`ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…’ ಹಾಡಿಗೆ  ಕುಣಿದು ಕುಪ್ಪಳಿಸಿದ ವಿಶೇಷ ಚೇತನ ಮಕ್ಕಳು
ಮೈಸೂರು

`ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…’ ಹಾಡಿಗೆ ಕುಣಿದು ಕುಪ್ಪಳಿಸಿದ ವಿಶೇಷ ಚೇತನ ಮಕ್ಕಳು

November 19, 2018

ಮೈಸೂರು: ಮೈಸೂ ರಿನಲ್ಲಿರುವ 500ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳು ಮತ್ತು ಪೋಷಕರು ಕುಣಿದು ಕುಪ್ಪ ಳಿಸಿದರು. ಮಕ್ಕಳ ಪೋಷಕರು ಈ ಸಂಭ್ರಮ ದಲ್ಲಿ ಖುಷಿಯಿಂದ ಪಾಲ್ಗೊಂಡಿದ್ದರು.

ಮಕ್ಕಳ ದಿನಾಚರಣೆ ಅಂಗವಾಗಿ ಮೈಸೂರು ಹೆರಿಟೇಜ್ ರೌಂಡ್ ಟೇಬಲ್ -109 ಮತ್ತು ಮೈಸೂರು ಹೆರಿಟೇಜ್ ಲೇಡಿಸ್ ಸರ್ಕಲ್-109 ಜಂಟಿಯಾಗಿ ಮೈಸೂರಿನ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳು ನಿಜಕ್ಕೂ ಸಂಭ್ರಮಿಸಿದರು.

ಮೈಸೂರಿನ ಕರುಣಾಮಯಿ, ಕೌಶಲ, ನಿರೀಕ್ಷೆ, ಆಶಿಯಾನ, ಮಾತೃ ಮಂಡಳಿ, ಅರುಣೋದಯ, ರೈನ್‍ಬೋ ಇನ್‍ಸ್ಟಿ ಟ್ಯೂಟ್, ಸ್ಮೇಹ ಭವನ, ಎಂ.ಜೆ.ಸೂಫಿ ಮೊದ ಲಾದ 20ಕ್ಕೂ ಹೆಚ್ಚು ವಿಶೇಷ ಚೇತನ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು.

‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟ ಬೇಕು…’, ‘ಗೊಂಬೆ ಹೇಳುತ್ತೈತೆ ಮತ್ತೆ ಹೇಳುತ್ತೈತೆ ನೀನೇ ರಾಜಕುಮಾರ…’ ಇನ್ನಿ ತರ ಗೀತೆಗಳಿಗೆ ಸಂಭ್ರಮದಿಂದ ಹೆಜ್ಜೆ ಹಾಕಿದರು. ‘ಸುಂಟರಗಾಳಿ… ಸುಂಟರ ಗಾಳಿ…’, ‘ಓಳು ಬರೀ ಓಳು.. ಎಂ ಟಿವಿ ಸುಬ್ಬುಲಕ್ಷ್ಮಿಗೆ ಬರೀ ಓಳು’ ಇನ್ನಿತರೆ ಗೀತೆಗಳಿಗೆ ಕುಣಿದು ಕುಪ್ಪಳಿಸಿದರು.

ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿರುವ ಮೈಸೂರು ಹೆರಿಟೇಜ್ ರೌಂಡ್ ಟೇಬಲ್ -109 ಹಾಗೂ ಮೈಸೂರು ಹೆರಿಟೇಜ್ ಲೇಡಿಸ್ ಸರ್ಕಲ್-109 ಕಳೆದ ಮೂರು ವರ್ಷಗಳಿಂದ ಸತತವಾಗಿ ಇಂತಹ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಎಲ್ಲರೂ ಹುಟ್ಟು ಹಬ್ಬ ಆಚರಿಸಿಕೊಳ್ಳು ತ್ತಾರೆ. ಆದರೆ ವಿಶೇಷ ಚೇತನ ಮಕ್ಕಳು ಕೂಡ ಹುಟ್ಟು ಹಬ್ಬದ ಸಂಭ್ರಮದ ರೀತಿ ಯಲ್ಲಿ ಸಂಭ್ರಮಿಸಲಿ ಎಂಬ ಉದ್ದೇಶ ದಿಂದ ಮಕ್ಕಳ ದಿನಾಚರಣೆ ಸಂದರ್ಭ ದಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ.

