ಫೈನಲ್‍ನಲ್ಲಿ ಬೆಂಗಳೂರು ವಿರುದ್ಧ ಮೈಸೂರು ತಂಡಕ್ಕೆ ಮೂರು ವಿಕೆಟ್‍ಗಳ ಭರ್ಜರಿ ಜಯ
ಮೈಸೂರು

ಫೈನಲ್‍ನಲ್ಲಿ ಬೆಂಗಳೂರು ವಿರುದ್ಧ ಮೈಸೂರು ತಂಡಕ್ಕೆ ಮೂರು ವಿಕೆಟ್‍ಗಳ ಭರ್ಜರಿ ಜಯ

November 19, 2018

ಮೈಸೂರು:  ಇಂದಿಲ್ಲಿ ದಿವ್ಯಾಂಗರಿಗಾಗಿ ನಡೆದ ದಕ್ಷಿಣ ಭಾರತ ವ್ಹೀಲ್‍ಚೇರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರು ವಿರುದ್ಧ ಮೈಸೂರು ದಿವ್ಯಾಂಗ ತಂಡ 3 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಮೈಸೂರಿನ ವಿಜಯನಗರ 1ನೇ ಹಂತ ದಲ್ಲಿರುವ ಮುಡಾ ಕ್ರೀಡಾಂಗಣದಲ್ಲಿ ಭಾನು ವಾರ ಮೈಸೂರು ಹಾಗೂ ಬೆಂಗಳೂರು ದಿವ್ಯಾಂಗರ ವ್ಹೀಲ್‍ಚೇರ್ ಕ್ರಿಕೆಟ್ ಪಂದ್ಯಾ ವಳಿಯ ಫೈನಲ್ ಪಂದ್ಯದಲ್ಲಿ ಬೆಂಗ ಳೂರು ನೀಡಿದ 63 ರನ್‍ಗಳ ಗುರಿಯನ್ನು ಬೆನ್ನತ್ತಿದ ಮೈಸೂರು ತಂಡ ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು. 11 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿತು.

ಮೈಸೂರು ತಂಡದ ಬ್ಯಾಟ್ಸ್‍ಮನ್ ಶಂಕರ್ 28 ರನ್ ಬಾರಿಸಿ ಗಮನ ಸೆಳೆದರು. ಬೆಂಗಳೂರು ತಂಡದ ಬೌಲರ್ ಲೋಕೇಶ್ 3 ವಿಕೆಟ್ ಗಳಿಸಿದರು. ಭಾರೀ ಕುತೂಹಲ ಕೆರಳಿಸಿದ್ದ ಪಂದ್ಯಾವಳಿಯಲ್ಲಿ ದಿವ್ಯಾಂ ಗರು, ನಾವು ಯಾರಿಗೇನು ಕಡಿಮೆ ಇಲ್ಲ ಎಂಬಂತೆ ಆಟ ಪ್ರದರ್ಶಿಸಿದ್ದು ವಿಶೇಷವಾಗಿತ್ತು.

ಬೆಂಗಳೂರಿನ ದಿವ್ಯಾಂಗ ಮೈತ್ರಿ ಸ್ಪೋಟ್ರ್ಸ್ ಅಕಾಡೆಮಿ ಮತ್ತು ಮೈಸೂರಿನ ವಿಕಲ ಚೇತನರ ಅಭ್ಯುದಯ ಸೇವಾ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಮೂರು ದಿನಗಳ ವ್ಹೀಲ್‍ಚೇರ್ ಕ್ರಿಕೆಟ್ ತರಬೇತಿ ಮತ್ತು ಬಿಗಿನರ್ಸ್ ಪಂದ್ಯಾವಳಿಯಲ್ಲಿ ಬೆಂಗಳೂರು, ಮೈಸೂರು, ಬಾಗಲಕೋಟೆ ಮತ್ತು ಕೇರಳ ತಂಡಗಳು ಭಾಗವಹಿಸಿದ್ದವು. ಲೀಗ್ ಪಂದ್ಯಗಳು 10 ಓವರ್, ಫೈನಲ್ ಪಂದ್ಯಾ ವಳಿ 12 ಓವರ್‍ಗಳಲ್ಲಿ ನಡೆದವು.

