ಕುಂಬಾರಕೊಪ್ಪಲು ಶಾಲೆ ನಿವೃತ್ತ ಮುಖ್ಯ ಶಿಕ್ಷಕರಿಗೆ ಆತ್ಮಿಯ ಬೀಳ್ಕೊಡುಗೆ
ಮೈಸೂರು

ಕುಂಬಾರಕೊಪ್ಪಲು ಶಾಲೆ ನಿವೃತ್ತ ಮುಖ್ಯ ಶಿಕ್ಷಕರಿಗೆ ಆತ್ಮಿಯ ಬೀಳ್ಕೊಡುಗೆ

November 7, 2021

ಮೈಸೂರು, ಅ.6- ಮೈಸೂರಿನ ಕುಂಬಾರಕೊಪ್ಪಲು ಅಭ್ಯುದಯ ಸಂಘದಿಂದ ಗ್ರಾಮದಲ್ಲಿನ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ನಾಗಣ್ಣಗೌಡ ಅವರನ್ನು ಸನ್ಮಾನಿಸಿ, ಆತ್ಮೀಯವಾಗಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಗರ ಪಾಲಿಕೆ ಮಾಜಿ ಸದಸ್ಯರೂ ಆದ ಅಭ್ಯುದಯ ಸಂಘದ ಅಧ್ಯಕ್ಷ ಕೆ.ಟಿ.ಚಲುವೇಗೌಡ, ಮೈಸೂರು ಜಿಲ್ಲೆಯಲ್ಲಿ ಅತ್ಯುತ್ತಮ ಭೌತಿಕ ಸೌಲಭ್ಯ ಹೊಂದಿರುವ ಏಕೈಕ ಶಾಲೆ ಕುಂಬಾರಕೊಪ್ಪಲು ಹಿರಿಯ ಪ್ರಾಥಮಿಕ ಶಾಲೆ. ಈ ಶಾಲೆಯಲ್ಲಿ ಹನ್ನೊಂದು ವರ್ಷ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಹಲವು ಸಂಘ-ಸಂಸ್ಥೆಗಳಿಂದ ಅನುದಾನಗಳನ್ನು ತಂದು ಈ ಶಾಲೆಯಲ್ಲಿ ಅತ್ಯಂತ ಗುಣಮಟ್ಟದ ಶಿಕ್ಷಣ ನೀಡಲು ಕಾರಣಕರ್ತರಾಗಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಬರಲು ಕಾರ್ಯಕರ್ತರಾದ ನಾಗಣ್ಣಗೌಡರ ಸೇವೆ ಶ್ಲಾಘನೀಯ ಎಂದು ಹೇಳಿದರು.
ಕುಂಬಾರಕೊಪ್ಪಲು ಶಾಲೆಯೂ ಸೇರಿದಂತೆ ಮೈಸೂರಿನ ಮೂರು ಶಿಕ್ಷಣ ಸಂಸ್ಥೆ ಗಳಿಗೂ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ನಾಗಣ್ಣಗೌಡ ಅವರು ಕುಂಬಾರಕೊಪ್ಪಲು ಸರ್ಕಾರಿ ಶಾಲೆಯನ್ನು, ಖಾಸಗಿ ಶಾಲೆಗಳೊಂದಿಗೆ ಸ್ಪರ್ಧಿಸುವ ಮಟ್ಟಕ್ಕೆ ಅಭಿವೃದ್ಧಿಪಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಅಭ್ಯುದಯ ಸಂಘದ ಉಪಾಧ್ಯಕ್ಷರಾದ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಶಿವಪ್ಪ, ಮಹದೇವ್ ಸಹ ಕಾರ್ಯದರ್ಶಿ ಕುಮಾರ್‍ಗೌಡ, ಮಂಜು, ಖಜಾಂಚಿ ಲಾರಿ ಭೈರಪ್ಪ, ಆಪ್ಪಾಜಿಗೌಡ, ದಿನೇಶ್, ಮಹೇಶ್, ಪಟ್ಟಾಬಿ.ನವೀನ್ ಉಪಸ್ಥಿತರಿದ್ದರು.

Translate »