ಜಂಬೂ ಸವಾರಿಗೆ ಸಜ್ಜಾಗುತ್ತಿವೆ ಸ್ತಬ್ಧಚಿತ್ರಗಳು
ಮೈಸೂರು

ಜಂಬೂ ಸವಾರಿಗೆ ಸಜ್ಜಾಗುತ್ತಿವೆ ಸ್ತಬ್ಧಚಿತ್ರಗಳು

October 10, 2021

ಮೈಸೂರು, ಅ.9- ನಾಡಹಬ್ಬ ಮೈಸೂರು ದಸರಾ ಬಂತೆಂದರೆ ನಗರದ ಜನತೆ ಹಬ್ಬದ ವಾತಾವರಣದಲ್ಲಿ ಮಿಂದೇ ಳುತ್ತಾರೆ. ನವರಾತ್ರಿಯ 9 ದಿನಗಳ ಕಾಲ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ಅರ ಮನೆಯಲ್ಲಿ ಮೈಸೂರಿನ ಅರಸರ ಖಾಸಗಿ ದರ್ಬಾರ್ ಹಾಗೂ ಎಲ್ಲರ ಗಮನ ಸೆಳೆಯುವುದು ವಿಜಯದಶಮಿಯ ದಿನ ನಡೆಯುವ ದೇವಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಚಿನ್ನದ ಅಂಬಾರಿ ಯಲ್ಲಿ ಹೊತ್ತು ಸಾಗುವ ಅಂಬಾರಿ ಮೆರ ವಣಿಗೆ. ಈ ಸಂಭ್ರಮದೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳ ಸಂಸ್ಕøತಿ, ವೈವಿಧ್ಯತೆ ಯನ್ನು ಸಾರುವ ಸ್ತಬ್ಧಚಿತ್ರಗಳು ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರು ಹಾಗೂ ಮೈಸೂರು ಜನರ ಕಣ್ಮನ ಸೆಳೆಯುತ್ತಿದ್ದವು.

ಪ್ರತಿವರ್ಷ ದಸರಾ ಸಿದ್ಧತೆ ನಡೆಸು ವುದು ಒಂದೆಡೆಯಾದರೆ ದಸರಾ ಸ್ತಬ್ಧ ಚಿತ್ರಗಳ ತಯಾರಿಯಲ್ಲಿ ವಿವಿಧ ಜಿಲ್ಲೆಗಳ ಜಿಲ್ಲಾಡಳಿತ ಹಾಗೂ ಸರ್ಕಾರ ವಿವಿಧ ಇಲಾಖೆಗಳು ಪೈಪೋಟಿಗೆ ಬಿದ್ದಂತೆ ಅತ್ಯು ತ್ತಮ ಸ್ತಬ್ಧಚಿತ್ರಗಳನ್ನು ತಯಾರಿಸಿ, ಸಾರ್ವ ಜನಿಕರ ಮನ ಸೆಳೆಯಲು ಸಿದ್ಧತೆ ನಡೆಸು ತ್ತಿದ್ದವು. ಇದರೊಂದಿಗೆ ಕಲಾವಿದರು ದಸರಾ ಆರಂಭಕ್ಕೂ 15 ದಿನಗಳ ಮುನ್ನವೇ ಆಕರ್ಷಕ ಸ್ತಬ್ಧ್ದಚಿತ್ರಗಳ ತಯಾರಿಯಲ್ಲಿ ತೊಡಗುವುದರ ಮೂಲಕ ಒಂದಿಷ್ಟು ಆದಾಯ ಹಾಗೂ ಬಹುಮಾನ ಬಂದರೆ ಶಹಬ್ಬಾಸ್‍ಗಿರಿಯನ್ನೂ ಪಡೆಯುತ್ತಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳೂ ಅರ್ಥ ಗರ್ಭಿತ ಹಾಗೂ ಆಕರ್ಷಕ ಸ್ತಬ್ಧಚಿತ್ರ ಗಳನ್ನು ರೂಪಿಸುವ ಮೂಲಕ ಸಾರ್ವ ಜನಿಕರ ಕಣ್ಮನ ಸೆಳೆಯುತ್ತಿದ್ದವು.

