ಅಧಿಕೃತ ಗಣಿಗಾರಿಕೆಗೆ ಅಡ್ಡಿ ಮಾಡಿದವರ ವಿರುದ್ಧ ಕಠಿಣ ಕ್ರಮ
News

ಅಧಿಕೃತ ಗಣಿಗಾರಿಕೆಗೆ ಅಡ್ಡಿ ಮಾಡಿದವರ ವಿರುದ್ಧ ಕಠಿಣ ಕ್ರಮ

February 6, 2022

ಬೆಂಗಳೂರು,ಫೆ.5(ಕೆಎಂಶಿ)-ಅಧಿಕೃತ ಪರವಾನಗಿ ಪಡೆದು ಗಣಿಗಾರಿಕೆ ಮಾಡು ತ್ತಿರುವವರಿಗೆ ಕಿರುಕುಳ ನೀಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮಂಡ್ಯ ಸಂಸದೆ ಸುಮಲತಾ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾನು ಸಂಸದಳಾಗಿ ಆಯ್ಕೆಯಾದ ದಿನದಿಂದಲೂ ಈವರೆಗೂ ಮಂಡ್ಯ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯು ತ್ತಿರುವ ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿದ್ದೇನೆ. ಆದರೆ ಇದನ್ನೇ ನೆಪ ಮಾಡಿಕೊಂಡಿರುವ ಕೆಲವು ಅಧಿಕಾರಿಗಳು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅಧಿಕೃತವಾಗಿ ಪರವಾನಿಗೆ ಪಡೆದು ಗಣಿಗಾರಿಕೆ ಮಾಡು ತ್ತಿರುವ ಸಕ್ರಮ ಗಣಿಗಾರಿಕೆಗಳನ್ನು ಸಹ ತಡೆಯುತ್ತಿದ್ದಾರೆ. ಈ ಮಾಹಿತಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಚರ್ಚೆಯಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಈ ರೀತಿ ವರ್ತಿಸದಂತೆ ಸೂಚಿಸಿರುತ್ತೇನೆ. ಇದನ್ನು ಮೀರಿ ಯಾವುದಾದರೂ ಅಧಿಕಾರಿಗಳು ಲಂಚ, ಹಣಕ್ಕೆ ಬೇಡಿಕೆ ಇಟ್ಟಲ್ಲಿ ಅಥವಾ ಈ ರೀತಿಯ ಪ್ರಸಂಗಗಳು ಉದ್ದೇಶಪೂರ್ವಕವಾಗಿ ನಡೆದಲ್ಲಿ ಸಂಬಂಧಪಟ್ಟವರು ನೇರವಾಗಿ ನನ್ನ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ (08232-229944) ಎಂದು ತಿಳಿಸಿದ್ದಾರೆ.

Translate »