ಮೈಸೂರು ದಸರಾ: ಆಡಂಬರವಿಲ್ಲ; ಅಂದಕ್ಕೇನು ಕಮ್ಮಿ ಇಲ್ಲ
ಮೈಸೂರು

ಮೈಸೂರು ದಸರಾ: ಆಡಂಬರವಿಲ್ಲ; ಅಂದಕ್ಕೇನು ಕಮ್ಮಿ ಇಲ್ಲ

October 10, 2021

ಮೈಸೂರು, ಅ.9(ವೈಡಿಎಸ್)- ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಸರಳವಾಗಿದ್ದರೂ ಆಕರ್ಷಣೆಗೇನೂ ಕಡಿಮೆಯಿಲ್ಲ. ಶನಿವಾರ ಸಾವಿರಾರು ಮಂದಿ ಪ್ರವಾಸಿಗರು ವಾಹನದಲ್ಲಿ ನಗರಕ್ಕೆ ಆಗಮಿಸಿ ದೀಪಾಲಂಕಾರದ ಸೌಂದರ್ಯವನ್ನು ಕಣ್ತುಂಬಿಕೊಂಡರು. ಇದರ ಪರಿ ಣಾಮ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

ಪ್ರತೀ ವರ್ಷ ದಸರಾ ಮಹೋತ್ಸವದಲ್ಲಿ ಪಂಜಿನ ಕವಾಯತು, ವಸ್ತು ಪ್ರದರ್ಶನ, ಯುವ ದಸರಾ, ಯುವ ಸಂಭ್ರಮ, ಆಹಾರ ಮೇಳ, ಓಪನ್ ಸ್ಟ್ರೀಟ್ ಫೆಸ್ಟಿವಲ್ ಮತ್ತಿತರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಇವುಗಳನ್ನು ವೀಕ್ಷಿಸಲು ರಾಜ್ಯದ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ವಾಹನದಲ್ಲಿ ಮೈಸೂರಿಗೆ ಆಗಮಿಸುತ್ತಿದ್ದರು. ಇದರಿಂದ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿತ್ತು.

ಆದರೆ, ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಈ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದು, ದೀಪಾ ಲಂಕಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ವರ್ಷ ದಾಖಲೆ ರೂಪದಲ್ಲಿ ಅಂದರೆ 4.68 ಕೋಟಿ ರೂ. ವೆಚ್ಚ ದಲ್ಲಿ ನಗರ ವ್ಯಾಪ್ತಿಯ 105 ಕಿಮೀ ವ್ಯಾಪ್ತಿಯಲ್ಲಿ ನವನವೀನ ದೀಪಾಲಂಕಾರ ಮಾಡಿದ್ದು, ರಸ್ತೆಗಳು, 95 ವೃತ್ತಗಳಿಗೆ ದೀಪಾಲಂಕಾರ ಮಾಡಲಾಗಿದ್ದು, ಕಂಗೊಳಿಸುತ್ತಿವೆ.

ಜತೆಗೆ ಒಲಂಪಿಕ್ಸ್‍ನಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರ, ಸುತ್ತೂರು ಶ್ರೀ ರಾಜೇಂದ್ರ ಸ್ವಾಮೀಜಿ, ಭಾರತದ ಭೂಪಟ, ಸ್ವಾಮಿ ವಿವೇಕಾನಂದ, ಮೈಸೂರು ಅರಮನೆ, ವಿಷ್ಣು, ಶ್ರೀಕೃಷ್ಣ ರಥ, ವಿಧಾನಸೌಧ, ಪ್ರಾಣಿ-ಪಕ್ಷಿಗಳು, ಚಾಮುಂಡಿ ಬೆಟ್ಟದಲ್ಲಿ ಸ್ವಾಗತ ಕೋರುವ ಪ್ರತಿಕೃತಿ ಮತ್ತಿತರೆ ಪ್ರತಿಕೃತಿ ಗಳನ್ನು ಪ್ರಮುಖ ವೃತ್ತಗಳಲ್ಲಿ ಅಳವಡಿಸಿದ್ದು, ಜನರನ್ನು ತಮ್ಮತ್ತ ಆಕರ್ಷಿಸುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಅರಮನೆ ಸೇರಿದಂತೆ ಇಡೀ ಮೈಸೂರಿನ ದೀಪಾಲಂಕಾರದ ಸೊಬಗನ್ನು ಕಣ್ತುಂಬಿಕೊಳ್ಳಲು ಸಾಗರೋಪಾದಿಯಲ್ಲಿ ಪ್ರವಾಸಿಗರು, ಸ್ಥಳೀಯ ನಿವಾಸಿಗಳು ನಗರಕ್ಕೆ ಆಗಮಿಸಿದ್ದರು. ಕಿಮೀ ಗಟ್ಟಲೆ ದೀಪಾಲಂಕಾರ ಮಾಡಿರುವುದರಿಂದ ಅನೇಕ ಪ್ರವಾಸಿಗರು ತಮ್ಮ ವಾಹನಗಳಲ್ಲೇ ದೀಪಾಲಂಕಾರದ ಸೌಂದರ್ಯ ಕಣ್ತುಂಬಿಕೊಂಡರು. ಇದರಿಂದಾಗಿ ಅರಮನೆ ಸುತ್ತಮುತ್ತಲ ಪ್ರದೇಶ, ಚಾಮರಾಜ ಜೋಡಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ಆಸ್ಪತ್ರೆ ಸರ್ಕಲ್, ಇರ್ವಿನ್ ರಸ್ತೆ, ಬನ್ನಿಮಂಟಪ ಎಲ್‍ಐಸಿ ವೃತ್ತದಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಈ ರಸ್ತೆಗಳಲ್ಲಿ ಪ್ರವಾಸಿಗರು ತಮ್ಮ ವಾಹನಗಳಲ್ಲೇ ನಿಧಾನಗತಿಯಲ್ಲಿ ಸಂಚರಿಸುತ್ತಾ ದೀಪಾ ಲಂಕಾರ ಕಣ್ತುಂಬಿಕೊಂಡರು. ಇದರಿಂದ ವಾಹನ ದಟ್ಟಣೆ ಹೆಚ್ಚಾಗಿ, ಕೆ.ಆರ್.ಸರ್ಕಲ್, ಆಯುರ್ವೇದಿಕ್ ಸರ್ಕಲ್, ಬಸವೇಶ್ವರ ಸರ್ಕಲ್, ಹಾರ್ಡಿಂಜ್ ವೃತ್ತ ಮತ್ತಿತರೆ ವೃತ್ತಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಪೆÇಲೀಸರು ಹಾಗೂ ಹೋಂ ಗಾರ್ಡ್‍ಗಳು ಹರಸಾಹಸಪಡುತ್ತಿದ್ದ ದೃಶ್ಯ ಕಂಡು ಬಂತು.

Translate »