ಸ್ತಬ್ಧಚಿತ್ರಗಳನ್ನು ಹೊತ್ತ ವಾಹನಗಳಲ್ಲಿ ಆಯಾ ಜಿಲ್ಲೆಗಳ ಸೊಬಗಿನ ಅನಾ ವರಣವನ್ನು ಕಣ್ತುಂಬಿಕೊಳ್ಳಲು ಪ್ರವಾ ಸಿಗರು ಕಾತುರರಾಗಿರುತ್ತಿದ್ದರು.
ನಮ್ಮ ಜಿಲ್ಲೆಗೇ ಬಹುಮಾನ ಬರಬೇಕು. ನಮ್ಮ ಇಲಾಖೆಗೆ ಬಹುಮಾನ ಸಿಗಲೇ ಬೇಕು ಎಂಬ ಕಾತರದಿಂದ ವಿವಿಧ ಇಲಾಖೆಗಳು ಲಕ್ಷಾಂತರ ರೂ. ವೆಚ್ಚದಲ್ಲಿ ಆಕರ್ಷಕ ಸ್ತಬ್ಧಚಿತ್ರಗಳನ್ನು ರೂಪಿಸಲು ಪೈಪೋಟಿಗಿಳಿಯುತ್ತಿದ್ದರು.

ಈ ಬಾರಿ ಪ್ರದರ್ಶಿತವಾಗುವ ಸ್ತಬ್ಧ ಚಿತ್ರಗಳು: ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರ(ಮುಡಾ)ದಿಂದÀ ಸಾರ್ವಜನಿಕರ ಮನೆ ನಿರ್ಮಾಣಕ್ಕೆ ದೊರೆಯುತ್ತಿರುವ ಸಾಲ ಸೌಲಭ್ಯಗಳ ಬಗ್ಗೆ ಅರಿವು ಮೂಡಿ ಸಲಾಗುತ್ತಿದ್ದು, 5 ಲಕ್ಷ ರೂ. ವೆಚ್ಚದಲ್ಲಿ 10 ಕಲಾವಿದರು ಈ ಸ್ತಬ್ಧಚಿತ್ರ ತಯಾರು ಮಾಡುತ್ತಿದ್ದಾರೆ. ಪರಿಸರ ಇಲಾಖೆಯಿಂದ “ಬೇಡ ನನಗೆ ಕೊಡಲಿ, ನೆರಳನೇಕೆ ಕೊಡಲಿ’ ಎಂಬ ಸ್ತಬ್ಧಚಿತ್ರವನ್ನು 7-8 ಲಕ್ಷ ರೂ. ವೆಚ್ಚದಲ್ಲಿ 10 ಕಲಾವಿದರು ರೂಪಿಸುತ್ತಿದ್ದಾರೆ. ಕೃಷಿ ಮತ್ತು ತೋಟ ಗಾರಿಕೆ ಇಲಾಖೆಯಿಂದ ಸಮಗ್ರ ಕೃಷಿ ಕುರಿತ ಸ್ತಬ್ಧಚಿತ್ರ, ಆರೋಗ್ಯ ಇಲಾಖೆ ಯಿಂದ ಕೊರೊನಾ ಮುಕ್ತ ಕರ್ನಾಟಕ ಕ್ಕಾಗಿ ಶ್ರಮಿಸೋಣ ಸ್ತಬ್ಧಚಿತ್ರ, ಮೈಸೂರು ದಸರಾ ಉಪ ಸಮಿತಿಯಿಂದ ಆಜಾದ್ ಕಾ ಅಮೃತ ಮಹೋತ್ಸವ ಹಾಗೂ ಅರ ಮನೆಯ ವಾದ್ಯಗೋಷ್ಠಿಯ ಸ್ತಬ್ಧಚಿತ್ರಗಳು ಪ್ರದರ್ಶಿತವಾಗುತ್ತಿವೆ. ಪರಿಸರ ಇಲಾಖೆ ಸ್ತಬ್ಧಚಿತ್ರವನ್ನು ತಯಾರಿಸುತ್ತಿರುವ ಕಲಾ ವಿದ ಯೋಗೇಶ್ ಮಾತನಾಡಿ, ಸ್ತಬ್ಧಚಿತ್ರ ವನ್ನು 10 ಕಲಾವಿದರು ತಯಾರಿ ಸುತ್ತಿದ್ದು, ಸುಮಾರು 7-8 ಲಕ್ಷ ರೂ. ವೆಚ್ಚದಲ್ಲಿ ರೂಪಿಸಲಾಗುತ್ತಿದೆ ಎಂದರು.

Translate »