ಒಕ್ಕಲಿಗ ಸಮುದಾಯ ಉದ್ಯಮಶೀಲ ಸಂಸ್ಕøತಿ ರೂಢಿಸಿಕೊಳ್ಳಬೇಕು
News

ಒಕ್ಕಲಿಗ ಸಮುದಾಯ ಉದ್ಯಮಶೀಲ ಸಂಸ್ಕøತಿ ರೂಢಿಸಿಕೊಳ್ಳಬೇಕು

February 6, 2022

ಬೆಂಗಳೂರು, ಫೆ. 5(ಕೆಎಂಶಿ)- ಕೃಷಿಗೆ ಹೆಸರಾಗಿರುವ ಒಕ್ಕಲಿಗ ಜನಾಂಗವು ವ್ಯಾಪಾರ ವಹಿವಾಟು ನಡೆಸುವ ಉದ್ಯಮಶೀಲ ಸಂಸ್ಕೃತಿಯನ್ನು ರೂಪಿಸಿಕೊಳ್ಳುವ ಅಗತ್ಯ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಕರೆ ಕೊಟ್ಟಿದ್ದಾರೆ.

ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ‘ಫಸ್ಟ್ ಸರ್ಕಲ್’ ಸಂಘಟನೆಯನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಸಮುದಾಯದ ಉತ್ತಮ ಸಾಧಕರು ಮತ್ತು ಪ್ರತಿಭಾವಂತರು ಸಮಾಜದ ಋಣ ತೀರಿಸಲು ಮೆಟ್ಟಿಲುಗಳಾಗಲು ಸಿದ್ಧರಿದ್ದಾರೆ. ಈ ಸಂಘಟನೆಯ ಉಪಕ್ರಮವು ಒಂದು ಐತಿಹಾಸಿಕ ದಿನವಾಗಿದೆ ಎಂದರು.

ಒಕ್ಕಲಿಗ ಜನಾಂಗವು ಕೇವಲ ಪ್ರೋತ್ಸಾಹ ಭತ್ಯೆಗಳನ್ನು ನೆಚ್ಚಿಕೊಂಡಿರುವ ಕೃಷಿ ಮಾರುಕಟ್ಟೆಯನ್ನು ನಂಬಿ ಕೂರಬಾರದು. ಬದಲಿಗೆ ಮಾರುಕಟ್ಟೆ ಆರ್ಥಿಕತೆ ಆಧರಿಸಿ ನಡೆದರೆ ಪ್ರಗತಿ ಸಾಧ್ಯ ಎಂದರು. ಸಮುದಾಯವು ತನ್ನ ಶಕ್ತಿ ಮತ್ತು ಜಾಣ್ಮೆಯನ್ನು ಪರಿಪೂರ್ಣವಾಗಿ ಬಳಸಿಕೊಂಡಿಲ್ಲ. ಉತ್ತಮ ಗುಣಮಟ್ಟದ ಜತೆಗೆ ಮುನ್ನುಗ್ಗಿ ನಡೆ ದರೆ ವಿಕ್ರಮವನ್ನೇ ಸಾಧಿಸಬಹುದು. ಈ ಸಂಘಟನೆಯು ಆ ನಿಟ್ಟಿನಲ್ಲಿ ಅಗತ್ಯ ರಚನಾ ತ್ಮಕ ಉಪಕ್ರಮಗಳನ್ನು ತೆಗೆದು ಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.

ಸರಕಾರವು ತೆಂಗು ಮತ್ತು ಮಾವು ಬೆಳೆಗಳಿಗೆ ಮೌಲ್ಯವರ್ಧನೆ ಮಾಡಲು ಕೃಷಿ ಕಲ್ಪ ಯೋಜನೆಯನ್ನು ಆರಂಭಿಸಿದೆ. ಇದರ ಲಾಭ ರಾಮನಗರ ಜಿಲ್ಲೆಯ ರೈತರಿಗೆ ದೊರಕಿದೆ. ಉಳಿದ ಜಿಲ್ಲೆಗಳ ರೈತರಿಗೂ ಇಂತಹ ಸೂಕ್ತ ಯೋಜನೆಗಳನ್ನು ರೂಪಿಸಬೇಕು ಎಂದು ಸಚಿವ ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

 

Translate »