ಸಂಸ್ಕøತಿ, ಸಂಸ್ಕಾರದ ಉಳಿವಿಗೆ ಶ್ರಮಿಸುತ್ತಿರುವ  ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ
ಮೈಸೂರು

ಸಂಸ್ಕøತಿ, ಸಂಸ್ಕಾರದ ಉಳಿವಿಗೆ ಶ್ರಮಿಸುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ

October 11, 2021

ಮೈಸೂರು, ಅ.10(ಎಂಟಿವೈ)- ಆಧುನಿಕತೆ ಜನ ರನ್ನು ಆಕರ್ಷಿಸುತ್ತಿರುವುದರಿಂದ ಸಂಸ್ಕೃತಿ, ಸಂಸ್ಕಾರ ಕಣ್ಮರೆಯಾಗುತ್ತಿರುವ ಸಂದರ್ಭದಲ್ಲೇ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯವು ಜನರಲ್ಲಿ ಜೀವನದ ಮೌಲ್ಯಗಳನ್ನು ತುಂಬುವುದರೊಂದಿಗೆ ಸಂಸ್ಕೃತಿ, ಸಂಸ್ಕಾರಗಳ ಉಳಿವಿಗೆ ಶ್ರಮಿಸುತ್ತಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು-ಹುಣಸೂರು ರಸ್ತೆಯಲ್ಲಿನÀ ಲಿಂಗ ದೇವರಕೊಪ್ಪಲುನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವ ರೀಯ ವಿಶ್ವವಿದ್ಯಾಲಯ ವತಿಯಿಂದ ನಿರ್ಮಾಣ ವಾಗುತ್ತಿರುವ ಮಹಾಶಿವಲಿಂಗ ಸ್ಥಾಪನೆ ಹಾಗೂ ರಾಜಯೋಗ ಮ್ಯೂಸಿಯಂ ನಿರ್ಮಾಣದ ಭೂಮಿ ಪೂಜೆ ನೇರವೇರಿಸಿದ ಬಳಿಕ ಮಾತನಾಡಿದ ಅವರು, ಬ್ರಹ್ಮಕುಮಾರಿಯರು ಜನರಲ್ಲಿ ಆಧ್ಯಾತಿಕತೆಯ ವಿಚಾರಧಾರೆ ತುಂಬುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ. ಅಲ್ಲದೆ ರಕ್ಷಾ ಬಂಧನ್ ದಿನದಂದು ಎಲ್ಲಾ ಕಚೇರಿ, ಶಾಲಾ-ಕಾಲೇಜುಗಳಿಗೆ ತೆರಳಿ ರಕ್ಷಾ ಬಂಧನದ ಮಹತ್ವ ಸಾರುವ ಕಾರ್ಯದಲ್ಲಿ ತೊಡಗು ವುದರ ಮೂಲಕ ರಕ್ಷಾ ಬಂಧನದ ಮಹತ್ವವನ್ನು ತಿಳಿಸುತ್ತಿರುವುದು ಶ್ಲಾಘನೀಯ. ಆಧ್ಯಾತ್ಮಿಕ ಚಿಂತನೆ ಗಳ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡ ಗಿಸಿಕೊಂಡು ಸರ್ವರ ಹಿತ ಕಾಯುವ ಕೆಲಸ ಮಾಡು ವುದರೊಂದಿಗೆ ಸಮಾಜದ ಒಳಿತಿಗಾಗಿ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಶ್ರಮಿಸುತ್ತಿದೆ ಎಂದರು.

ಸೇವಾ ಕಾರ್ಯದಲ್ಲಿ ಜಾತಿ, ಧರ್ಮ, ಭೇದವಿಲ್ಲದೆ ಸರ್ವರನ್ನು ಸಮಾನವಾಗಿ ಕಂಡು ವಿಶ್ವಕ್ಕೆ ಶಾಂತಿಯ ಸಂದೇಶ ಸಾರುವ ಕೆಲಸ ಮಾಡುತ್ತಿರುವು ಶ್ಲಾಘ ನೀಯ. ಸಮಾಜದ ಒಳಿತಿಗಾಗಿ, ಸರ್ವರ ಹಿತವನ್ನೇ ಬಯಸುವ ಕೆಲಸ ಮಾಡುತ್ತಿದ್ದಾರೆ. ದೇಶ, ವಿದೇಶ ಗಳಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ತುಂಬುವ ಮೂಲಕ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಪರೋಕ್ಷವಾಗಿ ನೆರವಾಗುತ್ತಿದ್ದಾರೆ. ಸರ್ವರ ಕಲ್ಯಾಣವನ್ನು ಬಯ ಸುವ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಇದೀಗ ಮಹಾಶಿವಲಿಂಗ ಮತ್ತು ರಾಜಯೋಗ ಮ್ಯೂಸಿಯಂ ಸ್ಥಾಪನೆ ಮಾಡಲು ಮುಂದಾಗಿದ್ದು ಒಳ್ಳೆ ಬೆಳವಣಿಗೆ. ಈ ಕಾರ್ಯ ಸಾಧ್ಯವಾದಷ್ಟು ಬೇಗ ಪೂರ್ಣ ಗೊಂಡು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಸಿಗು ವಂತಾಗಲಿ ಎಂದು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ರಾಜಯೋಗಿ ಬಿ.ಕೆ.ಕರುಣಾಜಿ, ಬ್ರಹ್ಮಕುಮಾರಿ ಸಂಸ್ಥೆ ಮುಖ್ಯ ಸಂಚಾ ಲಕರಾದ ರಾಜಯೋಗಿನಿ ಬಿ.ಕೆ.ಲಕ್ಷ್ಮೀಜಿ, ಬ್ರಹ್ಮಕುಮಾ ರಿಸ್ ಲೆಕ್ಕಪತ್ರವಿಭಾಗದ ಮುಖ್ಯಸ್ಥರಾದ ರಾಜ ಯೋಗಿನಿ ಬಿ.ಕೆ.ಲಲಿತ್ ಜಿ.ಇನಾನಿ, ಉದ್ಯಮಿ ಗೋವಿಂದೇ ಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Translate »