ರಸ್ತೆ ಅಗಲೀಕರಣ ಕಾಮಗಾರಿ ಪುನಾರಂಭ: ಇರ್ವಿನ್ ರಸ್ತೆಯಲ್ಲಿ ಮತ್ತೆ ಸಂಚಾರ ನಿರ್ಬಂಧ
ಮೈಸೂರು

ರಸ್ತೆ ಅಗಲೀಕರಣ ಕಾಮಗಾರಿ ಪುನಾರಂಭ: ಇರ್ವಿನ್ ರಸ್ತೆಯಲ್ಲಿ ಮತ್ತೆ ಸಂಚಾರ ನಿರ್ಬಂಧ

March 16, 2020

ಮೈಸೂರು, ಮಾ.15(ಎಂಟಿವೈ)- ಮೈಸೂ ರಿನ ಇರ್ವಿನ್ ರಸ್ತೆ ಅಗ ಲೀಕರಣ ಕಾಮಗಾರಿ ಪುನಾರಂಭವಾಗಿದ್ದು, ಆ ಮಾರ್ಗದಲ್ಲಿ ಮುಂದಿನ 3 ತಿಂಗಳವರೆಗೆ ವಾಹನ ಸಂಚಾರ ನಿರ್ಬಂಧಿ ಸಿರುವುದಾಗಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ರಸ್ತೆ ಅಗಲೀಕರಣ ಕಾಮಗಾರಿಯನ್ನು ಮತ್ತೆ ಆರಂಭಿಸಿರುವ ಮೈಸೂರು ಮಹಾ ನಗರಪಾಲಿಕೆಯ ಕೋರಿಕೆ ಮೇರೆಗೆ ಇರ್ವಿನ್ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇ ಧಿಸಲಾಗಿದೆ. ನೆಹರು ವೃತ್ತದಿಂದ ಪಶ್ಚಿಮಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ವೃತ್ತದವರೆಗೆ ಎರಡೂ ದಿಕ್ಕುಗಳಲ್ಲಿ ಎಲ್ಲಾ ಮಾದರಿಯ ವಾಹನ ಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಲ್ಲದೇ ಬದಲಿ ಮಾರ್ಗದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.

ಬದಲಿ ಮಾರ್ಗ: ಇರ್ವಿನ್ ರಸ್ತೆಯಲ್ಲಿ ನೆಹರು ವೃತ್ತದಿಂದ ಪಶ್ಚಿಮಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ವೃತ್ತದವರೆಗೆ ಸಂಚರಿಸುತ್ತಿದ್ದ ನಗರ ಸಾರಿಗೆ ಬಸ್‍ಗಳು ಬಿ.ಎನ್.ರಸ್ತೆ ಯಲ್ಲಿ ನೇರವಾಗಿ ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್‍ಲೈಟ್ ವೃತ್ತ), ಚರ್ಚ್ ರಸ್ತೆ, ಸೇಂಟ್ ಫಿಲೋಮಿನಾ ಚರ್ಚ್ ವೃತ್ತ, ಅಶೋಕ ರಸ್ತೆಯಲ್ಲಿ ಸಾಗಿ, ಗುಂಚಿ ಜಂಕ್ಷನ್‍ನಲ್ಲಿ ಎಡಕ್ಕೆ ತಿರುವು ಪಡೆದು ಪುಲಿಕೇಶಿ ರಸ್ತೆ ಮೂಲಕ ನ್ಯೂ ಸಯ್ಯಾಜಿ ರಾವ್ ರಸ್ತೆ ತಲುಪಿ ಮುಂದೆ ಸಾಗಬೇಕಿದೆ.

ಭಾರಿ ವಾಹನಗಳ ಹೊರತು ಉಳಿದ ವಾಹನಗಳು ನೆಹರು ವೃತ್ತದಲ್ಲಿ ಉತ್ತರಕ್ಕೆ ಅಶೋಕ ರಸ್ತೆ ಮೂಲಕ ಸಾಗಿ ಕಬೀರ್ ರಸ್ತೆ ಜಂಕ್ಷನ್‍ನಲ್ಲಿ ಪಶ್ಚಿಮಕ್ಕೆ ತಿರುವು ಪಡೆದು ನ್ಯೂ ಸಯ್ಯಾಜಿರಾವ್ ರಸ್ತೆಯನ್ನು ತಲುಪಿ ಮುಂದೆ ಸಾಗಬೇಕು. ಸರ್ ಎಂ.ವಿಶ್ವೇಶ್ವರಯ್ಯ ವೃತ್ತದಿಂದ ಪೂರ್ವಕ್ಕೆ ನೆಹರು ವೃತ್ತದವರೆಗೆ ಇರ್ವಿನ್ ರಸ್ತೆಯಲ್ಲಿ ಸಾಗುತ್ತಿದ್ದ ಎಲ್ಲಾ ಮಾದ ರಿಯ ವಾಹನಗಳು ಸರ್ ಎಂ.ವಿಶ್ವೇಶ್ವ ರಯ್ಯ ವೃತ್ತ ದಲ್ಲಿ ದಕ್ಷಿಣಕ್ಕೆ ತಿರುವು ಪಡೆದು ಸಯ್ಯಾಜಿರಾವ್ ರಸ್ತೆ, ಸರ್ದಾರ್ ವಲ್ಲಭ ಬಾಯಿ ಪಟೇಲ್ ರಸ್ತೆ, ಗಾಂಧಿ ವೃತ್ತ ಮಾರ್ಗ ದಲ್ಲಿ ಸಾಗಿ ಮಹಾವೀರ ವೃತ್ತದಲ್ಲಿ ಬಲ ತಿರುವು ಪಡೆದು ಪುರಭವನದ ಮುಂಭಾ ಗದ ರಸ್ತೆಯಲ್ಲಿ ಸಂಚರಿಸುವಂತೆ ಸೂಚನೆ ನೀಡಲಾಗಿದೆ ಎಂದು ಆಯುಕ್ತರು ಪ್ರಕ ಟಣೆಯಲ್ಲಿ ಸೂಚನೆ ನೀಡಿದ್ದಾರೆ.

Translate »