ಬೆಲೆ ಏರಿಕೆ ವಿರುದ್ಧ ವಿಪಕ್ಷಗಳು ತೀವ್ರತರ ಹೋರಾಟ ನಡೆಸಬೇಕು
ಮೈಸೂರು

ಬೆಲೆ ಏರಿಕೆ ವಿರುದ್ಧ ವಿಪಕ್ಷಗಳು ತೀವ್ರತರ ಹೋರಾಟ ನಡೆಸಬೇಕು

October 11, 2021

ಮೈಸೂರು,ಅ.10(ಪಿಎಂ)- ಗ್ಯಾಸ್ ಸಿಲಿಂಡರ್, ಪೆಟ್ರೋಲ್-ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕನ್ನಡ ಚಳವಳಿ ವಾಟಾಳ್ ಪಕ್ಷ ನಿರಂತರ ಹೋರಾಟ ನಡೆಸಲಿದ್ದು, ವಿರೋಧ ಪಕ್ಷಗಳೂ ಕೂಡ ತೀವ್ರತರ ಹೋರಾಟ ನಡೆಸಲು ತೀರ್ಮಾನಿಸಬೇಕು ಎಂದು ವಾಟಾಳ್ ಪಕ್ಷ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದರು.

ಮೈಸೂರಿನ ಜಯಚಾಮರಾಜ ಒಡೆ ಯರ್ ವೃತ್ತದಲ್ಲಿ ಬೆಲೆ ಏರಿಕೆ ವಿರುದ್ಧ ಬೆಂಬ ಲಿಗರೊಂದಿಗೆ ಖಾಲಿ ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿ ಭಾನುವಾರ ಪ್ರತಿಭಟನೆ ನಡೆ ಸಿದ ಅವರು, ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರತಿ ತಿಂಗಳೂ ಗ್ಯಾಸ್ ಸಿಲಿಂಡರ್ ಬೆಲೆ ಏರಿಸಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಬೆಲೆ ಏರಿಕೆಗೆ ಕಡಿವಾಣ ಹಾಕುವ ಕಳಕಳಿ ಇಲ್ಲ. ರಾಜ್ಯ ಸರ್ಕಾರಕ್ಕೂ ಬೇಕಿಲ್ಲ. ಈ ಸರ್ಕಾರಗಳು ಬಡವರ ಬೆನ್ನು ಮೂಳೆ ಮುರಿದಿವೆ. ಬಡವರು ನರಕದಲ್ಲಿ ಬದುಕುವಂತಾಗಿದೆ. ಒಂದು ಕಡೆ ವೈಭವದ ದಸರಾ ಮಹೋತ್ಸವ ನಡೆಯುತ್ತಿದ್ದರೆ, ಮತ್ತೊಂದೆಡೆ ಜನತೆ ಸಂಕಷ್ಟದಲ್ಲಿ ಬದುಕುವಂತಾಗಿದೆ ಎಂದು ಕಿಡಿಕಾರಿದರು. ತೈಲ ಬೆಲೆಯೂ ಹೆಚ್ಚುತ್ತಲೇ ಇದ್ದು, ಅಗತ್ಯ ವಸ್ತುಗಳ ಬೆಲೆಯೂ ನಿಯಂತ್ರಣವಿಲ್ಲದೇ ಏರುಗತಿಯಲ್ಲೇ ಸಾಗು ತ್ತಿದೆ. ರಾಜ್ಯದಲ್ಲಿ ವಿರೋಧ ಪಕ್ಷಗಳು ಬೆಲೆ ಏರಿಕೆ ವಿರುದ್ಧ ಹೋರಾಟ ನಡೆಸಲು ತೀರ್ಮಾನಕ್ಕೆ ಬರಬೇಕು. ತೈಲ ಬೆಲೆ ಏರಿಕೆ ವಿರುದ್ಧ ವಿರೋಧ ಪಕ್ಷದವರು ಜಟಕಾ ಗಾಡಿ, ಸೈಕಲ್ ಮೆರವಣಿಗೆ ಎಂದು ನಾಟಕವಾಡಿ ಸುಮ್ಮನಾಗಿದ್ದಾರೆ. ಇವರು ತೀವ್ರತರವಾದ ಹೋರಾಟ ಮಾಡಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರಿಷತ್ತಲ್ಲಾದರೂ ಅಲ್ಪಸಂಖ್ಯಾತರಿರ ಬೇಕು: ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿ ಆಗಿದ್ದಾಗಾಗಲೀ, ಈಗಿರುವ ಸಚಿವ ಸಂಪುಟದಲ್ಲಿ ಮುಸ್ಲಿಂ, ಕ್ರೈಸ್ತ, ಪಾರಸಿ ಬಾಂಧವರ ಒಬ್ಬರಿಗೂ ಸ್ಥಾನ ಕಲ್ಪಿಸಿಲ್ಲ. ಇದು ಸಂವಿಧಾನಕ್ಕೆ ಮಾಡಿದ ಅಪಚಾರ. ಅವರೂ ಮತದಾರರು. ಇಡೀ ನಾಡಿನ ಚಿಂತಕರು, ಸಾಹಿತಿಗಳು, ಹೋರಾಟಗಾರರು, ವಿರೋಧ ಪಕ್ಷ ದವರು ಈ ಬಗ್ಗೆ ಚಿಂತಿಸಬೇಕು. ಕನಿಷ್ಠ ವಿಧಾನಪರಿಷತ್ತಿಗಾದರೂ ಈ ಸಮು ದಾಯದವರನ್ನು ನಾಮನಿರ್ದೇಶನ ಮಾಡಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.

Translate »