ದಿವ್ಯಾಂಗರೆಲ್ಲರೂ ಒಂದೊಂದು ಬೆಳಕು ಇದ್ದಂತೆ: ಇದಕ್ಕೂ ಮುನ್ನ ಸಂಸದ ಪ್ರತಾಪ ಸಿಂಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಭ್ರ ಮಿಸಿರುವ ಕಾರ್ಯಕ್ರಮವೇ ಕಾರ್ನಿವಲ್. ಇಲ್ಲಿ ವಿಶೇಷ ಮಕ್ಕಳೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಿರುವುದು ಅರ್ಥ ಪೂರ್ಣ. ಪ್ರಧಾನಿ ನರೇಂದ್ರ ಮೋದಿ ಯವರು ಹೇಳಿರುವಂತೆ ಇಲ್ಲಿರುವ ದಿವ್ಯಾಂ ಗರೆಲ್ಲರೂ ಒಂದೊಂದು ಬೆಳಕು ಇದ್ದಂತೆ. ಸಾಮಾನ್ಯರ ಸರಿಸಮನಾಗಿ ಮುಖ್ಯ ವಾಹಿನಿಗೆ ಈ ಬೆಳಕುಗಳು ಬರಲು ಇಂತಹ ಕಾರ್ಯಕ್ರಮ ಅವಶ್ಯಕ ಎಂದರು.

ನಂತರ ಮಾತನಾಡಿದ ಪತ್ರಿಕೋದ್ಯಮಿ ರವಿ ಕೋಟಿ ಇಲ್ಲಿ ಭಾಗವಹಿಸಿರುವ ಪ್ರತಿ ಯೊಬ್ಬ ವಿಶೇಷ ಮಕ್ಕಳೂ ಒಂದೊಂದು ಬಣ್ಣದಂತೆ ಕಂಗೊಳಿಸುತ್ತಿದ್ದಾರೆ. ಇವರ ಸಂಭ್ರಮದ ಬಣ್ಣದಂತೆ ಅವರ ಬದುಕಿ ನಲ್ಲಿಯೂ ಸುಂದರವಾದ ಬಣ್ಣ ತುಂಬಿ ಕೊಂಡು ಸಂತಸ ಬರಲಿ ಎಂದು ಹೇಳಿದರು.

ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದ ಎಲ್ಲಾ ವಿಶೇಷ ಚೇತನ ಮಕ್ಕಳಿಗೂ ಪ್ರಶಸ್ತಿ ಪತ್ರ ಮತ್ತು ಪದಕ ನೀಡಿ ಗೌರವಿ ಸಲಾಯಿತು. ಎಂಎಚ್‍ಎಲ್‍ಸಿ 109 ಸಿ. ಆರ್.ಮೇಘನಾ ಶರತ್, ಎಂಎಚ್‍ಆರ್‍ಟಿ 109ರ ರೌಂಡ್ ಟೇಬಲ್ ಚೇರ್ಮನ್ ಅರುಣ್, ಸದಸ್ಯರಾದ ಹರೀಶ್ ಶೆಣೈ, ಕುಮಾರ್ ಪಾಲ್, ಶರತ್, ದೀಪಕ್, ಸಿ.ವಿ.ಮಹೇಶ್, ಯೂತ್ ಫಾರ್ ಸೇವಾ ಸಂಘಟನೆಯ ಪ್ರವೀಣ್, ಮನೋಜ್, ಅನುಷಾ, ನಯನ, ಅದ್ವಿತ್ ಇನ್ನಿತರರು ಉಪಸ್ಥಿತರಿದ್ದರು.

Translate »