ಟಿಬೆಟಿಯನ್ನರ ದಂಗೆ ದಿನ ಆಚರಣೆ ವೇಳೆ ಪ್ರಾದೇಶಿಕ ಸಂಚಾಲಕ ಜಯಪ್ರಕಾಶ್‍ರಾಜೇ ಅರಸ್ ಮನವಿ
ಮೈಸೂರು,ಮಾ.15(ಆರ್‍ಕೆಬಿ)- 1959ರಲ್ಲಿ ಕಮ್ಯುನಿಸ್ಟ್ ಚೀನಾದ ದಬ್ಬಾಳಿಕೆ, ದೌರ್ಜನ್ಯ ಖಂಡಿಸಿ ಟಿಬೆಟ್‍ನ ಮಹಿಳೆಯರು ದಿಟ್ಟತನದಿಂದ ದಂಗೆ ಎದ್ದುದರ ಸ್ಮರಣಾರ್ಥ ಮಾ.12ರಂದು `ದಂಗೆ ದಿನ’ ಆಚರಿಸಲಾಗಿದೆ. ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿ ಟೆಬೆಟಿಯನ್ನರ ಮಾನವಹಕ್ಕು ರಕ್ಷಣೆಗೆ ಮುಂದಾಗಬೇಕು ಎಂದು ಭಾರತೀಯ ಟಿಬೆಟಿಯನ್ ಸಂಸ್ಥೆಯ ಪ್ರಾದೇಶಿಕ ಸಂಚಾಲಕ ಜಯಪ್ರಕಾಶ್‍ರಾಜೇ ಅರಸ್ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಬೈಲಕುಪ್ಪೆಯ ಆರ್‍ಟಿಡಬ್ಲ್ಯುಎ ಅಧ್ಯಕ್ಷ ತಾಶಿ ಚೋಡೊನ್ ಮಾತನಾಡಿ, ಟಿಬೆಟಿಯನ್ ಸಂಸ್ಕøತಿ, ಸಂತತಿಯನ್ನೇ ನಾಶ ಮಾಡಲು ಚೀನಾ ಹೊರಟಿದ್ದು, ಅದನ್ನು ಸಂರಕ್ಷಿಸುವ ಸಲುವಾಗಿ ದಲೈ ಲಾಮಾ ನೇತೃತ್ವದಲ್ಲಿ ಎಲ್ಲೆಡೆ ಹೋರಾಟ ನಡೆದಿದೆ ಎಂದರು.
ವಿಶ್ವಸಂಸ್ಥೆ ಸಹಾ ಮಧ್ಯ ಪ್ರವೇಶಿಸಿ ದಲೈ ಲಾಮಾ ಜೊತೆ ಮಾತುಕತೆ ನಡೆಸುವಂತೆ ಕ್ರಮ ಕೈಗೊಳ್ಳಬೇಕು. ಟಿಬೆಟಿಯನ್ನರ ಮತ್ತೊಬ್ಬ ಧರ್ಮಗುರು ಪಾಂಚನೇ ಲಾಮಾ ಅವರನ್ನು ಚೀನಾ ಬಂಧನದಲ್ಲಿಟ್ಟಿದ್ದು, ಕೂಡಲೇ ಬಿಡುಗಡೆಗೊಳಿಸಬೇಕು. ಟಿಬೆಟ್ ನಲ್ಲಿ ಮಾಧ್ಯಮಗಳಿಗೆ ಸ್ವಾತಂತ್ರ್ಯ, ಮಾನವ ಹಕ್ಕುಗಳ ಮರುಸ್ಥಾಪನೆಗೆ ಚೀನಾ ಪ್ರಧಾನಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ತಾಶಿ ಯಾಂಗ್ಝೋನ್, ತಾಮ್ಡಿಂಗ್ ಡೋಲ್ಮಾ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.