100ರ ಗಡಿಯತ್ತ ಡೀಸೆಲ್ ದರ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ದರ
News

100ರ ಗಡಿಯತ್ತ ಡೀಸೆಲ್ ದರ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ದರ

October 11, 2021

ನವದೆಹಲಿ, ಅ.10-ದೇಶದಲ್ಲಿ ಮತ್ತೇ ತೈಲೋತ್ಪನ್ನಗಳ ದರ ದಿನೇ ದಿನೆ ಏರಿಕೆಯಾಗು ತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರ 100ರ ಗಡಿ ದಾಟಿ ಜನಸಾಮಾನ್ಯರು ಮತ್ತು ವಾಹನ ಸವಾರರು ಪರದಾಡುವ ಪರಿ ಸ್ಥಿತಿ ನಿರ್ಮಾಣವಾಗಿದೆ.

ಇಂದು ಪೆಟ್ರೋಲ್ ದರ ಲೀಟರ್‍ಗೆ 30 ಪೈಸೆ ಮತ್ತು ಡೀಸೆಲ್ ದರ ಲೀಟರ್‍ಗೆ 35 ಪೈಸೆಯಷ್ಟು ಏರಿಕೆಯಾಗಿದ್ದು, ಗ್ರಾಹಕರ ಜೇಬನ್ನು ಸುಡು ವಂತಾಗಿದೆ. ಈ ದರ ಏರಿಕೆಯಿಂದ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ 100ರ ಗಡಿ ದಾಟಿದ್ದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ 98, 99 ರೂ.ಗಳ ಆಸುಪಾಸಿನಲ್ಲಿದೆ. ಮೈಸೂರಲ್ಲಿ 98.5ರಷ್ಟು ರೂ., ಕೊಡಗಿನಲ್ಲಿ 99.40, ದರವಿದೆ. ಬಳ್ಳಾರಿ ಯಲ್ಲಿ ಲೀಟರ್ ಡೀಸೆಲ್ 100.32 ರೂ. ದರವಿದ್ದರೆ, ಬೀದರ್ 99.30 ರೂ. ದರವಿದೆ. ಇನ್ನು ಉತ್ತರ ಕನ್ನಡ, ಶಿರಸಿ, ಕಾರವಾರದಲ್ಲೂ ಕೂಡ ಡೀಸೆಲ್ ದರ 100ರ ಗಡಿ ದಾಟಿದೆ. ಬೆಂಗಳೂರಲ್ಲಿ ಡೀಸೆಲ್ ದರ 98.11 ರೂ.ಗಳಿದೆ. ಇದೇ ರೀತಿ ಪೆಟ್ರೋಲ್ ದರವೂ ಕೂಡ ಒಂದೊಂದು ಜಿಲ್ಲೆಗೂ ಪೈಸೆಗಳಷ್ಟು ವ್ಯತ್ಯಾಸವಿದ್ದು, ವಾಹನ ಸವಾರರಿಗೆ ಹೊರೆಯಾಗಿದೆ. ಕಳೆದ ಕೆಲವು ತಿಂಗಳುಗಳಿಂದ ದಿನ್ಯ ನಿತ್ಯ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಿದ್ದು, ದರ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಅಸಮಾಧಾನಗಳಿವೆ.

Translate »