ಮೈಸೂರಿನ ಟೌನ್‍ಹಾಲ್ ಬಹು ಮಹಡಿ ಪಾರ್ಕಿಂಗ್ ದಸರಾ ಒಳಗೆ ಪೂರ್ಣ
ಮೈಸೂರು

ಮೈಸೂರಿನ ಟೌನ್‍ಹಾಲ್ ಬಹು ಮಹಡಿ ಪಾರ್ಕಿಂಗ್ ದಸರಾ ಒಳಗೆ ಪೂರ್ಣ

February 16, 2022

ಮೈಸೂರು,ಫೆ.15(ಜಿಎ)-ಮೈಸೂರಿನ ಟೌನ್‍ಹಾಲ್ ಆವರಣದಲ್ಲಿ ಸ್ಥಗಿತಗೊಂಡಿದ್ದ ಮಲ್ಟಿ ಲೆವೆಲ್ ಪಾರ್ಕಿಂಗ್ ಲಾಟ್ ಕಾಮಗಾರಿ ಮತ್ತೆ ಆರಂಭವಾಗಿದ್ದು, ದಸರಾ ಆರಂಭಕ್ಕೂ ಮುನ್ನ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಮೈಸೂರಿನಲ್ಲಿ ಜನಸಂಖ್ಯೆಯ ಜೊತೆಗೆ ವಾಹನಗಳÀ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ತಮ್ಮ ವಾಹನ ಗಳನ್ನು ಸಿಕ್ಕ ಸಿಕ್ಕ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುವುದು ಮಾಮೂಲಾಗಿದೆ. ಈ ಹಿನ್ನೆಲೆಯಲ್ಲಿ ಟೌನ್‍ಹಾಲ್ ಆವರಣದಲ್ಲಿ ಕಳೆದ 10 ವರ್ಷದ ಹಿಂದೆ ಆರಂಭವಾದ ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಮಗಾರಿ ಕುಂಟುತ್ತಲೇ ಸಾಗುತ್ತಿದ್ದು, ಈಗ ಮರು ಕಾಮಗಾರಿ ಆರಂಭವಾಗಿದೆ.

ಬಹು-ಹಂತದ ಪಾರ್ಕಿಂಗ್ ಸ್ಥಳದಲ್ಲಿ 600ಕ್ಕೂ ಹೆಚ್ಚು 4-ಚಕ್ರ ವಾಹನಗಳು ಮತ್ತು 1,000ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸುತ್ತದೆ. ನಗರ ಪಾಲಿಕೆ ಹೈದರಾಬಾದ್ ಮೂಲದ ಛಾಬ್ರಿಯಾ ಅಸೋಸಿ ಯೇಟ್ಸ್ ಸಂಸ್ಥೆಗೆ 18.28 ಕೋಟಿ ರೂ. ಮೊತ್ತಕ್ಕೆ ಟೆಂಡರ್ ನೀಡಲಾಗಿತ್ತು. ಆದರೆ ಛಾಬ್ರಿಯಾ ಅಸೋಸಿಯೇಟ್ಸ್ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ. ಸದ್ದಿಲ್ಲದೆ ಹೈದರಾ ಬಾದ್‍ಗೆ ಮರಳಿತ್ತು. ನಂತರ ಬಿಲ್ಲಿಂಗ್ ವಿಚಾರವಾಗಿ ಛಾಬ್ರಿಯಾ ಅಸೋಸಿಯೇಟ್ಸ್, ಮೈಸೂರು ಪಾಲಿಕೆಯ ವಿರುದ್ಧವೇ ಎರಡು ಕೇಸ್‍ಗಳನ್ನು ದಾಖಲಿಸಿತ್ತು. ಮೊದಲ ಕೇಸ್ ತೀರ್ಪು ಛಾಬ್ರಿಯಾ ಅಸೋಸಿಯೇಟ್ಸ್ ಪರವಾಗಿ ಬಂದಿದೆ. ಎರಡನೇ ಕೇಸ್ ಇನ್ನೂ ವಿಚಾರಣೆ ನಡೆಯುತ್ತಿದೆ. ಎಲ್ಲವೂ ಸರಿ ಇದ್ದಿದ್ದರೆ, ಯೋಜನೆಯು ಏಪ್ರಿಲ್ 2012ರೊಳಗೆ ಪೂರ್ಣಗೊಳ್ಳಬೇಕಿತ್ತು.

