ಉಮೇಶ್, ಎಸ್.ಎಸ್.ಪಾಟೀಲ್, ಡಾ.ಪುಟ್ಟಪ್ಪ ಮುಡಿಗುಂಡ, ದೀಪ ತೊಲಗಿ, ರೂಪ ದೀಕ್ಷ, ಶೀಲ ಗುದಾಸ್, ಮಹದೇವಿ ಗುದಾಸ್, ವಿಜಯಲಕ್ಷ್ಮಿ ಲಿಂಗಾಯಿತ ಉಪಸ್ಥಿತರಿದ್ದರು.