ರಾಜ್ಯದಲ್ಲಿ 10 ತಿಂಗಳೊಳಗೆ 3.40  ಲಕ್ಷ ಮನೆ ನಿರ್ಮಾಣ: ಸೋಮಣ್ಣ
ಮೈಸೂರು

ರಾಜ್ಯದಲ್ಲಿ 10 ತಿಂಗಳೊಳಗೆ 3.40 ಲಕ್ಷ ಮನೆ ನಿರ್ಮಾಣ: ಸೋಮಣ್ಣ

October 6, 2021

ಮೈಸೂರು, ಅ.5(ಆರ್‍ಕೆಬಿ)- ರಾಜ್ಯ ದಲ್ಲಿ ಮುಂದಿನ 10 ತಿಂಗಳೊಳಗೆ 3.40 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಈ ಪೈಕಿ ಕೃಷ್ಣ ರಾಜ ಕ್ಷೇತ್ರದ 2,212 ಮನೆಗಳು ಒಳ ಗೊಂಡಿವೆ ಎಂದು ವಸತಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ತಿಳಿಸಿದರು.

ಮೈಸೂರಿನ ವಿದ್ಯಾರಣ್ಯಪುರಂ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಉದ್ಯಾನವನದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಆಯೋ ಜಿಸಿರುವ `ಮೋದಿ ಯುಗ್ ಉತ್ಸವ’ ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಸತಿ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಲಕ್ಷಾಂತರ ಮನೆ ಗಳು ಮಂಜೂರು ಮಾಡಿದ್ದರೂ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿರ ಲಿಲ್ಲ. ನನ್ನ ಅವಧಿಯಲ್ಲಿ ಕೊಳಚೆ ನಿರ್ಮೂಲನೆ ಮಂಡಳಿಯಿಂದ 1.80 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಇದಕ್ಕೆ ನೀರು, ವಿದ್ಯುತ್, ರಸ್ತೆ ಕಲ್ಪಿಸಲಾಗುವುದು ಎಂದು ಸಚಿವ ಸೋಮಣ್ಣ ತಿಳಿಸಿದರು.

2015-16, 2017-18 ನೇ ಸಾಲಿ ನಲ್ಲಿಯೇ ಬುಡಕಟ್ಟು ಜನಾಂಗದವ ರಿಗೆ 65 ಸಾವಿರ ಮನೆಗಳು ಮಂಜೂ ರಾಗಿದ್ದವು. ಹಿಂದಿನ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದ್ದವು. ನಂತರ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಮನೆ ನಿರ್ಮಾಣ ಕಾಮಗಾರಿ ಆರಂಭವಾಗಿವೆ ಎಂದು ತಿಳಿಸಿದರು.

ಮನೆಗಳನ್ನು ಪಡೆಯುವ ಫಲಾನು ಭವಿಗಳು ಮನೆಗಳನ್ನು ಬಾಡಿಗೆಗೆ ನೀಡದೇ, ಬೇರೆಯವರಿಗೆ ಮಾರಾಟ ಮಾಡದೇ ನೀವೇ ಹೋಗಿ ವಾಸಿಸಬೇಕು ಎಂದು ಮನವಿ ಮಾಡಿದರು.

ಜಾತಿ, ಕುಲ, ಭಾಷೆ ನೋಡದೇ ಎಲ್ಲ ರಿಗೂ ಸೂರು ಕಲ್ಪಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ ಕೆಲಸ ಮಾಡುತ್ತಿದ್ದೇವೆ. ಮನೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ನಗರಾಭಿ ವೃದ್ಧಿ ಪ್ರಾಧಿಕಾರಕ್ಕೆ ತಿಳಿಸಲಾಗಿದೆ. ಬಡವರು ಕೊಟ್ಟ ತೆರಿಗೆ ಹಣ ಬಡವರಿಗೇ ವಿನಿಯೋಗ ವಾಗಬೇಕು. ಆ ನಿಟ್ಟಿನಲ್ಲಿ ವಸತಿ ಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮ ದಾಸ್, ನಾನು ಶಾಸಕನಾದ ಬಳಿಕ ನಾನಾ ವಸತಿ ಯೋಜನೆಗಳಡಿ 3,816 ಮನೆಗಳನ್ನು ಬಡವರಿಗೆ ನೀಡಿದ್ದೇನೆ. ಮನೆ ಇಲ್ಲದವರ ಸಮೀಕ್ಷೆ ನಡೆಸಿದ 81,000 ಜನರ ಪೈಕಿ 11,000 ಮಂದಿ ಬಾಡಿಗೆ ಮನೆಯಲ್ಲಿದ್ದು, ಅರ್ಜಿ ಸಲ್ಲಿಸಿ ದ್ದಾರೆ. ಗೊರೂರಿನಲ್ಲಿ 22.5 ಎಕರೆ ಪ್ರದೇಶದಲ್ಲಿ 2,212 ಮನೆಗಳಿಗೆ ಭೂಮಿ ಪೂಜೆ ನೆರವೇರಿದ್ದು, ಮನೆಗಳ ಶೀಘ್ರ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಸಮಾರಂಭದಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ, ಮೈಸೂರು ನಗ ರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ರಾಜೀವ್, ನಗರಪಾಲಿಕೆ ಆಯುಕ್ತ ಲಕ್ಷ್ಮೀ ಕಾಂತರೆಡ್ಡಿ, ಹೆಚ್ಚವರಿ ಆಯುಕ್ತ ಕೆ.ಎನ್. ಶಶಿಕುಮಾರ್, ಕೆ.ಆರ್.ಕ್ಷೇತ್ರ ಬಿಜೆಪಿ ಅಧ್ಯಕ್ಷ ಎಂ.ವಡಿವೇಲು ಹಾಗೂ ಕ್ಷೇತ್ರದ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Translate »