ಬ್ಯಾಡ್ಮಿಂಟನ್‍ನಲ್ಲಿ ಸಿದ್ದಾಪುರದ ರೋಟರಿ ಮಲ್ಲೇಶ್ವರ ತಂಡಕ್ಕೆ `ಸಮಗ್ರ ಪ್ರಶಸ್ತಿ’
ಮೈಸೂರು

ಬ್ಯಾಡ್ಮಿಂಟನ್‍ನಲ್ಲಿ ಸಿದ್ದಾಪುರದ ರೋಟರಿ ಮಲ್ಲೇಶ್ವರ ತಂಡಕ್ಕೆ `ಸಮಗ್ರ ಪ್ರಶಸ್ತಿ’

October 11, 2021

ಮೈಸೂರು,ಅ.10(ವೈಡಿಎಸ್)-ಹೆಬ್ಬಾಳ್‍ನ ಎಆರ್‍ಸಿ ಸ್ಪೋಟ್ರ್ಸ್ ಜೋನ್‍ನಲ್ಲಿ ನಡೆದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಉತ್ತಮ ಆಟವಾಡಿದ ಆಲೂರು ಸಿದ್ದಾಪುರದ ರೋಟರಿ ಮಲ್ಲೇಶ್ವರ ತಂಡ `ಸಮಗ್ರ ಪ್ರಶಸ್ತಿ’ ತಮ್ಮದಾಗಿಸಿಕೊಂಡಿತು.

ರೋಟರಿ ಕ್ಲಬ್ ಆಫ್ ಮೈಸೂರು ಅಂಬಾರಿ ಆಯೋಜಿಸಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿಯ 15-25ವರ್ಷದೊಳಗಿನ ವಿಭಾಗದ ಸಿಂಗಲ್ಸ್‍ನಲ್ಲಿ ಮುಕ್ತ(ಪ್ರ), ಗುರುಚರಣ್(ದ್ವಿ), ಡಬಲ್ಸ್: ನಿತಿನ್ ಮತ್ತು ನಕುಲ್(ಪ್ರ) ಬಹುಮಾನ ಪಡೆದುಕೊಂಡರು.

30-40 ವರ್ಷದೊಳಗಿನ ವಿಭಾಗ: ಸಿಂಗಲ್ಸ್: ಗಣೇಶ್(ಪ್ರ), ಸೋಮಶೇಖರ್(ದ್ವಿ). ಡಬಲ್ಸ್: ಸೋಮಶೇಖರ್ ಮತ್ತು ಮೂರ್ತಿ(ಪ್ರ), ಸಂತೋಷ್ ಮತ್ತು ಅಭಿಷೇಕ್(ದ್ವಿ). 40-50 ವರ್ಷದೊಳಗಿನ ವಿಭಾಗ: ಸಿಂಗಲ್ಸ್: ಮಂಜುನಾಥ್(ಪ್ರ), ಅರ್ಜುನ್ (ದ್ವಿ). 50-60 ವರ್ಷದೊಳಗಿನ ವಿಭಾಗ: ಸಿಂಗಲ್ಸ್: ಪ್ರಸನ್ನ(ಪ್ರ), ರೇವಣ್ಣ(ದ್ವಿ), ಡಬಲ್ಸ್: ಪ್ರಸನ್ನ ಮತ್ತು ರೇವಣ್ಣ(ಪ್ರ), ರಾಜೇಶ್ ಮತ್ತು ಯದುಕುಮಾರ್(ದ್ವಿ). ಮಹಿಳೆಯರ 60ವರ್ಷ ಮೇಲ್ಪಟ್ಟವರ ವಿಭಾಗ: ಸಿಂಗಲ್ಸ್: ವಿಜಯ ರಮೇಶ್ (ಪ್ರ). ಪುರುಷರ ವಿಭಾಗ: ಸಿ.ಬಿ.ಹರೀಶ್(ಪ್ರ) ಬಹುಮಾನ ಪಡೆದುಕೊಂಡರು.
ಜಿಲ್ಲಾ ಗವರ್ನರ್ ಹೆಚ್.ಆರ್.ಕೇಶವ್ ಭಾನು ವಾರ ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹು ಮಾನ ವಿತರಿಸಿ, ಶುಭ ಹಾರೈಸಿದರು. ವಲಯ ಕಚೇರಿ 8ರ ಸಹಾಯಕ ಗವರ್ನರ್ ಸಿ.ಎಸ್. ರವಿಶಂಕರ್, ಅಂತಾರಾಷ್ಟ್ರೀಯ ಕ್ರೀಡಾಪಟು ಸುನೀಲ್ ಗ್ಲಾಡ್‍ಸನ್, ಕ್ಲಬ್‍ನ ಅಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿ ಎಸ್.ಸಿದ್ದರಾಜು ರಂಗಸ್ವಾಮಿ, ವೆಂಕಟೇಶ್ ಮತ್ತಿರರಿದ್ದರು.

Translate »