2021ರ ಜುಲೈ ತಿಂಗಳಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್, ಶಾಸಕ ಎಲ್.ನಾಗೇಂದ್ರ, ಡಿಸಿ ಡಾ.ಬಗಾದಿ ಗೌತಮ್, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ ಮತ್ತು ಕೆಲವು ಕಾಪೆರ್Çರೇಟರ್‍ಗಳು ನಗರ ಪ್ರದಕ್ಷಿಣೆ ಮಾಡಿದ್ದರು. ಆಗ ಈ ಪಾರ್ಕಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕಾಮಗಾರಿಯ ಸಂಪೂರ್ಣ ಮಾಹಿತಿ ಪಡೆದ ನಂತರ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಪಾಲಿಕೆ ಅಧಿಕಾರಿ ಗಳಿಗೆ ಸೂಚಿಸಿದ್ದರು. ಅದ ರಂತೆ ಪಾಲಿಕೆ ಅಧಿಕಾರಿಗಳು ಛಾಬ್ರಿಯಾ ಅಸೋಸಿಯೇಟ್ಸ್ ಸಂಸ್ಥೆಯು ಬಿಲ್ಲಿಂಗ್ ವಿಚಾರ ವಾಗಿ ಮಾತ್ರ ಕೇಸ್ ದಾಖಲು ಮಾಡಿದೆಯೇ ಹೊರತು. ಕಾಮಗಾರಿ ಆರಂಭಿಸಲು ಯಾವುದೇ ಸಮಸ್ಯೆ ಇಲ್ಲ. ಈ ಸಂಬಂಧ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪಿಸಿ ಮರು ಕಾಮಗಾರಿ ಆರಂಭಕ್ಕೆ ಅನುಮೋದನೆ ಪಡೆದುಕೊಳ್ಳಲಾಗಿತ್ತು.

ಈ ಸಂಬಂಧ ‘ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ, ಈ ಕಾಮಗಾರಿ ಕೆಲವು ತೊಡಕುಗಳಿಂದ ಅರ್ಧಕ್ಕೆ ನಿಂತಿತ್ತು. ಮತ್ತೆ 5 ಕೋಟಿ ರೂ. ಮೊತ್ತದ ಟೆಂಡರ್ ನೀಡಿ ಮರು ಕಾಮಗಾರಿ ಆರಂಭಿಸಲಾಗಿದೆ. ಮೈಸೂರಿನ ಸಾರ್ವಜನಿಕ ರಿಗೆ ಪಾರ್ಕಿಂಗ್‍ಗೆ ಸಮಸ್ಯೆ ಉಂಟಾಗುತ್ತಿದ್ದು, ಸುಗಮ ಸಂಚಾರ ಸಮಸ್ಯೆ ಇತ್ತು. ಈ ಕಾಮಗಾರಿ ಪೂರ್ಣವಾದರೆ ವಾಹನ ಸಂಚಾರಕ್ಕೂ, ನಿಲುಗಡೆಗೂ ಸಹಕಾರಿಯಾಗ ಲಿದೆ. ಸರಿ ಸುಮಾರು 5 ರಿಂದ 6 ತಿಂಗಳ ಅವಧಿಯಲ್ಲಿ ಕಾಮಗಾರಿ ಮುಗಿಯುವ ಸಾಧ್ಯತೆ ಇದೆ. ವಾಹನ ನಿಲು ಗಡೆಯ ಶುಲ್ಕದ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ. ಕಾಮಗಾರಿ ಪೂರ್ಣವಾದ ನಂತರ ಆ ವಿಚಾರವಾಗಿ ಚರ್ಚಿಸಲಾಗು ವುದು ಎಂದರು. ಮೈಸೂರು ಮೂಲದ ಒಂದು ಸಂಸ್ಥೆಗೆ ಮಲ್ಟಿ ಲೆವೆಲ್ ಪಾರ್ಕಿಂಗ್ ಮರು ಕಾಮಗಾರಿಯ ಟೆಂಡರ್ ನೀಡಿದ್ದು, ಕಳೆದ 2 ವಾರದಿಂದ ಕೆಲಸ ನಡೆಯುತ್ತಿದೆ. ಈಗಾಗಲೇ ಶೇ.60ರಷ್ಟು ಕಾಮಗಾರಿ ಮುಗಿದಿದ್ದು, ಸ್ಥಳದಲ್ಲಿ ತುಂಬಿದ್ದ ಮಳೆ ನೀರು ತೆರವು ಮಾಡಲಾಗಿದೆ. ವಾಟರ್ ರೂಫಿಂಗ್ ಕೆಲಸ ಮಾಡಲಾಗುತ್ತಿದೆ ಎಂದು ವಲಯ ಕಚೇರಿ 6ರ ಅಭಿವೃದ್ಧಿ ಅಧಿಕಾರಿ ಸಿ.ಮಂಜುನಾಥ್ ತಿಳಿಸಿದರು.

Translate »