ಬ್ಯಾಟರಿ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಳ: ಮೈಸೂರು ಭಾಗದಲ್ಲಿ 150 ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಚೆಸ್ಕಾಂ ನಿರ್ಧಾರ
ಮೈಸೂರು

ಬ್ಯಾಟರಿ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಳ: ಮೈಸೂರು ಭಾಗದಲ್ಲಿ 150 ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಚೆಸ್ಕಾಂ ನಿರ್ಧಾರ

February 16, 2022

ಮೈಸೂರು,ಫೆ.15- ತೈಲ ಬೆಲೆ ಹೆಚ್ಚಳ ದಿಂದ ಕಂಗೆಟ್ಟಿರುವ ವಾಹನ ಸವಾರರು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದು, ಇದೀಗ ದಿನದಿಂದ ದಿನಕ್ಕೆ ಈ ವಾಹನಗಳ ಬಳಕೆ ಹೆಚ್ಚಾಗು ತ್ತಿದೆ. ಭವಿಷ್ಯದಲ್ಲಿ ಬ್ಯಾಟರಿಚಾಲಿತ ವಾಹನ ಸವಾರರಿಗೆ ನೆರವಾಗುವ ನಿಟ್ಟಿನಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚೆÉಸ್ಕಾಂ)ವು ಮೈಸೂರು ವಿಭಾಗದ ಐದು ಜಿಲ್ಲೆಗಳಲ್ಲಿ 150 ಕಡೆ ಎಲೆಕ್ಟ್ರಿಕ್ ಬ್ಯಾಟರಿ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿದೆ.

ಪೆಟ್ರೋಲ್, ಡೀಸೆÀಲ್, ಅನಿಲ ಬೆಲೆ ಹೆಚ್ಚಳದಿಂದಾಗಿ ಜನಸಾಮಾನ್ಯರು ತತ್ತರಿ ಸಿದ್ದಾರೆ. ವಾಹನ ಬಳಕೆದಾರರ ಜೇಬು ಬರಿದಾಗುತ್ತಿದೆ. ಈ ನಿಟ್ಟಿನಲ್ಲಿ ಹಲವು ಮಂದಿ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿ ದ್ದಾರೆ. ಗ್ರಾಹಕರ ಅಭಿರುಚಿಗೆ ಅನುಗುಣ ವಾಗಿ ಎಲೆಕ್ಟ್ರಿಕ್ ವಾಹನಗಳು ವಿವಿಧ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬಂದಿವೆ.

ವಿವಿಧ ಬಣ್ಣ, ನವ ವಿನ್ಯಾಸದಿಂದ ಗ್ರಾಹಕರನ್ನು ಸೆಳೆಯು ತ್ತಿವೆ. ದ್ವಿಚಕ್ರ, ತ್ರಿಚಕ್ರ ಹಾಗೂ 4 ಚಕ್ರದ ವಾಹನಗಳು ಈಗಾ ಗಲೇ ಮಾರುಕಟ್ಟೆಯಲ್ಲಿದ್ದು, ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. ಭವಿಷ್ಯ ದಲ್ಲಿ ಇಂಧನದಿಂದ ಚಾಲನೆಯಾಗುವ ವಾಹನಗಳಿಗೆ ಸರಿಸಮಾನವಾಗಿ ಬ್ಯಾಟರಿ ಚಾಲಿತ ವಾಹನಗಳು ಬಳಕೆಯಾಗುವ ಮುನ್ಸೂಚನೆ ದೊರೆತಿರುವುದರಿಂದ ಮುಂಬ ರುವ ದಿನಗಳಲ್ಲಿ ಬ್ಯಾಟರಿ ಚಾಲಿತ ವಾಹನಗಳ ಸವಾರರಿಗೆ ನೆರವಾಗುವ ನಿಟ್ಟಿ ನಲ್ಲಿ ಚೆಸ್ಕಾಂ ಚಾರ್ಜಿಂಗ್ ಕೇಂದ್ರ ಸ್ಥಾಪಿ ಸಲು ಮುಂದಾಗಿದೆ. ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ.

ಎರಡು ವಿಧದ ಚಾರ್ಜ್: ಉದ್ದೇಶಿತ ಚಾರ್ಜಿಂಗ್ ಕೇಂದ್ರದಲ್ಲಿ ಎಸಿ ಹಾಗೂ ಡಿಸಿ ವಿಧಾನದಲ್ಲಿ ಪ್ಲಗ್‍ಪಾಯಿಂಟ್ ಅಳ ವಡಿಸಲಾಗುತ್ತದೆ. ಎಸಿ ವಿಭಾಗದಲ್ಲಿ ಚಾರ್ಜ್ ಮಾಡುವಾಗ ಹೆಚ್ಚು ಸಮಯ ಹಿಡಿಯ ಲಿದೆ. ಕೆಲವು ವಾಹನಗಳಿಗೆ ಎಸಿ ವಿಧಾ ನದ ಚಾರ್ಜಿಂಗ್ ಇರುತ್ತದೆ. ಈ ಕೇಂದ್ರ ದಲ್ಲಿ ದ್ವಿಚಕ್ರ್ರÀ ವಾಹನ, 3 ಹಾಗೂ 4 ಚಕ್ರದ ವಾಹನಗಳಿಗೆ ಚಾರ್ಜ್ ಮಾಡಬಹುದಾ ಗಿದೆ. ಒಂದೇ ಬಾರಿ 3 ವಾಹನಗಳಿಗೆ ಚಾರ್ಜ್ ಮಾಡಲು ಪ್ರತ್ಯೇಕ ಪ್ಲಗ್ ಇರಲಿದೆ. ಡಿಸಿ ವಿಧಾನದಲ್ಲಿ ನೇರವಾಗಿ ಬ್ಯಾಟರಿ ಯನ್ನೇ ಚಾರ್ಜ್ ಮಾಡಲಾಗುತ್ತದೆ. ಇದ ರಲ್ಲಿ ಹೆಚ್ಚಿನ ಪ್ರಮಾಣದÀ ವಿದ್ಯುತ್ ಹರಿ ಯುವ ವ್ಯವಸ್ಥೆಯಾಗಿರುವುದರಿಂದ 60 ರಿಂದ 80 ನಿಮಿಷದೊಳಗೆ ಕಾರೊಂದರ ಬ್ಯಾಟರಿಯನ್ನು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಬಹುದಾಗಿದೆ.

