ಆಳ್ವಾಸ್ ಸಂಸ್ಥೆಯಲ್ಲಿ ರಾಜ್ಯ ಮಟ್ಟದ ವ್ಯಂಗ್ಯಚಿತ್ರ ಕಾರ್ಯಾಗಾರ
ಮೈಸೂರು

ಆಳ್ವಾಸ್ ಸಂಸ್ಥೆಯಲ್ಲಿ ರಾಜ್ಯ ಮಟ್ಟದ ವ್ಯಂಗ್ಯಚಿತ್ರ ಕಾರ್ಯಾಗಾರ

November 19, 2018

ಮೈಸೂರು:  ದಕ್ಷಿಣ ಕನ್ನಡ ಜಿಲ್ಲೆಯ ಮೂಡು ಬಿದ್ರೆಯ ಆಳ್ವಾಸ್ ಸಂಸ್ಥೆಯಲ್ಲಿ 5ನೇ ರಾಜ್ಯ ಮಟ್ಟದ ವ್ಯಂಗ್ಯಚಿತ್ರ ಕಾರ್ಯಾಗಾರ ಏರ್ಪಡಿಸಲಾಗಿತ್ತು.ಕಾರ್ಯಾಗಾರದಲ್ಲಿ ವಿವಿಧ ದಿನಪತ್ರಿಕೆಗಳ ಖ್ಯಾತ ವ್ಯಂಗ್ಯ ಚಿತ್ರಕಾರರು ಭಾಗವಹಿಸಿದ್ದರು. ಆಳ್ವಾಸ್ ಎಜುಕೇಷನಲ್ ಇನ್ಸ್‍ಟಿಟ್ಯೂಷನ್ ಅಧ್ಯಕ್ಷ ಡಾ. ಮೋಹನ್ ಆಳ್ವ ಕಾರ್ಯಾ ಗಾರದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಾಗಾರದಲ್ಲಿ ಓರ್ವ ವ್ಯಂಗ್ಯಚಿತ್ರಕಾರ ಮಹಾತ್ಮ ಗಾಂಧಿಯವರ 150ನೇ ಜಯಂತಿ ಪ್ರಯುಕ್ತ ರಚಿಸಿದ ಗಾಂಧಿ ವ್ಯಂಗ್ಯಚಿತ್ರ ಎಲ್ಲರನ್ನು ಆಕರ್ಷಿಸಿತು.ಇದೇ ವೇಳೆ ವಿದ್ಯಾರ್ಥಿಗಳು, ಮಾಧ್ಯಮದವರು ಮತ್ತು ಸಾರ್ವಜನಿಕರಿಗಾಗಿ ಖ್ಯಾತ ವ್ಯಂಗ್ಯಚಿತ್ರಕಾರ ಕೆ.ಆರ್. ಸ್ವಾಮಿ ಅವರು 40,000 ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಿದರು. ಅವ ರನ್ನು ಆಳ್ವಾಸ್ ಸಿರಿ ಪ್ರಶಸ್ತಿ-2018 ನೀಡಿ ಗೌರವಿಸಲಾಯಿತು. ಸಂಸ್ಥೆ ಅಧ್ಯಕ್ಷರಾದ ಡಾ. ಮೋಹನ್ ಆಳ್ವಾ ಅವರು ಕಾರ್ಯಾ ಗಾರದಲ್ಲಿ ಭಾಗವಹಿಸಿದ್ದ ವ್ಯಂಗ್ಯ ಚಿತ್ರಕಾರರಿಗೆ ಪ್ರಶಂಸಾಪತ್ರ ವಿತರಿಸಿದರು. ಕಾರ್ಯಾಗಾರದಲ್ಲಿ ಖ್ಯಾತ ಪತ್ರಕರ್ತರಾದ ಪ್ರಕಾಶ್ ಶೆಟ್ಟಿ, ಜೇಮ್ಸ್ ರಾಜ್, ಚಂದ್ರ ಗಂಗೂಲಿ, ನಾಗನಾಥ್, ಕರ್ನಾಟಕ ಕಾರ್ಟೂನಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಶೇಖರ್, ಗುಜ್ಜಾರಪ್ಪ, ಕರ್ನಾಟಕ ಚಿತ್ರಕಲಾ ಪರಿಷತ್ ಡೀನ್ ಬಾಬು ಜೆಟ್ಕರ್, ಮೈಸೂರಿನ ವ್ಯಂಗ್ಯಚಿತ್ರಕಾರ ನಾಗೇಂದ್ರ ಬಾಬು, ಜೀವನದಳ್ಳಿ ಶೆಟ್ಟಿ, ಅಂತಾರಾಷ್ಟ್ರೀಯ ವ್ಯಂಗ್ಯಚಿತ್ರಕಾರ ಬಿ.ವಿ. ಪಾಂಡುರಂಗರಾವ್ ಭಾಗವಹಿಸಿದ್ದರು.

Translate »