ಅಂಬಾರಿಯಲ್ಲಿ ಚಾಮುಂಡಿ ವಿಗ್ರಹ  ಮೆರವಣಿಗೆ ವಿರುದ್ಧ ಪಿಐಎಲ್ ದಾಖಲಿಸುತ್ತೇವೆ
ಮೈಸೂರು

ಅಂಬಾರಿಯಲ್ಲಿ ಚಾಮುಂಡಿ ವಿಗ್ರಹ ಮೆರವಣಿಗೆ ವಿರುದ್ಧ ಪಿಐಎಲ್ ದಾಖಲಿಸುತ್ತೇವೆ

October 6, 2021

ಮೈಸೂರು,ಅ.5(ಪಿಎಂ)- ಚಾಮುಂಡೇಶ್ವರಿ ಸಮಸ್ತ ಭಾರತೀಯರ ಪ್ರತಿನಿಧಿಯಲ್ಲ. ಅಂಬಾರಿ ಮೇಲೆ ಚಾಮುಂಡಿ ವಿಗ್ರಹ ಪ್ರತಿಷ್ಠಾಪಿಸುವುದು ಸಂವಿಧಾನಕ್ಕೆ ಬಗೆಯುವ ಬಹು ದೊಡ್ಡ ಅಪ ಚಾರ. ಚಾಮುಂಡಿ ವಿಗ್ರಹ ಇಟ್ಟು ಹಿಂದುತ್ವವನ್ನು ಸಮಸ್ತ ಬಹುಜನರ ಮೇಲೆ ಹೇರಿ, ಸಂವಿಧಾನ ಉಲ್ಲಂಘಿಸಲು ನಿಮಗೆ ಅಧಿಕಾರ ಕೊಟ್ಟವರ್ಯಾರು? ಎಂದು ರಾಜ್ಯ ಸರ್ಕಾರದ ವಿರುದ್ಧ ಸಾರ್ವ ಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ದಾಖಲಿಸಲಿದ್ದೇವೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಮಹೇಶ್‍ಚಂದ್ರ ಗುರು ತಿಳಿಸಿದರು.

ಮೈಸೂರಿನ ಅಶೋಕಪುರಂ ಡಾ. ಅಂಬೇಡ್ಕರ್ ಉದ್ಯಾನÀದಲ್ಲಿ ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಹಿಷ ದಸರಾ ಮತ್ತು `ಮಹಿಷ ಮೈಸೂರು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಇಂದು ಏಕತ್ವ ಮತ್ತು ಬಹುತ್ವದ ನಡುವೆ ದೊಡ್ಡ ಸಂಘರ್ಷ ನಡೆಯುತ್ತಿದೆ. ಚಾಮುಂಡಿ ಬಹು ಸಂಸ್ಕøತಿಯ ಪ್ರತಿನಿಧಿ ಅಲ್ಲ. ಏಕ ಸಂಸ್ಕøತಿಯ ಪ್ರತಿನಿಧಿ. ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿ, ಸಂವಿ ಧಾನ ಕೊಟ್ಟ ಡಾ.ಅಂಬೇಡ್ಕರ್, ಮಹಿಷ ಮಂಡಲ ನಿರ್ಮಿಸಿದ ಮಹಿಷ ಮತ್ತು ನಾಡಿನ ಬಹುಜನರ ಬಂಧು ನಾಲ್ವಡಿ ಕೃಷ್ಣರಾಜ ಒಡೆಯರ್ ಫೋಟೋ ಗಳನ್ನು ಅಂಬಾರಿಯಲ್ಲಿ ಇಡಬೇಕು. ಇದೇ ಸೂಕ್ತ ಎಂದು ಪ್ರತಿಪಾದಿಸಿದರು.
ನಾವು ದಸರಾಗೆ ವಿರೋಧಿಗಳಲ್ಲ. ನಾವು ಮೂಲ ನಿವಾಸಿಗಳು ಮಹಿಷ ದಸರಾ ಮಾಡುತ್ತಿದ್ದೇವೆ. ಮುಂದಿನ ವರ್ಷದಿಂದ ಅಂಬಾರಿಯಲ್ಲಿ ಚಾಮುಂ ಡೇಶ್ವರಿ ವಿಗ್ರಹ ಇಡಬಾರದು. ಗಾಂಧಿ, ಅಂಬೇಡ್ಕರ್, ಮಹಿಷ ಮತ್ತು ನಾಲ್ವಡಿ ಫೋಟೋ ಇಡಬೇಕು. ಜೊತೆಗೆ ಮಹಿಷ ದಸರಾವನ್ನು ಸರ್ಕಾರವೇ ಆಚ ರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಎನ್‍ಇಪಿ-2020ರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಂತೆ ಈ ನೀತಿ ಅತ್ಯಂತ ಕೆಳ ದರ್ಜೆಯ ಕಸ ಇದ್ದಂತೆ. ಇದು ಶ್ರಮಿಕ ವರ್ಗಗಳನ್ನು ಗುಲಾಮಗಿರಿಗೆ ದೂಡುವ ನೀತಿ. ಕಳೆದ ಒಂದು ವರ್ಷದಲ್ಲಿ ಸಾವಿರ ರೈತರು ಬೀದಿಯಲ್ಲಿ ಸಾವನ್ನಪ್ಪಿದ್ದಾರೆ. ಮೊನ್ನೆ 8 ಮಂದಿ ಪ್ರತಿಭಟನಾನಿರತ ರೈತರ ಮೇಲೆ ವಾಹನ ಹರಿಸಿ ಹತ್ಯೆ ಮಾಡಲಾಗಿದೆ. ಹತ್ಯೆ ಮಾಡಿದವರನ್ನು ಬಿಟ್ಟು ಇಲ್ಲಿಗೆ ಸಾಂತ್ವನ ಹೇಳಲು ಹೋಗುತ್ತಿದ್ದ ಪ್ರಿಯಾಂಕ ಗಾಂಧಿಯನ್ನು ಗೃಹ ಬಂಧನಕ್ಕೆ ದೂಡಿದ್ದಾರೆ ಎಂದು ಖಂಡಿಸಿದರು.