150 ಕಡೆ ಚಾರ್ಜಿಂಗ್ ಕೇಂದ್ರ: ಚೆÉಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬ್ಯಾಟರಿ ಚಾಲಿತ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ನೆರೆ ಹೊರೆ ಜಿಲ್ಲೆಗಳಿಂದ ಮೈಸೂರಿಗೆ ಪ್ರತಿದಿನ ಬಂದು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಎಲೆಕ್ಟ್ರಿಕ್ ವಾಹನ ಬಳಕೆ ದಾರರು ಮೈಸೂರಿಗೆ ಬರಲೂಬಹುದು. ಇಂತಹ ವಾಹನಗಳ ಬ್ಯಾಟರಿ ಚಾರ್ಜ್ ಮಾಡಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಚೆಸ್ಕಾಂ ಮೈಸೂರು ವಿಭಾ ಗಕ್ಕೆ ಒಳಪಡುವ ಐದು ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಮತ್ತು ಕೊಡಗಿನಲ್ಲಿ 150 ಚಾರ್ಜಿಂಗ್ ಸ್ಟೇಷನ್‍ಗಳನ್ನು ಸ್ಥಾಪಿಸಲು ಸ್ಥಳ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಬಹುತೇಕ ಚಾರ್ಜಿಂಗ್ ಪಾಯಿಂಟ್‍ಗಳನ್ನು ಸರ್ಕಾರಿ ಕಚೇರಿ ಆವರಣದ ಜಾಗದಲ್ಲೇ ನಿರ್ಮಿಸಲು ಉದ್ದೇಶಿಸಲಾಗಿದೆ.

ಮೈಸೂರು-ಬೆಂಗಳೂರು ರಸ್ತೆಯಲ್ಲಿ 10 ಕಡೆ: ಮೈಸೂರು-ಬೆಂಗಳೂರು ರಸ್ತೆಯಲ್ಲಿ ಮೈಸೂರಿಂದ ಮದ್ದೂರುವರೆಗೂ ಚೆÉಸ್ಕಾಂ ವ್ಯಾಪ್ತಿಗೆ ಒಳಪಡುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಮೈಸೂರು-ಬೆಂಗಳೂರು ನಡುವೆ ನಿರ್ಮಾಣವಾಗುತ್ತಿರುವ ದಶಪಥ ರಸ್ತೆಯಲ್ಲಿ ಮದ್ದೂರಿಂದ ಮೈಸೂರುವರೆಗೆ ಟೋಲ್ ಪ್ಲಾಜಾ ಸೇರಿದಂತೆ ಕೆಲವು ಸ್ಥಳಗಳನ್ನು ಗುರುತಿಸಲಾಗಿದ್ದು, ಸುಮಾರು 10 ಕಡೆ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದ ರಿಂದ ರಾಜಧಾನಿ ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸುವ ವಾಹನ ಸವಾರರಿಗೆ ನೆರವಾಗಲಿದೆ ಎಂದರು.

ಪಿಪಿಪಿ ಮಾದರಿ: ನೂತನವಾಗಿ ನಿರ್ಮಿಸಲಾಗುವ ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರಗಳನ್ನು ಪಿಪಿಪಿ ಮಾದÀರಿಯಲ್ಲಿ ನಿರ್ವಹಣೆ ಮಾಡುವ ಆಲೋಚನೆಯೂ ಚೆÉಸ್ಕಾಂನದ್ದಾಗಿದೆ. ಆದರೆ, ದರ ನಿಗದಿ ಸೇರಿದಂತೆ ಚಾರ್ಜಿಂಗ್ ಕೇಂದ್ರದ ಮೇಲಿನ ಹಿಡಿತ ಚೆÉಸ್ಕಾಂನದ್ದಾಗಿರುತ್ತದೆ ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸ ಲಾಗಿದೆ.

ಮೈಸೂರಲ್ಲಿ ಮೊದಲ ಕೇಂದ್ರ: ಮೈಸೂರು-ಹುಣಸೂರು ಮುಖ್ಯರಸ್ತೆ ಯಲ್ಲಿ ಹಿನಕಲ್ ಬಳಿ ವಿಜಯನಗರ ಬಡಾ ವಣೆಯಲ್ಲಿನ `ಸೆಸ್ಕ್’ ಕಚೇರಿ ಆವರಣ ದಲ್ಲಿ 2021 ಡಿಸೆಂಬರ್ 26ರಂದು ಮೈಸೂ ರಿನ ಮೊದಲ ವಿದ್ಯುತ್ ಚಾಲಿತ ವಾಹನ ಗಳ ಚಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸ ಲಾಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗುತ್ತಿದೆ. ಎಲೆಕ್ಟ್ರಿಕಲ್ ಆಟೋ ಹಾಗೂ ಕಾರ್‍ಗಳಿಗೆ ಚಾರ್ಜ್ ಮಾಡಲಾಗುತ್ತಿದೆ.

Translate »