ಮೈಸೂರು, ಮಾ.15- ಮೈಸೂರು ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳನ್ನು ಎರಡು ತಂಡಗಳಾಗಿ ವಿಭಾಗಿಸಿ ಎರಡು ದಿನಗಳು ಸಂಸ್ಥೆಯ ಮುಖ್ಯಸ್ಥರು ಮತ್ತು ಸಿಬ್ಬಂದಿಗಳಿಗೆ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಪ್ರಮಾಣಿತ ಗುಣಮಟ್ಟದ ಪೆÇೀಷಣೆ ತರಬೇತಿ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾ, ಜೆ.ಜೆ. ಕಾಯ್ದೆ ಮತ್ತು ಮಾದರಿ ನಿಯಮಗಳನ್ನು ನಿಮ್ಮ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. Suಠಿಡಿeme ಛಿouಡಿಣ ಜiಡಿeಛಿಣioಟಿs W.P. ಓo. 102 oಜಿ 2007ರ ಪ್ರಕಾರ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಕನಿಷ್ಠ ಮಟ್ಟದ ಕಾಳಜಿಯನ್ನು ನಿರ್ವಹಿಸಬೇಕು ಎಂದು ತಿಳಿಸಿದರು.
ತರಬೇತಿಯ ಪರಿಕಲ್ಪನೆ ಮತ್ತು ಉದ್ದೇಶಗಳು, ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಪ್ರಮಾಣಿತ ಗುಣಮಟ್ಟದ ಪೆÇೀಷಣೆಗೆ ಸಂಬಂಧಿಸಿದಂತೆ ಮಂಗಳೂರಿನ ಮುಖ್ಯ ತರಬೇತುದಾರರಾದ ಸಿಸ್ಟರ್ ದುಲ್ಸಿನ್ ಕ್ರಾಸ್ತಾ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಭೌತಿಕ ಮೂಲ ಸೌಕರ್ಯಗಳು ಮತ್ತು ದಾಖಲಾತಿ ನಿರ್ವಹಣೆ, ಗುಣಮಟ್ಟದ ಪಾಲನಾ ಕಾರ್ಯಕ್ರಮಗಳು, ವಿವಿಧ ಸಮಿತಿಗಳ ರಚನೆ, ಕಾರ್ಯ ನಿರ್ವಹಣೆ ಮತ್ತು ಮೇಲ್ವಿಚಾರಣೆ, ಮಕ್ಕಳ ಪಾಲನಾ ಸಂಸ್ಥೆಯ ನಿರ್ವಹಣೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಪಾತ್ರದ ಬಗ್ಗೆ ಸಂವಾದ, ಚರ್ಚೆಗಳನ್ನು ನಡೆಸಲಾಯಿತು.