ಮೈಸೂರು ತಂಡದ ಕ್ಯಾಪ್ಟನ್ ಚಂದ್ರ ಕುಮಾರ್ ವಿನ್ನರ್ ಟ್ರೋಫಿ ಸ್ವೀಕರಿಸಿದರೆ, ಬೆಂಗಳೂರಿನ ಕ್ಯಾಪ್ಟನ್ ಸುಧಾಕರ್ ರನ್ನರ್ ಟ್ರೋಫಿ ಪಡೆದುಕೊಂಡರು. ಪಂದ್ಯಾ ವಳಿಯ ಅತ್ಯುತ್ತಮ ಬ್ಯಾಟ್ಸ್‍ಮನ್ ಆಗಿ ಬೆಂಗಳೂರಿನ ಲೋಕೇಶ್, ಅತ್ಯುತ್ತಮ ಬೌಲರ್ ಆಗಿ ಬಾಗಲಕೋಟೆಯ ವಿಜಯ್ ಆಯ್ಕೆಯಾದರು.

ಸಚಿವರಿಂದ ಬ್ಯಾಟಿಂಗ್ ಚಾಲನೆ: ಭಾನು ವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಬ್ಯಾಟಿಂಗ್ ಮಾಡುವ ಮೂಲಕ ಫೈನಲ್ ಪಂದ್ಯಕ್ಕೆ ಚಾಲನೆ ನೀಡಿ ದರು. ಈ ಸಂದರ್ಭದಲ್ಲಿ ಶಾಸಕ ಎಲ್. ನಾಗೇಂದ್ರ, ಬೆಂಗಳೂರು ಅಂಗವಿಕಲರ ಅಧಿನಿಯಮ ಮಾಜಿ ಆಯುಕ್ತ ಕೆ.ವಿ. ಶ್ರೀಧರ್, ಬೆಂಗಳೂರಿನ ಸಿಬಿಎಂ ಸಂಯೋ ಜಕ ಡಾರ್ವಿನ್ ಮೋಸಸ್, ಥಿಯರಮ್ ಇಂಡಿಯಾ ಪ್ರೈ.ಲಿ.ನ ಮುಖ್ಯಸ್ಥ ಭಾಸ್ಕರ್ ಕಲಲೆ, ಅರ್ಜುನ ಪ್ರಶಸ್ತಿ ಪುರಸ್ಕøತ ಮಹ ದೇವು, ಕೇರಳ ತಂಡದ ನಾಯಕ ರಿಯಾಜ್, ಬಾಗಲಕೋಟೆ ತಂಡದ ನಾಯಕ ವಿಠ್ಠಲ್, ವೀಲ್‍ಚೇರ್ ಕ್ರಿಕೆಟ್ ಭಾರತೀಯ ತಂಡದ ಉಪನಾಯಕ ಶಿವಪ್ರಸಾದ್, ದಿವ್ಯಾಂಗ ಮೈತ್ರಿ ಸ್ಪೋಟ್ರ್ಸ್ ಅಕಾಡೆಮಿಯ ಟ್ರಸ್ಟಿ ದಿಲೀಪ್ ಕುಮಾರ್, ಮೈಸೂರಿನ ವಿಕಲಚೇತನರ ಅಭ್ಯುದಯ ಸೇವಾ ಸಮಿತಿ ಅಧ್ಯಕ್ಷ ಪ್ರಭು ಸ್ವಾಮಿ, ಕಾರ್ಯದರ್ಶಿ ಎಂ.ಮಹಾಲಕ್ಷ್ಮಿ ಇನ್ನಿತರರು ಉಪಸ್ಥಿತರಿದ್ದರು.

Translate »