ಬೀದಿಬದಿ ವ್ಯಾಪಾರಿಗಳು 2014ರ ಕಾಯ್ದೆಯ  ಕಲ್ಯಾಣ ಕಾರ್ಯಕ್ರಮ ಸದ್ಬಳಕೆ ಮಾಡಿಕೊಳ್ಳಿ
ಮೈಸೂರು

ಬೀದಿಬದಿ ವ್ಯಾಪಾರಿಗಳು 2014ರ ಕಾಯ್ದೆಯ ಕಲ್ಯಾಣ ಕಾರ್ಯಕ್ರಮ ಸದ್ಬಳಕೆ ಮಾಡಿಕೊಳ್ಳಿ

February 16, 2022

ಮೈಸೂರು,ಫೆ.15(ಎಂಟಿವೈ)- ರಾಷ್ಟ್ರೀಯ ಜೀವನೋಪಾಯ ಬೀದಿಬದಿ ವ್ಯಾಪಾರಿ ಗಳ ಅಧಿನಿಯಮ 2014, ಸದುಪ ಯೋಗ ಪಡೆದುಕೊಳ್ಳುವ ಮೂಲಕ ಬೀದಿಬದಿ ವ್ಯಾಪಾರಿಗಳು ಏಳಿಗೆ ಸಾಧಿ ಸುವತ್ತ ಗಮನ ಕೇಂದ್ರೀಕರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಸಲಹೆ ನೀಡಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಡೇ-ನಲ್ಮ್ ಅಭಿಯಾನದಡಿ ನಗರ ಬೀದಿಬದಿ ವ್ಯಾಪಾರಿ ಗಳ ಬೆಂಬಲ ಉಪಘಟಕದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಮತ್ತು ಪಟ್ಟಣ ವ್ಯಾಪಾರ ಸಮಿತಿ ಸದಸ್ಯರುಗಳಿಗೆ ಅಧಿನಿಯಮ, ನಿಯಮ ಮತ್ತು ಯೋಜನೆಗಳ ಸಾಮಥ್ರ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೀದಿಬದಿ ವ್ಯಾಪಾರಿಗಳ ಹಿತಕಾಯುವುದ ರೊಂದಿಗೆ ಅವರಿಗೆ ನೆರವಾಗುವ ನಿಟ್ಟಿನಲ್ಲಿ ರಾಷ್ಟ್ರೀಯ ಜೀವನೋಪಾಯ ಬೀದಿಬದಿ ವ್ಯಾಪಾರಿಗಳ ಅಧಿನಿಯಮ 2014 ಜಾರಿಗೆ ತಂದಿದೆ. ಈ ಹಿಂದೆ ಬೀದಿಬದಿ ವ್ಯಾಪಾರಿ ಗಳಿಗೆ ನೆರವಾಗುವ ಯಾವುದೇ ನಿಯಮ ಗಳಿರಲಿಲ್ಲ. 2014ರಲ್ಲಿ ಜಾರಿಗೊಳಿಸಿದ ಕಾಯ್ದೆ ಬೀದಿಬದಿ ವ್ಯಾಪಾರಿಗಳ ರಕ್ಷಣೆ ಯಲ್ಲಿ ಮಹತ್ವ ಪಡೆದಿದೆ. ಈ ಕಾಯ್ದೆಯ ಆಧಾರದ ಮೇಲೆ ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಿಗಳ ನಿಯಮ ಹಾಗೂ ಯೋಜನೆಗಳನ್ನು ತಂದಿದೆ. ಇದರಲ್ಲಿನ ಕಲ್ಯಾಣ ಕಾರ್ಯಕ್ರಮಗಳನ್ನು ಉಪ ಯೋಗಿಸಿಕೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳು ಮಾಡಿರುವ ಪಟ್ಟಣ ವ್ಯಾಪಾರಿ ಸಂಸ್ಥೆಗಳ ಸಮಿತಿಯಲ್ಲಿ ನಿಯಮಾನು ಸಾರ ಚರ್ಚಿಸಿ, ತೀರ್ಮಾನ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಮೇಯರ್ ಸುನಂದಾ ಪಾಲನೇತ್ರ ಮಾತ ನಾಡಿ, ಮೈಸೂರು ಪಾಲಿಕೆ ಈ ಹಿಂದಿ ನಿಂದಲೂ ಬೀದಿಬದಿ ವ್ಯಾಪಾರಿಗಳ ಹಿತ ಕಾಯುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿ ಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಪಾಲಿಕೆ ಸಹಕಾರ ನೀಡುತ್ತದೆ. ಆದರೆ ಬೀದಿಬದಿ ವ್ಯಾಪಾರಿಗಳೂ ಪಾಲಿಕೆಯ ನಿಯಮ ಪಾಲಿಸಬೇಕು ಎಂದರು.

ಕಾರ್ಯಾಗಾರದಲ್ಲಿ ಬೀದಿಬದಿ ವ್ಯಾಪಾರಿ ಗಳಿಗೆ ಬ್ಯಾಂಕ್ ವತಿಯಿಂದ ದೊರೆಯುವ ಸಾಮಾಜಿಕ ಭದ್ರತೆ ವಿವರಗಳ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಂದರ್ಭ ದಲ್ಲಿ 20ಕ್ಕೂ ಹೆಚ್ಚು ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಮತ್ತು ಪಟ್ಟಣ ವ್ಯಾಪಾರ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಪಾಲಿಕೆ ಹೆಚ್ಚುವರಿ ಆಯುಕ್ತೆ ಎಂ.ಜೆ.ರೂಪ, ಲೀಡ್ ಬ್ಯಾಂಕ್ ಮ್ಯಾನೇಜರ್ ಗೋಪಿನಾಥ್, ಪಾಲಿಕೆ ಆರೋ ಗ್ಯಾಧಿಕಾರಿ ಡಾ.ನಾಗರಾಜ್, ಅಭಿಯಾನ ವ್ಯವಸ್ಥಾಪಕ ಡಾ.ಜೆ.ಎಸ್.ಭೈರಲಿಂಗಯ್ಯ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ.ಜಗ ನ್ನಾಥ್ ಇನ್ನಿತರರು ಪಾಲ್ಗೊಂಡಿದ್ದರು.

Translate »