ಹಿಂದೂ ಸಾಮ್ರಾಜ್ಯಶಾಹಿ ನಮ್ಮನ್ನು ಆಳು ತ್ತಿದೆ. ನಮಗೆ ಈಗ ಬುದ್ಧ ಮಾರ್ಗ ಬೇಕಿದೆ. ಈ ರಾಜ್ಯ ಮತ್ತು ದೇಶವನ್ನು ಬಹುಜನ ಬಂಧು ಗಳು ಆಳಬೇಕಿದೆ. 1947ರಲ್ಲಿ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯಿತು. ಈಗ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯ ಬೇಕಿದ್ದು, ಮೋದಿ ಯುಗವನ್ನು ಅಂತ್ಯಗೊಳಿಸ ಬೇಕಿದೆ ಎಂದರು. ಇದಕ್ಕೂ ಮುನ್ನ ವಿಶ್ವಮೈತ್ರಿ ಬುದ್ಧ ವಿಹಾರದಿಂದ ಡಾ.ಅಂಬೇಡ್ಕರ್ ಉದ್ಯಾ ನವನದವರೆಗೆ ಮತ್ತು ಅಶೋಕಪುರಂ, ಕೃಷ್ಣಮೂರ್ತಿ ಪುರಂ ಮುಖ್ಯ ರಸ್ತೆಗಳಲ್ಲಿ ಮಹಿಷ ಮೂರ್ತಿ ಮೆರವಣಿಗೆ ನಡೆಸಲಾಯಿತು. ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಮೈಸೂ ರಿನ ಸಿದ್ದರಾಮ ಸ್ವಾಮೀಜಿ, ಕೊಳ್ಳೇಗಾಲದ ತಿಸ್ಸಾ ಭಂತೇಜಿ, ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್, ಮಾಜಿ ಮೇಯರ್ ಪುರುಷೋತ್ತಮ್, ನಿವೃತ್ತ ಪ್ರಾಧ್ಯಾಪಕ ಪ್ರೊ.ನಂಜರಾಜ ಅರಸ್, ಲೇಖಕ ರಾದ ಡಾ.ಕೃಷ್ಣಮೂರ್ತಿ ಚಮರಂ, ಸಿದ್ದಸ್ವಾಮಿ, ಪಾಲಿಕೆ ಸದಸ್ಯೆ ಪಲ್ಲವಿಬೇಗಂ, ದಸಂಸ ಮುಖಂಡ ಬೆಟ್ಟಯ್ಯ ಕೋಟೆ ಮತ್ತಿತರರು ಹಾಜರಿದ್ದರು.

Translate »