ಹನೂರು,ಮಾ.9-ತಾಲೂಕಿನ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ಶ್ರೀಕ್ಷೇತ್ರ ಬೂದುಬಾಳು ಗುಡಿಹಟ್ಟಿ ವೆಂಕಟ ರಮಣಸ್ವಾಮಿ ಬ್ರಹ್ಮರಥೋತ್ಸವ ಸಾವಿ ರಾರು ಭಕ್ತರ ಸಮ್ಮುಖದಲ್ಲಿ ವಿಜೃಂ ಭಣೆಯಿಂದ ನಡೆಯಿತು.
ಬ್ರಹ್ಮ ರಥೋತ್ಸವಕ್ಕೂ ಮುನ್ನ ಬೆಳಿಗ್ಗೆ 11 ಗಂಟೆ ವೇಳೆ ಪ್ರತಿ ವರ್ಷದಂತೆ ಗರುಡ ಪಕ್ಷಿ ಬಂದ ದೇವರಿಗೆ ವಿಧಿವಿಧಾನಗ ಳೊಂದಿಗೆ ಪೂಜೆ ಸಲ್ಲಿಸಿ ಗರ್ಭ ಗುಡಿಯಲ್ಲಿದ್ದ ಶ್ರೀವೆಂಕಟರಮಣಸ್ವಾಮಿ ಯನ್ನು ಹೆಗಲ ಮೇಲೆ ಹೊತ್ತು ತಮಟೆ ಸದ್ದಿನೊಂದಿಗೆ ದೇವಾಲಯದಿಂದ ಹೊರ ಬರುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರು ಹಾಗೂ ಅಲ್ಲಿ ನೆರೆದಿದ್ದ ಸಾಂಪ್ರದಾಯಕ ಉಡುಗೆ ಧರಿಸಿದ್ದ ದಾಸರ ತಂಡ ಕರಿ ಯಣ್ಣ ಕೆಂಚಣ್ಣ ಎಂಬ 2 ಸುರಪಾನಿ ಸತ್ತಿಗೆ ಹಿಡಿದು ಶಂಖ ಉದುತ್ತಾ ಜಾಗಟೆ ಬಡಿ ಯುತ್ತ ಶ್ರೀವೆಂಕರಮಣ ಗೋವಿಂದ… ಗೋವಿಂದ… ಎಂದು ಘೋಷಣೆ ಕೂಗಿದರು.
ಬಳಿಕ ರಥದಲ್ಲಿ ವೆಂಕಟರಮಣಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿ ಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡ ಲಾಯಿತು. ರಥ ಮುಂದೆ ಸಾಗುತ್ತಿದಂತೆ ನೆರೆದಿದ್ದ ಭಕ್ತ ಸಮೂಹ ಉರಿಬಿಸಿಲನ್ನು ಲೆಕ್ಕಿಸದೆ ತಾವು ಬೆಳೆದಿದ್ದ ರಾಗಿ, ಜೋಳ, ಅಕ್ಕಿ, ಬಾಳೆಹಣ್ಣು, ಜವನ, ಹೂ, ಹಣ ಎಸೆದು ತಮ್ಮ ಹರಕೆ ತೀರಿಸಿದ್ದರು.
ರಥೋತ್ಸವದಲ್ಲಿ ಹನೂರು ಸೇರಿದಂತೆ ಮಂಗಲ, ಕಣ್ಣೂರು, ಹನೂರು, ಸಿಂಗನ ಲ್ಲೂರು, ಕಾಮಗೆರೆ, ಶಾಗ್ಯ, ಮಣಗಳ್ಳಿ, ದೊಡ್ಡಿಂದುವಾಡಿ, ಬಂಡಳ್ಳಿ, ಚನ್ನಲಿಂಗನ ಹಳ್ಳಿ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಜಾತ್ರೆಗೆ ಆಗಮಿಸುವ ಭಕ್ತರಿಗೆ ಹರಕೆ ಹೊತ್ತ ದಾನಿಗಳು ಅಲ್ಲಲ್ಲಿ ಪಾನಕ, ಮಜ್ಜಿಗೆ ವಿತರಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.