ಉಚಿತ ಸಾಮೂಹಿಕ ವಿವಾಹ ಸಪ್ತಪದಿ ಪ್ರಚಾರ ರಥಕ್ಕೆ ಚಾಲನೆ
ಚಾಮರಾಜನಗರ

ಉಚಿತ ಸಾಮೂಹಿಕ ವಿವಾಹ ಸಪ್ತಪದಿ ಪ್ರಚಾರ ರಥಕ್ಕೆ ಚಾಲನೆ

March 10, 2020

ಚಾಮರಾಜನಗರ, ಮಾ.9- ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೊಳಪಡುವ ಚಾ. ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಾಲಯದಲ್ಲಿ ಸರ್ಕಾರದ ವತಿಯಿಂದ ಏ.26 ನಡೆಯುವ ಸಪ್ತಪದಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮ ಕುರಿತು ಮಾಹಿತಿ ನೀಡುವ ಪ್ರಚಾರ ರಥಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಿಪಂ ಅಧ್ಯಕ್ಷೆ ಶಿವಮ್ಮ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಸಿರು ನಿಶಾನೆ ತೋರುವ ಮೂಲಕ ಸಪ್ತಪದಿ ಪ್ರಚಾರ ರಥಕ್ಕೆ ಚಾಲನೆ ನೀಡಿದರು.

ಸಪ್ತಪದಿ ಸರಳ ವಿವಾಹ ಯೋಜನೆ ಯಡಿ ವಿವಾಹವಾಗುವ ಜೋಡಿಗಳಿಗೆ ನೀಡಲಾಗುವ ಸೌಲಭ್ಯ ಕುರಿತ ಸಂಪೂರ್ಣ ಮಾಹಿತಿ ಪ್ರಚಾರ ರಥದಲ್ಲಿ ಅಳವಡಿಸ ಲಾಗಿದೆ. ವಿವಾಹವಾಗಲು ಬಯಸುವ ಜೋಡಿ ಗಳು ಅರ್ಜಿಗಳನ್ನು ಎಲ್ಲೆಲ್ಲಿ ಪಡೆಯಬಹು ದೆಂಬ ಮಾಹಿತಿಯೂ ಸಹ ಪ್ರಚಾರ ರಥದಲ್ಲಿ ಲಭ್ಯವಿದೆ.

ಜಿಲ್ಲೆಯ ವಿವಿಧೆಡೆ ಪ್ರಚಾರ ರಥ ಸಂಚಾರ: ಮಾ.10ರಂದು ಕೊಳ್ಳೇಗಾಲ ಟೌನ್, 11ರಂದು ಪಾಳ್ಯ ಹೋಬಳಿ ಎಲ್ಲಾ ಗ್ರಾಮಗಳು, 12ರಂದು ಹನೂರು ಟೌನ್, 13 ರಂದು ರಾಮಪುರ ಹೋಬಳಿ ಎಲ್ಲಾ ಗ್ರಾಮಗಳು, 14ರಂದು ಲೊಕ್ಕನಹಳ್ಳಿ ಎಲ್ಲಾ ಗ್ರಾಮಗಳಲ್ಲಿ, 15ರಂದು ಯಳಂ ದೂರು ಟೌನ್ ಹಾಗೂ ಬಿಳಿಗಿರಿರಂಗನ ಬೆಟ್ಟ, 16ರಂದು ಅಗರ ಹೋಬಳಿ ಎಲ್ಲಾ ಗ್ರಾಮಗಳು, 17ರಂದು ಸಂತೇಮರಹಳ್ಳಿ ಹೋಬಳಿ ಎಲ್ಲಾ ಗ್ರಾಮಗಳು, 18ರಂದು ಗುಂಡ್ಲುಪೇಟೆ, 19ರಂದು ಬೇಗೂರು ಹೋಬಳಿ ಎಲ್ಲಾ ಗ್ರಾಮ, 20 ರಂದು ತೆರಕಣಾಂಬಿ ಎಲ್ಲಾ ಗ್ರಾಮ, 21 ರಂದು ಹಂಗಳ ಹೋಬಳಿ ಎಲ್ಲಾ ಗ್ರಾಮ, 22 ರಂದು ಹರವೆ ಹೋಬಳಿ ಎಲ್ಲಾ ಗ್ರಾಮ, 23 ರಂದು ಹರದನಹಳ್ಳಿ ಮತ್ತು ಚಂದಕ ವಾಡಿ ಹೋಬಳಿ ವ್ಯಾಪ್ತಿಯಲ್ಲಿ ಪ್ರಚಾರ ರಥ ಸಂಚರಿಸಲಿದೆ. 24 ರಂದು ಚಾ.ನಗರ ಜಿಲ್ಲಾ ಕೇಂದ್ರಕ್ಕೆ ಸಪ್ತಪದಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದ ಪ್ರಚಾರ ರಥ ವಾಪಸ್ಸಾಗಲಿದೆ. ಈ ವೇಳೆ ಜಿಪಂ ಸಿಇಓ ಬಿ.ಹೆಚ್.ನಾರಾಯಣ್ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಕೊಳ್ಳೇಗಾಲ ಉಪವಿಭಾಗಾಧಿಕಾರಿ ನಿಖಿತಾ ಎಂ.ಚಿನ್ನಸ್ವಾಮಿ ಹಾಜರಿದ್ದರು.

Translate »