ಜುಬಿಲಂಟ್ ಕಾರ್ಖಾನೆಗೆ ಸಚಿವರಾದ ಎಸ್.ಟಿ.ಸೋಮಶೇಖರ್, ಡಾ.ಸುಧಾಕರ್ ಭೇಟಿ
ಮೈಸೂರು

ಜುಬಿಲಂಟ್ ಕಾರ್ಖಾನೆಗೆ ಸಚಿವರಾದ ಎಸ್.ಟಿ.ಸೋಮಶೇಖರ್, ಡಾ.ಸುಧಾಕರ್ ಭೇಟಿ

April 22, 2020

ನಂಜನಗೂಡು, ಏ.21(ರವಿ)- ಕೊರೊನಾ ಸೋಂಕು ಹರಡಲು ಕಾರಣವಾಗಿರುವ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಂಟ್ ಕಾರ್ಖಾನೆಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಮಾಹಿತಿ ಪಡೆದರು.

ಕಾರ್ಖಾನೆ ಪರಿಸ್ಥಿತಿ ಅವಲೋಕಿಸಿದ ವೈದ್ಯಕೀಯ ಶಿಕ್ಷಣ ಸಚಿವರು, ಕಾರ್ಖಾನೆಯಲ್ಲಿ ಕಾರ್ಮಿಕರು ಎಷ್ಟು ಮಂದಿ ಇದ್ದಾರೆ. ಉತ್ಪಾದನೆಯಾಗುವ ಔಷಧಗಳು ಯಾವ ದೇಶಕ್ಕೆ ರಫ್ತಾಗುತ್ತಿವೆ ಎಂದು ಜುಬಿಲಂಟ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಒಂದೂವರೇ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕಾರ್ಖಾನೆಯಲ್ಲಿ ಕೆಲಸ ಮಾಡು ತ್ತಿದ್ದಾರೆ. ಕಾರ್ಖಾನೆಯಲ್ಲಿ ಉತ್ಪಾದನೆ ಆಗುವ ಔಷಧ ಗಳನ್ನು ಅನೇಕ ರಾಷ್ಟ್ರಗಳಿಗೆ ರಫ್ತ್ತು ಮಾಡಲಾಗುತ್ತಿದೆ. ಔಷಧ ತಯಾರಿಕೆಗೆ ಬಳಸಿದ ನೀರನ್ನು ಶುದ್ಧೀಕರಿಸಿ ಹೊರ ಬಿಡಲಾಗುತ್ತಿದೆ ಎಂದು ಕಾರ್ಖಾನೆ ಅಧಿಕಾರಿಗಳು ವಿವರಿಸಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಶಾಸಕ ಬಿ.ಹರ್ಷವರ್ಧನ್, ಕಾರ್ಖಾನೆ ಪ್ರಾರಂಭದಿಂದಲೂ ಒಂದಿಲ್ಲೊಂದು ಸಮಸ್ಯೆಗಳಿಂದ ಕೂಡಿದೆ. ಜನಪ್ರತಿ ನಿಧಿಗಳ ಸಲಹೆಗಳಿಗೆ ಕಿಮ್ಮತ್ತಿಲ್ಲ. ಕಾರ್ಖಾನೆಯಿಂದ ತ್ಯಾಜ್ಯ ನೀರನ್ನು ನೇರವಾಗಿ ಹೊರಬಿಡಲಾಗುತ್ತಿದೆ. ಇದರಿಂದ ಜನ-ಜಾನುವಾರು ಹಲವು ರೋಗಗಳಿಗೆ ತುತ್ತಾಗುತ್ತಿರುವುದು ಸಾಮಾನ್ಯವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಲ್ಲಿ ದೂರಿದರು.

ತಕ್ಷಣ ಸಚಿವರು, ಕಾರ್ಖಾನೆಯಿಂದ ಹೊರ ಬಿಡುವ ನೀರನ್ನು 3 ತಿಂಗಳಿಗೊಮ್ಮೆ ಪರೀಕ್ಷೆ ನಡೆಸಿ. 1 ಕಿ.ಮೀ ವ್ಯಾಪ್ತಿಯ ಗ್ರಾಮದಲ್ಲಿನ ಬೋರ್ವೆಲ್‍ಗಳ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರಿಶೀಲಿ ಸುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‍ಗೆ ಸೂಚಿಸಿದರು. ನಂತರ ಮಾತನಾಡಿದ ಸಚಿವರು, ಒಂದೂವರೇ ಸಾವಿರಕ್ಕೂ ಹೆಚ್ಚು ನೌಕರರಿಗೆ ಕಾರ್ಖಾನೆ ಕೆಲಸ ನೀಡಿದೆ. ಅದನ್ನೂ ಪರಿಗಣಿಸಬೇ ಕಲ್ಲವೆ? ಶಾಸಕರೇ ಎಂದರು.

