ಕುಶಾಲನಗರ,ಮಾ.9-ಸೋಮವಾರ ಪೇಟೆ ತಾಲೂಕಿನ ಅರೆಮಲೆನಾಡು ಹಾಗೂ ಬಯಲುಸೀಮೆ ಪ್ರದೇಶವಾದ ಶಿರಂಗಾಲ ಗ್ರಾಮದಲ್ಲಿ ಸೋಮವಾರ ಶ್ರೀ ಉಮಾ ಮಹೇಶ್ವರ ದೇವರ ರಥೋತ್ಸವ ವೈಭವ ಯುತವಾಗಿ ನಡೆಯಿತು.
ಗ್ರಾಮದ ಕಾವೇರಿ ನದಿ ದಂಡೆಯ ಮೇಲೆ ಇರುವ ಶ್ರೀ ಉಮಾಮಹೇಶ್ವರ ದೇವಸ್ಥಾನವನ್ನು 9 ನೇ ಶತಮಾನದಲ್ಲಿ ಚೋಳರ ಒಂದನೇ ರಾಜ ರಾಜ ಜೋಳ ನಿರ್ಮಾಣ ಮಾಡಿದರು. ಪ್ರತಿ ಶಿವರಾತ್ರಿ ಯಂದು ವಿಶೇಷ ಪೂಜಾ ಕಾರ್ಯ ನಡೆ ಯುವುದರೊಂದಿಗೆ ಆ ದಿನದಂದು ಸೂರ್ಯೋದಯದ ಸೂರ್ಯನ ಕಿರಣಗಳು ನೇರವಾಗಿ ಉಮಾಮಹೇಶ್ವರ ದೇವ ಸ್ಥಾನದ ವಿಗ್ರಹದ ಮೇಲೆ ಬೀಳುತ್ತವೆ. ಇದು ಈ ದೇವಾಲಯದ ವೈಶಿಷ್ಟ್ಯವಾಗಿದೆ.
ಶ್ರೀ ಮಂಟಿಗಮ್ಮ ಹಾಗೂ ಉಮಾ ಮಹೇಶ್ವರ ಪ್ರಸನ್ನ ದೇವಾಲಯ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಮಸ್ಥರ ಸಹಕಾರದೊಂದಿಗೆ ವಾರ್ಷಿಕ ರಥೋತ್ಸವ. ವೈಶಿಷ್ಟ್ಯ ಪೂರ್ಣ ವಾಗಿ ಆಚರಿಸಿ ಸಂಭ್ರಮಿಸಿದರು.
ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಅರ್ಚಕ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು. ರಥೋತ್ಸವದ ಅಂಗವಾಗಿ ಉಮಾಮಹೇಶ್ವರ ವಿಗ್ರಹಕ್ಕೆ ವಿವಿಧ ಪುಷ್ಪಗಳಿಂದ ಶೃಂಗರಿಸಲಾಗಿತ್ತು. ದೇವಾಲಯವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮ ವನ್ನು ಹಸಿರು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ವಿವಿಧ ಪುಷ್ಪಾ ಹಾಗೂ ಭಗವಾಧ್ವಜ ಗಳಿಂದ ಅಲಂಕರಿಸಿದ್ದ ರಥಕ್ಕೆ ಶ್ರೀ ಉಮಾ ಮಹೇಶ್ವರ, ಪಾರ್ವತಿ, ಗಣೇಶ, ನಂದಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ನಂತರ ಮಹಾ ಮಂಗಳಾರತಿಯೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ರಥವನ್ನು ದೇವಾಲಯ ಬಳಿ ಯಿಂದ ಗ್ರಾಮದ ಪ್ರಮುಖ ಬೀದಿ ಮೂಲಕ ಸಂತೆಮಾಳದವರೆಗೂ ಎಳೆ ದರು. ರಥೋತ್ಸವದ ಮೆರವಣಿಗೆಯಲ್ಲಿ ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು. ಈಡುಗಾಯಿ, ಹಣ್ಣು ಜವನ ರಥಕ್ಕೆ ಎಸೆದು ಭಕ್ತಿ ಮೆರೆದರು. ಮೆರವಣಿಗೆ ಸಂದರ್ಭ ಗ್ರಾಮಸ್ಥರು ಮಜ್ಜಿಗೆ,ಪಾನಕ ವಿತರಿಸಿದರು.
ಕಲಾವಿದ ಉದ್ದೂರುಹೊಸಳ್ಳಿಯ ರವಿ ತಂಡದವರ ವೀರಗಾಸೆ ಕುಣಿತ ಮತ್ತು ಮಂಗಳವಾದ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಯೋಜ ಕತ್ವದಲ್ಲಿ ಪೂಜಾ ಕುಣಿತ, ಡೊಳ್ಳು, ಕಂಸಾ ಳೆಯ ಕಲಾ ತಂಡಗಳು ಮೆರುಗು ನೀಡಿದವು.ದೇವಾಲಯ ಸಮಿತಿ ಅಧ್ಯಕ್ಷ ರುದ್ರಪ್ಪ ಹಾಗೂ ಕಾರ್ಯದರ್ಶಿ ಎಸ್.ಎಸ್. ಮಹೇಶ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.
ಕಳೆದ ಮೂರುನಾಲ್ಕು ವರ್ಷಗಳ ಹಿಂದೆ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋ ತ್ಥಾನ ಟ್ರಸ್ಟ್ ಮತ್ತು ಕರ್ನಾಟಕ ಸರ್ಕಾರ ಪ್ರಾಚ್ಯ ವಸ್ತು ಇಲಾಖೆ ಹಾಗೂ ಗ್ರಾಮದ ದೇವತಾ ಸಮಿತಿಯ ಆರ್ಥಿಕ ನೆರವಿನಿಂದ ಸುಮಾರು ರೂ.10 ಲಕ್ಷ ವೆಚ್ಚದಲ್ಲಿ ಉಮಾ ಮಹೇಶ್ವರ ದೇವಸ್ಥಾನವನ್ನು ನವೀ ಕರಣಗೊಳಿಸಲಾಗಿದೆ. ಜೊತೆಗೆ ಸಮಿತಿ ವತಿಯಿಂದ ಸಭಾಂಗಣ ನಿರ್ಮಾಣ ಮಾಡಿ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸಮಿತಿ ಕಾರ್ಯದರ್ಶಿ ಎಸ್.ಎಸ್.ಮಹೇಶ್ ತಿಳಿಸಿದರು.ದೇವಾಲಯದ ಆವರಣದಲ್ಲಿ ಸೇರಿದ್ದ ಜಾತ್ರೆ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸಿತು.
ಈ ಹಬ್ಬಕ್ಕೆ ಹಾಸನ ಮತ್ತು ಮೈಸೂರು ಜಿಲ್ಲೆಗಳ ಗಡಿ ಗ್ರಾಮದ ಜನತೆ, ಶಿರಂ ಗಾಲ, ತೊರೆನೂರು, ಮಣಜೂರು, ಕಾಳಡನ ಕೊಪ್ಪಲು, ಹೆಬ್ಬಾಲೆ, ನಲ್ಲೂರು, ಅಳುವಾರ, ಸಿದ್ಧಲಿಂಗಪುರ, ಸಿದ್ಧಾಪುರ ಮತ್ತಿತರ ಗ್ರಾಮ ಗಳಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಈ ಸಂದರ್ಭ ಗ್ರಾ.ಪಂ.ಅಧ್ಯಕ್ಷ ಮಂಜು ನಾಥ್, ಮಾಜಿ ಅಧ್ಯಕ್ಷ ಎಸ್.ವಿ.ನಂಜುಂ ಡಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್.ಚಂದ್ರ ಶೇಖರ್, ಸಮಿತಿ ಉಪಾಧ್ಯಕ್ಷ ರಮೇಶ್, ಮಾಜಿ ಕಾರ್ಯದರ್ಶಿ ಸಿ.ಎನ್. ಲೋಕೇಶ್, ಮುಖಂಡರಾದ ಎಸ್.ವಿ. ಧರಣೇಂದ್ರ ಕುಮಾರ್, ಎಸ್.ಟಿ.ಅಶ್ವತ್ಥ ಕುಮಾರ್, ಬಿ.ಎಸ್. ಬಸವಣ್ಣ, ಎಸ್.ಪಿ.ರಾಜು, ಎಸ್. ಎಸ್. ಶ್ರೀನಿವಾಸ್, ಎಸ್.ಆರ್.ಕಾಳಿಂ ಗಪ್ಪ, ಎಸ್.ಬಿ.ಸೋಮಶೇಖರ್, ಎಸ್.ಸಿ.ರಾಜು, ಎಸ್.ಎ.ಯೋಗೇಶ್, ಎಸ್.ಕೆ.ಪ್ರಸನ್ನ, ಎಸ್.ಕೆ.ರಾಜು, ಎಸ್.ಸಿ.ನೇಮೇಶ್ ಹಾಜರಿದ್ದರು. ದಾನಿಗಳಾದ ಡಿ.ಆರ್. ಚಂದ್ರಿಕಾಕೃಷ್ಣಶೆಟ್ಟಿ ಅವರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಿದರು.