ಮೈಸೂರಲ್ಲಿ `ಅಂಬಾರಿ’ ಸೇವೆಗೆ ಅಡ್ಡಿಯಾದ ದೀಪಾಲಂಕಾರ!
ಮೈಸೂರು

ಮೈಸೂರಲ್ಲಿ `ಅಂಬಾರಿ’ ಸೇವೆಗೆ ಅಡ್ಡಿಯಾದ ದೀಪಾಲಂಕಾರ!

October 21, 2020

ಮೈಸೂರು, ಅ.20(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವದ `ಅಂಬಾರಿ’ ವೇಳೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಝಗಮಗಿಸುವ ಮೈಸೂರು ನಗರದ ಸೌಂದÀರ್ಯ ಕಣ್ತುಂಬಿಕೊಳ್ಳಲು ಕಾದಿದ್ದ ಪ್ರವಾಸಿಗರು ಮತ್ತು ಮೈಸೂರಿಗರಿಗೆ ನಿರಾಸೆಯಾಗಿದೆ. ವಿದ್ಯುತ್ ತಂತಿ ಹಾಗೂ ದೀಪಾಲಂಕಾರಕ್ಕಾಗಿ ಜೋಡಿಸಿದ ವೈರ್‍ಗಳು ರಸ್ತೆಗೆ ಅಡ್ಡಲಾಗಿ ಜೋತು ಬಿದ್ದಿರುವುದರಿಂದಾಗಿ ಈ ಬಾರಿ ಅಂಬಾರಿ ಸಂಚಾರ ವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‍ಟಿಡಿಸಿ) ಈ ಬಾರಿಯೂ ದಸರೆ ವೇಳೆ ಡಬ್ಬಲ್‍ಡೆಕ್ಕರ್ ಬಸ್ `ಅಂಬಾರಿ’ ಸಂಚರಿಸಲು ಕ್ರಮ ಕೈಗೊಂಡಿತ್ತು. ಛಾವಣಿರಹಿತÀ ಮಹಡಿ ಬಸ್ ಸಂಚಾ ರಕ್ಕೆ ವ್ಯವಸ್ಥೆ ಮಾಡಿತ್ತು. ನಿಗದಿಯಂತೆ ನವರಾತ್ರಿ (ಅ.17) ದಿನದಿಂದಲೇ ಮೈಸೂರು ಪ್ರದಕ್ಷಿಣೆ ಹಾಕಬೇಕಿದ್ದ ಅಂಬಾರಿ ಸಂಚಾರ ಆರಂಭಿಸಲಿಲ್ಲ. ಫೆಬ್ರವರಿಯಲ್ಲಿ ಮೈಸೂ ರಿಗೆ ತಂದಿದ್ದ ಡಬ್ಬಲ್ ಡೆಕ್ಕರ್ ಬಸ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೆಎಸ್‍ಟಿಡಿಸಿ ಕಚೇರಿ ಆವರಣದಲ್ಲಿ ನಿಂತಿದೆ. ಇನ್ನೂ 1 ತಿಂಗಳು ಅಲ್ಲಿಯೇ ನಿಲ್ಲುವ ಸಾಧ್ಯತೆ ಇದೆ.

ರಸ್ತೆಗಿಳಿಯಲು ತಡೆ: ದಸರಾ ವೇಳೆ 14 ಪ್ರಮುಖ ಪ್ರವಾಸಿತಾಣಗಳ ಪರಿಚಯ ಮಾಡಿಕೊಡಲು 5 ಡಬ್ಬಲ್ ಡೆಕ್ಕರ್ ಬಸ್ ಸಜ್ಜಾಗಿದ್ದವು. ಈಗಾಗಲೇ ಒಂದು ಬಸ್ ಮೈಸೂರಲ್ಲಿದ್ದರೆ, 5 ಬಸ್ ಬೆಂಗಳೂರಲ್ಲಿವೆ. ಅದರಲ್ಲಿ ದಸರೆ ವೇಳೆ 4-5 ಬಸ್ ಬಳಸಿಕೊಳ್ಳಲು ಚಿಂತಿಸ ಲಾಗಿತ್ತು. ಅಂಬಾರಿ ಬಸ್ 20 ಅಡಿ ಎತ್ತರವಿದ್ದುದ ರಿಂದ ಅದು ಸಾಗುವ ರಸ್ತೆಯಲ್ಲಿ 25 ಅಡಿ ಎತ್ತರದ ವರೆಗೂ ಕೊಂಬೆ, ವಿದ್ಯುತ್ ತಂತಿ ಅಡ್ಡ ಬಾರದಂತೆ ನೋಡಿಕೊಳ್ಳುವ ಅಗತ್ಯವಿತ್ತು. ಜೆಎಲ್‍ಬಿ ರಸ್ತೆ, ಬೋಗಾದಿ ರಸ್ತೆ, ವಿವಿ ಆವರಣ, ಓಪನ್ ಏರ್ ಥಿಯೇ ಟರ್ ರಸ್ತೆ, ಲಲಿತಮಹಲ್ ರಸ್ತೆ ಸೇರಿದಂತೆ 15 ಪ್ರವಾಸಿ ತಾಣಗಳ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಜೋತು ಬಿದ್ದಿರುವ ಮರದ ಕೊಂಬೆ ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಹಲವೆಡೆ 15-20 ಅಡಿ ಎತ್ತರದಲ್ಲಿ ಈಗ ವಿದ್ಯುತ್ ತಂತಿ ಜೋತು ಬಿದ್ದಿರುವುದು ಕಂಡಿದ್ದ ರಿಂದ ಅಂಬಾರಿ ಸಂಚಾರ ಮುಂದೂಡಲಾಗಿದೆ.

ಕೆಎಸ್‍ಟಿಡಿಸಿ ಮನವಿ ಮೇರೆಗೆ ವಿದ್ಯುತ್ ತಂತಿ ತೆರವು ಗೊಳಿಸಲು ಸೆಸ್ಕ್ ಟೆಂಡರ್ ಕರೆದಿತ್ತು. ವಿದ್ಯುತ್ ಲೈನ್ ತೆರವು ಕೆಲಸ ಆರಂಭವಾದರೂ ದಸರೆ ಆರಂಭಕ್ಕೂ ಮುನ್ನ ಕಾಮಗಾರಿ ಮುಗಿದಿಲ್ಲ. ಅಂಬಾರಿ ಬಸ್ ಸಂಚಾರ ಮುಂದೂಡಿದ್ದರಿಂದ ದೀಪಾಲಂಕಾರ ಕಣ್ತುಂಬಿ ಕೊಳ್ಳುವ ಆಸೆ ಹೊಂದಿದ್ದ ಹಲವು ಮಂದಿಗೆ ನಿರಾಸೆ ಯಾಗಿದೆ. ವಿದ್ಯುತ್ ದೀಪಾಲಂಕಾರ ಕೊನೆಗೊಳಿಸಿದ ಬಳಿಕ ನವೆಂಬರ್ 2ನೇ ವಾರ 3-4 ಡಬ್ಬಲ್ ಡೆಕ್ಕರ್ ಬಸ್ ಮೈಸೂರಲ್ಲಿ ಸಂಚರಿಸುವುದು ಖಚಿತ ಎನ್ನಲಾಗಿದೆ.

Translate »