ಸ್ಟೆಪ್‍ಒನ್‍ಗೆ ರಾಜ್ಯೋತ್ಸವ ಪ್ರಶಸ್ತಿ ಗರಿ
ಮೈಸೂರು

ಸ್ಟೆಪ್‍ಒನ್‍ಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

November 7, 2021

ಮೈಸೂರು, ನ.6- ಕೊರೊನಾ ಸಂಕಷ್ಟ ಕಾಲದಲ್ಲಿ ಜನರ ಕಷ್ಟಗಳಿಗೆ ಮಿಡಿದ ಸ್ಟೆಪ್ ಒನ್ ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಕಳೆದ 2 ವರ್ಷಗಳಿಂದ ಸಾವಿರಾರು ವೈದ್ಯರು, ದಾದಿಯರು, ವೈದ್ಯಕೀಯ ವಿದ್ಯಾರ್ಥಿಗಳ ತಂಡವನ್ನು ಕಟ್ಟಿಕೊಂಡು ಆನ್‍ಲೈನ್ ಮೂಲಕ ಮನೆ ಮನೆಗೆ ವೈದ್ಯಕೀಯ ಸೇವೆ ಒದಗಿಸಿ ಸಾವಿರಾರು ಜೀವಗಳನ್ನು ಉಳಿ ಸಿದ ಹೆಗ್ಗಳಿಕೆ ಈ ಸಂಸ್ಥೆಯದು.

ತಂತ್ರಜ್ಞಾನ ಮತ್ತು ಮಾನವ ಸಂಪ ನ್ಮೂಲಗಳನ್ನು ಅತ್ಯಂತ ಪರಿಣಾಮಕಾರಿ ಯಾಗಿ ಬಳಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಿದ ಸ್ಟೆಪ್‍ಒನ್ ಸಂಸ್ಥೆ ಇಡೀ ದೇಶಕ್ಕೇ ಮಾದರಿಯಾಗಿತ್ತು. ಕೊರೊನಾ ಕಾಲದಲ್ಲಿ ಸಂಸ್ಥೆಯ ಸಿಬ್ಬಂದಿ ಪ್ರತಿದಿನ ಅರವತ್ತು ಸಾವಿರಕ್ಕೂ ಹೆಚ್ಚು ಕರೆಗಳನ್ನು ಮಾಡಿ ರೋಗಿಗಳ ಆರೋಗ್ಯದ ಮೇಲೆ ಕಾಳಜಿ ವಹಿಸಿತ್ತು. ಕರ್ನಾಟಕ ಸರ್ಕಾರ ಈ ಸೇವೆ ಯನ್ನು ಗುರುತಿಸಿ ಸಂಸ್ಥೆಯನ್ನು ಗೌರವಿ ಸಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ರಾಘವೇಂದ್ರ ಪ್ರಸಾದ್ ಮತ್ತು ಸ್ಟೆಪ್ ಒನ್‍ನ ಅಂಗಸಂಸ್ಥೆಯಾದ ಮೈಸೂರಿನ ಅಭಿನವ ಈವೆಂಟ್ಸ್‍ನ ಮುಖ್ಯಸ್ಥ ವಿದ್ಯಾಶಂಕರ್ ಮುಖ್ಯಮಂತ್ರಿ ಗಳಿಂದ ಪ್ರಶಸ್ತಿ ಸ್ವೀಕರಿಸಿದರು.

Translate »