ನಾಳೆ ಅಖಿಲ ಭಾರತೀಯ ಕುಸ್ತಿ ಸಂಘ ಉದ್ಘಾಟನೆ
ಮೈಸೂರು

ನಾಳೆ ಅಖಿಲ ಭಾರತೀಯ ಕುಸ್ತಿ ಸಂಘ ಉದ್ಘಾಟನೆ

October 10, 2021

ಮೈಸೂರು,ಅ.9(ಎಂಟಿವೈ)-ಕುಸ್ತಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ನೂತನ ವಾಗಿ ರಚಿಸಲಾಗಿರುವ ಅಖಿಲ ಭಾರತೀಯ ಕುಸ್ತಿ ಸಂಘದ ಜಿಲ್ಲಾ ಶಾಖೆ, ಯುವ ಕುಸ್ತಿ ಪಟುಗಳ ಸಂಘ ಹಾಗೂ ಅಖಿಲ ಭಾರ ತೀಯ ಕುಸ್ತಿ ಸಂಘ ಅ.11ರಂದು ಮಧ್ಯಾಹ್ನ 12 ಗಂಟೆಗೆ ಸಾಹುಕಾರ್ ಚೆನ್ನಯ್ಯ ಕುಸ್ತಿ ಅಖಾಡದಲ್ಲಿ ಉದ್ಘಾಟನೆಯಾಗಲಿದೆ ಎಂದು ಭಾರತೀಯ ಶೈಲಿಯ ಕುಸ್ತಿ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ ತಿಳಿಸಿದ್ದಾರೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕುಸ್ತಿ ಪಟುಗಳಿಗೆ ಸರ್ಕಾರ ಯಾವುದೇ ಉತ್ತೇಜನ ನೀಡುತ್ತಿಲ್ಲ. ಇದರ ಪರಿಣಾಮ ಕುಸ್ತಿ ಕ್ರೀಡೆ ನಶಿಸಿ ಹೋಗುವ ಹಂತಕ್ಕೆ ತಲುಪಿದ್ದು, ಇದರಿಂದ ಕುಸ್ತಿ ಕಲೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಯುವಕರಿಗೆ ಕುಸ್ತಿಯ ಅರಿವು ಮತ್ತು ಮಹತ್ವ ತಿಳಿಸುವ ಸಲುವಾಗಿ ಈ ಕುಸ್ತಿ ಸಂಘಗಳನ್ನು ಹುಟ್ಟು ಹಾಕಲಾಗಿದೆ ಎಂದರು.

ಅ.11ರಂದು ಮಧ್ಯಾಹ್ನ 12ಕ್ಕೆ ಮೈಸೂರಿನ ಸಾಹುಕಾರ್ ಚೆನ್ನಯ್ಯ ಕುಸ್ತಿ ಅಖಾಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಈ ಮೂರು ಸಂಘಟನೆಗಳನ್ನು ಉದ್ಘಾಟಿಸಲಿದ್ದಾರೆ. ಮಟ್ಟಿ ಪೂಜೆಯನ್ನು ಶಾಸಕ ಎಲ್.ನಾಗೇಂದ್ರ ನೆರವೇರಿಸಲಿದ್ದು. ಶಾಸಕ ಎಸ್.ಎ.ರಾಮದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದ ಅಂಗವಾಗಿ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಮೇಯರ್ ಸುನಂದಾ ಪಾಲನೇತ್ರ ಅವರು ಕುಸ್ತಿ ಜ್ಯೋತಿ ಮೆರವಣಿಗೆಗೆ ಚಾಲನೆ ನೀಡಲಿ ದ್ದಾರೆ. ದಸರಾ ಕೇಸರಿ ಬಿರುದಾಂಕಿತ ಪಾಲಹಳ್ಳಿ ಪೈಲ್ವಾನ್ ವಿಜಯೇಂದ್ರ ಜ್ಯೋತಿ ಹಿಡಿದು ಸಾಹುಕಾರ್ ಚೆನ್ನಯ್ಯ ಅಖಾಡಕ್ಕೆ ತರಲಿದ್ದಾರೆ. ಇದೆ ವೇಳೆ ಅಂತಾ ರಾಷ್ಟ್ರೀಯ ಕುಸ್ತಿ ಪಟು ಮಟಪತಿ, ಭಾರತೀಯ ಸೇನೆಯ ಪೈಲ್ವಾನ್ ಎಂ.ಆರ್.ಶರ್ಮಾ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪೈಲ್ವಾನ್ ಮುಕುಂದ, ಹಿರಿಯ ಕುಸ್ತಿ ಪಟು ಪೈಲ್ವಾನ್ ಟೈಗರ್ ಬಾಲಾಜಿ ಅವರನ್ನು ಅಭಿನಂದಿಸಲಾಗುತ್ತದೆ ಎಂದು ತಿಳಿಸಿದರು.
ಉಪಾಧ್ಯಕ್ಷ ದೇವರಾಜು ಮಾತನಾಡಿ, ನಾಡ ಕುಸ್ತಿ, ಭಾರತೀಯ ಶೈಲಿ ಕುಸ್ತಿ, ಈಗಿನ ಪಾಯಿಂಟ್ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ. ಕುಸ್ತಿ ಕೇವಲ ಪುರುಷರ ಕ್ರೀಡೆಯಲ್ಲ, ಮಹಿಳೆಯರು ಕೂಡ ಕುಸ್ತಿಯಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ ಎಂದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಗಣೇಶ್, ಕಾನೂನು ಸಲಹೆಗಾರ ಎನ್.ಉಮೇಶ್, ವಿ.ಎನ್.ದಾಸ್, ಮಹಮ್ಮದ್ ಖಾಸಿಂ ಅಮೃತ್ ಇದ್ದರು.

Translate »