ಕೋವಿಡ್ ಸುರಕ್ಷತಾ ಮಾರ್ಗಸೂಚಿ ಜಾಗೃತಿ ಅಭಿಯಾನಕ್ಕೆ ಚಾಲನೆ
ಮೈಸೂರು

ಕೋವಿಡ್ ಸುರಕ್ಷತಾ ಮಾರ್ಗಸೂಚಿ ಜಾಗೃತಿ ಅಭಿಯಾನಕ್ಕೆ ಚಾಲನೆ

October 21, 2020

ಮೈಸೂರು, ಅ.20- ದಸರಾ ಮತ್ತು ಆಯುಧ ಪೂಜೆ ಸಂದರ್ಭದಲ್ಲಿ ಕೋವಿಡ್ -19 ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸುವ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಜಾಗೃತಿ ಅಭಿಯಾನಕ್ಕೆ ಮೈಸೂರಿನಲ್ಲಿ ಚಾಲನೆ ನೀಡಿತು. ಈ ಅಭಿಯಾನದಲ್ಲಿ ಉಜ್ಜೀವನ್ ಎಸ್‍ಎಫ್‍ಬಿ ವ್ಯಾನ್‍ಗಳು ಕರ್ನಾಟಕದ ಸಾಂಪ್ರದಾಯಿಕ ಗೊಂಬೆಗಳನ್ನು ಪ್ರದರ್ಶಿಸ ಲಿವೆ. ರಾಜ್ಯದ 16 ನಗರಗಳಲ್ಲಿ ಸಂಚರಿಸುವ ಈ ವಾಹನಗಳು ಕೋವಿಡ್-19 ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಿವೆ.

ಉಜ್ಜೀವನ್ ಎಸ್‍ಎಫ್‍ಬಿ ಇದರಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಕೋವಿಡ್ ಸುರಕ್ಷತಾ ಕಿಟ್‍ಗಳು ಮತ್ತು ಮಾರ್ಗಸೂಚಿಗಳನ್ನು ವಿತರಿಸಲಿದೆ. ಹಬ್ಬದ ಸಂದರ್ಭ ದಲ್ಲಿ ಜನರು ಎಲ್ಲಾ ಅಗತ್ಯವಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಮಾರ್ಗಸೂಚಿಗಳನ್ನು ಪಾಲಿಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಈ ಅಭಿಯಾನದ ವ್ಯಾನ್‍ಗಳು ಬೆಂಗಳೂರು, ಕೆಂಗೇರಿ, ಮೈಸೂರು, ಮದ್ದೂರು, ಚನ್ನಪಟ್ಟಣ, ಶ್ರೀರಂಗಪಟ್ಟಣ, ರಾಮನಗರ, ಚಾಮರಾಜ ನಗರ ಮತ್ತು ಕೊಳ್ಳೇಗಾಲ ಸೇರಿದಂತೆ 16 ನಗರಗಳಲ್ಲಿ ಸಂಚರಿಸಲಿವೆ. ಈ ಎಲ್ಲಾ ನಗರಗಳ ನಾಗರಿಕರು ಈ ಅಭಿಯಾನದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪಾಲ್ಗೊಂಡು ಕೋವಿಡ್ ಸುರಕ್ಷತೆಗಳ ಬಗ್ಗೆ ಮಾಹಿತಿಗಳನ್ನು ಪಡೆಯುವಂತೆ ಕೋರಲಾಗಿದೆ.

 

 

 

Translate »