ಕಾಡಾನೆಯೊಂದಿಗೆ ಕಾದಾಡಿ ಗಾಯಗೊಂಡಿದ್ದ ಹುಲಿ ಸಾವು
ಮೈಸೂರು

ಕಾಡಾನೆಯೊಂದಿಗೆ ಕಾದಾಡಿ ಗಾಯಗೊಂಡಿದ್ದ ಹುಲಿ ಸಾವು

November 17, 2021

ಮೈಸೂರು, ನ.೧೬(ಎಂಟಿವೈ)- ಕಾಡಾನೆ ಯೊಂದಿಗೆ ಕಾದಾಡಿ ಗಂಭೀರವಾಗಿ ಗಾಯಗೊಂಡಿದ್ದ ಹುಲಿ ಚಿಕಿತ್ಸೆ ಫಲ ಕಾರಿಯಾಗದೆ ಸಾವನ್ನಪ್ಪಿದೆ.ಬಂಡೀಪುರ ಹುಲಿ ಸಂರಕ್ಷಿತ ಪ್ರದೇ ಶದ ಸಫಾರಿ ವಲಯದಲ್ಲಿ ಗಂಜಿಕಟ್ಟೆ ಅರಣ್ಯ ಪ್ರದೇಶದಲ್ಲಿ ಅ.೨೦ರಂದು ಕಾಡಾನೆ ಯೊಂದಿಗೆ ೭ ವರ್ಷದ ಗಂಡು ಹುಲಿ ಕಾದಾಡಿ ತೀವ್ರವಾಗಿ ಗಾಯಗೊಂಡಿತ್ತು. ಕಾದಾಟದಲ್ಲಿ ಆನೆ ಹುಲಿಯನ್ನು ನೆಲಕ್ಕೆ ಕೊಡವಿ ದಂತದಿAದ ತಿವಿದು ಗಾಯ ಗೊಳಿಸಿತ್ತು. ಇದರಿಂದ ಹುಲಿಯ ಕರುಳು, ಶ್ವಾಸಕೋಶವೂ ಕಾಣುವಂತೆ ಆಳವಾದ ಗಾಯವಾಗಿತ್ತು. ಕಾಡಿನಲ್ಲಿ ನರಳುತ್ತಾ ಬಿದ್ದಿದ್ದ ಹುಲಿ ಯನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿತ್ತು.

ಅದೇ ದಿನ ಮೈಸೂರು ಮೃಗಾಲಯಕ್ಕೆ ತಂದು ಚಿಕಿತ್ಸೆ ಆರಂಭಿಸಲಾಗಿತ್ತು. ಹುಲಿಯ ಹೊಟ್ಟೆ ಭಾಗದಲ್ಲಿ ಎರಡು ರಂಧ್ರ ಉಂಟಾ ಗಿದ್ದರಿಂದ ಹುಲಿ ಚಿಂತಾಜನಕ ಸ್ಥಿತಿಗೆ ತಲುಪಿತ್ತು. ಹಿರಿಯ ಪಶುವೈದ್ಯರ ಸಲಹೆ ಪಡೆದು ಮೃಗಾಲಯದ ಪಶುವೈದ್ಯರ ತಂಡ ಹುಲಿಗೆ ಯಶಸ್ವಿಯಾಗಿ ಶಸ್ತçಚಿಕಿತ್ಸೆ ನಡೆಸಿದ್ದರು. ನಂತರ ಚೇತರಿಸಿಕೊಂಡAತೆ ಕಂಡು ಬಂದ ಆ ಹುಲಿ ಆಹಾರವನ್ನು ಸೇವಿಸಲಾರಂಭಿಸಿತ್ತು. ಅಲ್ಲದೆ ಅದಕ್ಕೆ ಜೀರ್ಣ ಪ್ರಕ್ರಿಯೆ ಉತ್ತಮವಾಗಿತ್ತು. ಇದರಿಂದ ಹುಲಿ ಗುಣಮುಖವಾಗಲಿದೆ ಎಂದು ಭಾವಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ಮೃತಪಟ್ಟಿದೆ. ನಿಯಮಾನುಸಾರ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಕ್ರಿಯೆ ನಡೆಸಲಾಯಿತು.

ಹುಲಿ ಬದುಕಿಸಲು ಪ್ರಯತ್ನ…

ಬಂಡೀಪುರದಿAದ ತಂದ ಸಂದರ್ಭದಲ್ಲಿಯೇ ಹುಲಿ ಸ್ಥಿತಿ ಗಂಭೀರವಾಗಿತ್ತು. ಹಿರಿಯ ಅಧಿಕಾರಿಗಳು ಹಾಗೂ ಪಶುವೈದ್ಯರ ಸಲಹೆ ಪಡೆದು ಶಸ್ತçಚಿಕಿತ್ಸೆ ಮಾಡ ಲಾಗಿತ್ತು. ಆರೋಗ್ಯ ಸುಧಾರಿಸುವ ರೀತಿ ಕಂಡು ಬಂದಿತ್ತು. ಆದರೆ ದಂತ ತಿವಿತ ದಿಂದಾಗಿ ಆಳವಾದ ಗಾಯವಾಗಿದ್ದರಿಂದ, ಇನ್ಫೆಕ್ಷನ್ ಆಗಿತ್ತು. ಎಷ್ಟೇ ಪ್ರಯತ್ನ ಮಾಡಿದರೂ ಹುಲಿ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ ಹೊಟ್ಟೆಯಲ್ಲಿ ಇನ್ಫೆಕ್ಷನ್ ಪ್ರಮಾಣ ಹೆಚ್ಚಾಗಿರುವುದು ಹಾಗೂ ಅದರಿಂದ ಅಂಗಾAಗ ಹಾನಿ ಯಾಗಿರುವುದು ಕಂಡು ಬಂದಿದೆ. -ಅಜಿತ್ ಎಂ.ಕುಲಕಣ ð,
ಕಾರ್ಯನಿರ್ವಾಹಕ ನಿರ್ದೇಶಕ, ಮೈಸೂರು ಮೃಗಾಲಯ

Translate »