ಇದಕ್ಕೆ ಶಾಸಕ ಬಿ.ಹರ್ಷವರ್ಧನ್ ಪ್ರತಿಕ್ರಿಯಿಸಿ, ಈ ಕಾರ್ಖಾನೆ ಆಡಳಿತ ಮಂಡಳಿ ಸ್ಥಳೀಯರಿಗೆ ಸ್ಪಂದಿಸುತ್ತಿಲ್ಲ. ಹೊರ ರಾಜ್ಯದವರಿಗೆ ಹೆಚ್ಚು ಮಾನ್ಯತೆ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೂಡಲೇ ಸಚಿವರು, ಜುಬಿಲಂಟ್ ಅಧಿಕಾರಿಗಳಿಗೆ ಸ್ಥಳೀಯರನ್ನು ಪರಿಗಣಿಸುವಂತೆ ಸೂಚನೆ ನೀಡಿ ದರು. ನಂತರ ಸಚಿವದ್ವಯರು ತಾಲೂಕಿನ ಕೂಗಲೂರು ಗ್ರಾಮದಲ್ಲಿ ಸೋಂಕು ಕಾಣಿಸಿಕೊಂಡಿ ರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆ ದರು. ಹಲವು ಸಲಹೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ನಿರಂಜನ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಡಿವೈಎಸ್ಪಿ ಪ್ರಭಾಕರ್‍ರಾವ್‍ಶಿಂಧೆ, ನೋಡಲ್ ಅಧಿಕಾರಿ ಶ್ರೀನಿವಾಸಗೌಡ, ತಹಸೀಲ್ದಾರ್ ಕೆ.ಎಂ.ಮಹೇಶ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾವತಿ, ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳಿದ್ದರು.

ಎಟಿ&ಎಸ್ ಕಾರ್ಯಕ್ಕೆ ಮೆಚ್ಚುಗೆ: ಕೊರೊನಾ ವಿರುದ್ಧ ಹೋರಾಡಲು ಅವಶ್ಯವಿರುವ ವೆಂಟಿಲೇಟರ್‍ಗೆ ಅಗತ್ಯವಾದ ಪಿಸಿಬಿ ತಯಾರಿಸುತ್ತಿರುವ ಎಟಿ ಅಂಡ್ ಎಸ್ ಕಾರ್ಖಾನೆಗೆ ಸಚಿವರಾದ ಎಸ್.ಟಿ.ಸೋಮಶೇಖರ್, ಡಾ.ಸುಧಾಕರ್ ಭೇಟಿ ನೀಡಿ ಉತ್ಪನ್ನದ ಗುಣಮಟ್ಟದ ಪರಿಶೀಲಿಸಿದರು. ಇದೇ ವೇಳೆ ಮುಖ್ಯಮಂತ್ರಿಗಳ ನಿಧಿಗೆ ಕಂಪನಿಯಿಂದ ನೀಡಿದ 20 ಲಕ್ಷ ರೂ. ದೇಣಿಗೆ ಸ್ವೀಕರಿಸಿ, ಕಾರ್ಖಾನೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ದೇಣಿಗೆ ಚೆಕ್ ಅನ್ನು ಸಚಿವರಿಗೆ ಹಸ್ತಾಂತರಿಸಿದ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಸುನೀಲ್‍ಬನ್ಸಾರಿ, ಪಿಸಿಬಿ ತಯಾರಿಕೆಗಳ ಗುಣಮಟ್ಟದ ಕುರಿತು ವಿವರಿಸಿದರು. ಕಾರ್ಖಾನೆ ಈಗಾಗಲೇ ಸರ್ಕಾರದ ಬೇಡಿಕೆಯಂತೆ ವೇಂಟಿಲೇಟರ್ ಅಗತ್ಯವಾದ ತುರ್ತು ನಿರ್ವಹಣೆಗಾಗಿ 15 ಸಾವಿರ ಪಿಸಿಬಿ ತಯಾರಿಸಿ ಪೂರೈಸುತ್ತಿರುವ ಬಗ್ಗೆ ಸಚಿವರು ಪ್ರಶಂಸಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಬಿ.ಹರ್ಷವರ್ಧನ್, ಕಾರ್ಖಾನೆಯ ಮುಖ್ಯ ಹಣಕಾಸು ಅಧಿಕಾರಿ ಆರ್.ಎಸ್. ಸಿಂಹ, ಮಾನವ ಸಂಪನ್ಮೂಲ ಅಧಿಕಾರಿ ನಂದಕಿಶೋರ್ ಇದ್ದರು.

Translate »