7.80 ಕೋಟಿ ರೂ. ವೆಚ್ಚದ ಹೆಚ್ಚುವರಿ ಕಟ್ಟಡ ಕಾಮಗಾರಿಗೆ ಗುದ್ದಲಿಪೂಜೆ
ಮೈಸೂರು

7.80 ಕೋಟಿ ರೂ. ವೆಚ್ಚದ ಹೆಚ್ಚುವರಿ ಕಟ್ಟಡ ಕಾಮಗಾರಿಗೆ ಗುದ್ದಲಿಪೂಜೆ

June 28, 2020

ಮೈಸೂರು, ಜೂ.27 (ಆರ್‍ಕೆಬಿ)- ಮೈಸೂರಿನ ಮೆಟ್ರೊಪೋಲ್ ವೃತ್ತದ ಬಳಿಯಿರುವ ಮಹಾರಾಣಿ ಮಹಿಳಾ ವಿಜ್ಞಾನ ಪ್ರಥಮ ದರ್ಜೆ ಪದವಿ ಕಾಲೇಜಿನ ಆವರಣದಲ್ಲಿ ಸರ್ಕಾರದ 7.80 ಕೋಟಿ ರೂ. ಅನುದಾನದಲ್ಲಿ ಕಾಲೇಜಿನ ಹೆಚ್ಚುವರಿ ಕಟ್ಟಡದ ನಿರ್ಮಾಣ ಕಾಮಗಾರಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು.

794.21 ಚದರ ಮೀಟರ್‍ನ ನೆಲ ಮಹಡಿ, ಒಂದು ಮತ್ತು ಎರಡನೇ ಮಹಡಿ, 701.20 ಚದರ ಮೀಟರ್‍ನಲ್ಲಿ 3ನೇ ಮಹಡಿ ಕಟ್ಟಡದಲ್ಲಿ ಒಟ್ಟು 5 ಪ್ರಯೋಗಾಲಯ, 20 ಹೆಚ್ಚುವರಿ ತರಗತಿ ಕೊಠಡಿ ಗಳು ಹಾಗೂ 4 ಶೌಚಾಲಯಗಳನ್ನು ನಿರ್ಮಿಸ ಲಾಗುವುದು ಎಂದು ಶಾಸಕರು ತಿಳಿಸಿದರು.

ಈ ಸಂದರ್ಭ ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಕಾಲೇಜಿನ ಪ್ರಾಂಶುಪಾಲ ಶಾಂತಪ್ಪ, ಜಂಟಿ ನಿರ್ದೇಶಕ ಮೂಗೇಶಪ್ಪ, ಬಿಜೆಪಿ ಚಾಮರಾಜ ಕ್ಷೇತ್ರ ಅಧ್ಯಕ್ಷ ಸೋಮ ಶೇಖರರಾಜು, ಪ್ರಧಾನ ಕಾರ್ಯದರ್ಶಿ ಪುನೀತ್, ಯುವ ಮೋರ್ಚಾ ಚಾಮರಾಜ ಕ್ಷೇತ್ರ ಘಟಕ ಅಧ್ಯಕ್ಷ ಸಚಿನ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ, ರೈತ ಮೋರ್ಚಾ ನಗರ ಅಧ್ಯಕ್ಷ ದೇವರಾಜು, ನಾಗೇಶ್, ಜ್ಯೋತಿ, ಬಲರಾಮ್ ಇನ್ನಿತರರು ಉಪಸ್ಥಿತರಿದ್ದರು.

Translate »