ಮೈಸೂರು, ಮೇ 25(ಆರ್‍ಕೆ)- ಕೋವಿಡ್-19 ಲಾಕ್‍ಡೌನ್‍ನಿಂದಾಗಿ ನೆನೆಗುದಿಗೆ ಬಿದ್ದಿದ್ದ ಮೈಸೂರಿನ ಇರ್ವಿನ್ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮ ಗಾರಿ ಜೂನ್ 1 (ಸೋಮವಾರ)ರಿಂದ ಆರಂಭವಾಗಲಿದೆ.
ಎರಡೂ ಬದಿಯಲ್ಲಿ ಗುರ್ತಿಸಲಾಗಿದ್ದ ಕಟ್ಟಡಗಳ ಭಾಗಶಃ ನೆಲ ಸಮಗೊಳಿಸುವ ಕಾರ್ಯ ಪ್ರಗತಿಯಲ್ಲಿದ್ದು, ನೆಹರು ಸರ್ಕಲ್‍ನಿಂದ ಸರ್ಕಾರಿ ಆಯು ರ್ವೇದ ಕಾಲೇಜು ಸರ್ಕಲ್‍ವರೆಗೆ ಇದ್ದ 86 ಆಸ್ತಿಗಳ ಪೈಕಿ 80 ಕಟ್ಟಡಗಳನ್ನು (ರಸ್ತೆ ಅಗಲೀಕರಣಕ್ಕೆ ಬೇಕಾದ ಜಾಗ) ಕೆಡವ ಲಾಗಿದ್ದು, ಉಳಿದ 6 ಕಟ್ಟಡಗಳ ನೆಲಸಮ ಕಾರ್ಯ ಈ ವಾರ ಪೂರ್ಣಗೊಳ್ಳಲಿದೆ. ನಂತರ ಜೂನ್ 1ರಿಂದ ಇರ್ವಿನ್ ರಸ್ತೆ ಅಗಲೀ ಕರಣಗೊಳಿಸಿ ಎರಡೂ ಕಡೆ ಕಾಂಕ್ರಿಟ್ ಬಾಕ್ಸ್ ಡ್ರೇನ್, ಫುಟ್‍ಪಾತ್ ಹಾಗೂ ಮೀಡಿ ಯನ್ ಸಮೇತ ಜೋಡಿ ರಸ್ತೆಯಾಗಿ ಅಭಿವೃದ್ಧಿಗೊಳಿಸುವ ಕಾಮಗಾರಿ ಆರಂಭ ವಾಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾಮಗಾರಿಗಾಗಿ ಇರ್ವಿನ್ ರಸ್ತೆ ವಾಹನ ಸಂಚಾರ ಬಂದ್ ಮಾಡಿ ಬದಲಿ ಮಾರ್ಗ ನಿಗದಿಗೊಳಿಸಿ ನಗರ ಪೊಲೀಸ್ ಆಯು ಕ್ತರು ಶೀಘ್ರ ಅಧಿಸೂಚನೆ ಹೊರಡಿಸಲಿದ್ದಾರೆ.