ಜೂಜು ಅಡ್ಡೆಗೆ ಡಿಸಿಐಬಿ ದಾಳಿ: 13 ಮಂದಿ ಸೆರೆ, 29,100 ರೂ. ವಶ
ಮೈಸೂರು

ಜೂಜು ಅಡ್ಡೆಗೆ ಡಿಸಿಐಬಿ ದಾಳಿ: 13 ಮಂದಿ ಸೆರೆ, 29,100 ರೂ. ವಶ

March 16, 2020

ಮೈಸೂರು,ಮಾ.15(ಎಂಟಿವೈ)-ಮೈಸೂರು ಜಿಲ್ಲಾ ಡಿಸಿಐಬಿ ಪೊಲೀಸರು ತಿ.ನರಸೀ ಪುರÀ ಪೊಲೀಸ್ ಠಾಣಾ ವ್ಯಾಪ್ತಿಯ ದಳವಾಯಿ ಅಗ್ರಹಾರದ ಖಾಲಿ ಜಾಗದಲ್ಲಿದ್ದ ಜೂಜು ಅಡ್ಡೆ ಮೇಲೆ ಶನಿವಾರ ಸಂಜೆ ದಾಳಿ ನಡೆಸಿ 13 ಜೂಜುಕೋರರನ್ನು ಬಂಧಿಸಿದ್ದಾರೆ. ಪಣಕ್ಕಿಟ್ಟಿದ್ದ 29,100 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

ಸ್ಥಳೀಯರ ದೂರಿನ ಮೇರೆಗೆ ದಾಳಿ ನಡೆಸಿದ ಪೊಲೀಸರು, ಇಸ್ಪೀಟ್ ಜೂಜಾಟ ದಲ್ಲಿ ತೊಡಗಿದ್ದ ರಾಚಪ್ಪ, ಮಹೇಶ, ಮಹದೇವಸ್ವಾಮಿ, ನಿಂಗರಾಜು, ನಾಗರಾಜು, ನಾಗೇಂದ್ರ, ರಾಜು, ಮಲ್ಲಿಕಾರ್ಜುನ, ಪ್ರಸಾದ್ ಕುಮಾರ್, ನಿಂಗಪ್ಪ, ಸುದರ್ಶನ್, ಗುರು ಹಾಗೂ ಬಾಬುರಾಜ್ ಎಂಬವರನ್ನು ಬಂಧಿಸಿ, ಇಸ್ಪೀಟ್ ಎಲೆಗಳು, ಟಾರ್ಪಾಲ್, ಟಾರ್ಚ್ ವಶಪಡಿಸಿಕೊಂಡಿದ್ದಾರೆ. ಡಿಸಿಐಬಿ ಪೊಲೀಸ್ ಇನ್‍ಸ್ಪೆಕ್ಟರ್ ಸುನೀಲ್ ಕುಮಾರ್ ನೇತೃತ್ವದ ದಾಳಿಯಲ್ಲಿ ಸಿಬ್ಬಂದಿಗಳಾದ ಹರೀಶ್‍ಕುಮಾರ್ ಎಂ.ಕೆ. ಸಂದೀಪ್, ಬಿ.ಆರ್. ಸುನೀಲ್, ಸಿ.ಎಸ್.ರಾಮಪ್ರಸಾದ್ ಮತ್ತು ಜೀಪ್ ಚಾಲಕ ಚಿಕ್ಕಲಿಂಗಯ್ಯ ಹಾಗೂ ತಿ.ನರಸೀಪುರ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು. ಈ ಸಂಬಂಧ ಟಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »