ಎನ್‌ಇಪಿ-೨೦೨೦ ಯುಜಿ ಇತಿಹಾಸ ಅಭಿವಿನ್ಯಾಸ ಕಾರ್ಯಕ್ರಮಕ್ಕೆ ಚಾಲನೆ
ಮೈಸೂರು

ಎನ್‌ಇಪಿ-೨೦೨೦ ಯುಜಿ ಇತಿಹಾಸ ಅಭಿವಿನ್ಯಾಸ ಕಾರ್ಯಕ್ರಮಕ್ಕೆ ಚಾಲನೆ

November 17, 2021

ಎನ್‌ಇಪಿ ಸಮರ್ಪಕ ಅನುಷ್ಠಾನ ನಮ್ಮೆಲ್ಲರ ಜವಾಬ್ದಾರಿ: ಕುಲಪತಿ

ಮೈಸೂರು, ನ.೧೬ (ಆರ್‌ಕೆಬಿ)- ರಾಷ್ಟಿçÃಯ ಶಿಕ್ಷಣ ನೀತಿ (ಎನ್‌ಇಪಿ-೨೦೨೦) ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವುದರ ಜೊತೆಗೆ ಅವರ ಬದುಕು ರೂಪಿಸಲು ಅಗತ್ಯವಾದ ಸಿಲಬಸ್ ರೂಪಿ ಸಬೇಕು. ನಮ್ಮ ಕೌಶಲವನ್ನು ಬಳಸಿಕೊಳ್ಳ ಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಶಿಕ್ಷ ಕರು ಅರಿವು ಮೂಡಿಸಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ತಿಳಿಸಿದರು.
ಮೈಸೂರಿನ ಮಾನಸಗಂಗೋತ್ರಿ ರಾಣ ಬಹದ್ದೂರ್ ಸಭಾಂಗಣದಲ್ಲಿ ಇತಿಹಾಸ ಅಧ್ಯಯನ ವಿಭಾಗ ಮತ್ತು ಶ್ರೀ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಮಾ ಜಿಕ ಅಭಿವೃದ್ಧಿ ಅಧ್ಯಯನ ಕೇಂದ್ರ ಆಯೋ ಜಿಸಿದ್ದ ಎನ್‌ಇಪಿ-೨೦೨೦ ಯುಜಿ ಇತಿ ಹಾಸ ಅಭಿವಿನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ವಿಶ್ವದಲ್ಲಿ ಯಾವ ರೀತಿಯ ಶಿಕ್ಷಣ ವ್ಯವಸ್ಥೆ ಇದೆ. ನಮ್ಮಲ್ಲಿ ಯಾವ ರೀತಿ ಶಿಕ್ಷಣ ವ್ಯವಸ್ಥೆ ಇರಬೇಕು ಎಂಬುದು ಎನ್‌ಇಪಿ ಉದ್ದೇಶ ವಾಗಿದ್ದು, ಈ ಸಾಲಿನಿಂದ ಅದನ್ನು ಅನು ಷ್ಠಾನ ಮಾಡಿದ್ದಾರೆ. ಇದರ ಸಮರ್ಪಕ ಅನುಷ್ಠಾನದಲ್ಲಿ ಹೆಚ್ಚಿನ ಜವಾಬ್ದಾರಿ ಅಧ್ಯ ಯನ ಮಂಡಳಿಗಳು ಮತ್ತು ಶಿಕ್ಷಕರದ್ದಾ ಗಿದೆ. ನಮ್ಮ ಮನಸ್ಥಿತಿ ಬದಲಿಸಿಕೊಂಡು ವಿದ್ಯಾರ್ಥಿಗಳ ಮನಸ್ಥಿತಿಯನ್ನು ಬದಲಿ ಸುವ ಕೆಲಸ ಮಾಡೋಣ. ಎನ್‌ಇಪಿ-೨೦೨೦ ವ್ಯವಸ್ಥೆ ಅನುಷ್ಠಾನ ಮಾಡಲು ಎಲ್ಲರೂ ಕೂಡಿ ಶ್ರಮಿಸೋಣ ಎಂದು ಹೇಳಿದರು.

ರಾಷ್ಟಿçÃಯ ಶಿಕ್ಷಣ ನೀತಿ (ಎನ್‌ಇಪಿ) ಬಗ್ಗೆ ೨೦೧೯ರಿಂದ ಚರ್ಚೆ ನಡೆಯುತ್ತಿದೆ. ೨೦೧೫ -೧೬ರಿಂದ ಕಸ್ತೂರಿ ರಂಗನ್ ಸೇರಿದಂತೆ ಕರ್ನಾಟಕದವರೇ ಮೂರು ಮಂದಿ ಇದ್ದ ಸಮಿತಿ ಸಾಕಷ್ಟು ಯೋಚನೆ ಮಾಡಿ ಭಾರತದ ಮುಂದಿನ ೧೫ ವರ್ಷ ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿರಬೇಕು ಎಂಬ ದೂರದೃಷ್ಟಿಯೊಂ ದಿಗೆ ಮಾಡಿರುವ ಯೋಜನೆ ಇದು. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿ ಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇತಿಹಾಸ ಅಧ್ಯ ಯನ ವಿಭಾಗದ ಚೇರ್ಮನ್ ಪ್ರೊ.ಕೆ. ಸದಾಶಿವ, ಜೆಎಸ್‌ಎಸ್ ಮಹಿಳಾ ಕಾಲೇ ಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಎನ್.ಮಹದೇವಸ್ವಾಮಿ, ಯುನೆಸ್ಕೋ ಫೆಲೋ ಕಲಾ ಇತಿಹಾಸಕಾರ ಪ್ರೊ. ಚೂಡಾಮಣ ನಂದಗೋಪಾಲ್, ಯುಜಿಸಿ ಇಮೇರಟಸ್ ಫೆಲೋ ಪ್ರೊ. ಎಂ.ಎಸ್.ಕೃಷ್ಣಮೂರ್ತಿ, ಡಾ.ಗುರು ಸಿದ್ದಯ್ಯ ಇನ್ನಿತರರು ಉಪಸ್ಥಿತರಿದ್ದರು.

ಪದವಿ ಶಿಕ್ಷಣ ಹೇಗಿರಬೇಕೆಂದರೆ ಮೊದಲ ವರ್ಷದ ಶಿಕ್ಷಣ ಮುಗಿದ ಮೇಲೆ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಕೊಟ್ಟುಬಿಡುವುದು. ಆ ಮೂಲಕ ಅವರು ಯಾವುದಾದರೂ ಸಣ್ಣ ಉದ್ಯೋಗ ಪಡೆದುಕೊಳ್ಳುವಂತಿರಬೇಕು. ೨ನೇ ವರ್ಷ ಮುಗಿದಾಗ ಹೆಚ್ಚು ಕೌಶಲ್ಯ ಆಧಾರಿತ ಕೋರ್ಸ್ ಸಣ್ಣ ಪ್ರೋಗ್ರಾಮ್ ಲೆವೆಲ್‌ನಲ್ಲಿ ಸಣ್ಣ ಪ್ಯಾಕೇಜ್ ಜಾಬ್ ಪಡೆಯುವಂತಾಗಬೇಕು. ೪ನೇ ವರ್ಷಕ್ಕೆ ವಿಮರ್ಶಾತ್ಮಕ ಚಿಂತನೆ ಅನುಷ್ಠಾನ, ಸಂಶೋಧನೆ ಮಾಡಬಹುದು. ಈ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಜೊತೆಗೆ ಆತನ ಬದುಕು ರೂಪಿಸಬೇಕು. ಹೀಗಾದರೆ ಮುಂದಿನ ೨೫ ವರ್ಷಕ್ಕೆ ನಮ್ಮಲ್ಲಿ ಉತ್ತಮ ವಿಶ್ವ ವಿದ್ಯಾನಿಲಯಗಳು ಹಾಗೂ ಉತ್ತಮ ಶಿಕ್ಷಣ ನೋಡಲು ಸಾಧ್ಯವಾಗುತ್ತದೆ. -ಪ್ರೊ.ಹೇಮಂತ್‌ಕುಮಾರ್, ಕುಲಪತಿ

Translate »