ಕೇಂದ್ರದ ನೆರವಿನಿಂದ ಎಲ್ಲಾ ರೀತಿಯ ಸರ್ಕಾರಿ ಆಸ್ಪತ್ರೆಗಳು ಮೇಲ್ದರ್ಜೆಗೆ
ಮೈಸೂರು

ಕೇಂದ್ರದ ನೆರವಿನಿಂದ ಎಲ್ಲಾ ರೀತಿಯ ಸರ್ಕಾರಿ ಆಸ್ಪತ್ರೆಗಳು ಮೇಲ್ದರ್ಜೆಗೆ

October 9, 2021
  • ಜಿಲ್ಲಾಸ್ಪತ್ರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರ
  • ತಾಲೂಕು ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ಘಟಕ
  • ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸುಧಾರಣೆ
  • ಕೇಂದ್ರ ಆರೋಗ್ಯ ಸಚಿವರ ಭೇಟಿ ನಂತರ ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ

ಬೆಂಗಳೂರು, ಅ.೮(ಕೆಎಂಶಿ)- ಜಿಲ್ಲಾಸ್ಪತ್ರೆ ಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನ್ನಾಗಿಯು, ತಾಲೂಕು ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ಘಟಕಗಳನ್ನು ಆರಂಭಿಸುವುದು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ದಿಂದ ಹಿಡಿದು ಎಲ್ಲಾ ರೀತಿಯ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಆರ್ಥಿಕ ನೆರವಿನ ಭರವಸೆಯಿತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಒಂದು ದಿನದ ದೆಹಲಿ ಭೇಟಿಗೆ ತೆರಳಿದ ಮುಖ್ಯಮಂತ್ರಿಯವರು, ಇಂದು ಕೇಂದ್ರ ಆರೋಗ್ಯ ಮತ್ತು ರಸಾಯನಿಕ ಸಚಿವ ಮನ್ಸೂಕ್ ಮಾಂಡೋವಿ ಅವ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲು ಅಗತ್ಯ ನೆರವು ಕಲ್ಪಿಸುವ ಭರವಸೆಯಿತ್ತಿ ದ್ದಾರೆ ಎಂದರು. ಅಷ್ಟೇ ಅಲ್ಲ ಕೋವಿಡ್ ನಿಯಂತ್ರ ಣಕ್ಕಾಗಿ ಅಗತ್ಯವಿದ್ದಲ್ಲಿ, ಲಸಿಕೆಗಳನ್ನು ಪೂರೈಸುವುದಾಗಿಯು ತಿಳಿಸಿದ್ದಾರೆ. ಮಾಂಡೋವಿ ಅವರು ಇದೇ ೧೦ ರಂದು ಬೆಂಗಳೂರಿನ ನಿಮ್ಹಾನ್ಸ್ನಲ್ಲಿ ನಡೆಯ ಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು ಈ ಸಂದರ್ಭದಲ್ಲಿ ರಾಜ್ಯದ ಬೇಡಿಕೆಗಳನ್ನು ಪರಿಶೀಲಿಸಿ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ನುಡಿದರು. ಇದೇ ರೀತಿ ಈ ವರ್ಷದ ಅಂತ್ಯದೊಳ ಗಾಗಿ ರಾಜ್ಯದ ಶೇ.೯೦ರಷ್ಟು ಜನರಿಗೆ ಕೊರೊನಾ ವ್ಯಾಕ್ಸಿನ್ ನೀಡಲು ಸರ್ಕಾರ ಉದ್ದೇಶಿಸಿದೆ ಎಂದವರು ಹೇಳಿದರು. ಕೊರೊನಾ ವಿರುದ್ಧ ರಾಜ್ಯ ಪರಿಣಾಮಕಾರಿ ಯಾಗಿ ಹೋರಾಟ ನಡೆಸಿದ್ದು, ಈ ವಿಷಯ ದಲ್ಲಿ ರಾಜ್ಯದ ಸಾಧನೆಯನ್ನು ಕೇಂದ್ರ ಸಚಿವರು ಪ್ರಶಂಸಿಸಿದ್ದಾರೆ ಎಂದ ಅವರು, ಇದೇ ರೀತಿ ಶೇಕಡಾ ಎಪ್ಪತ್ತರಷ್ಟು ಜನರಿಗೆ ಎರಡನೇ ಸುತ್ತಿನ ವ್ಯಾಕ್ಸಿನ್ ಕೊಡಲು ಸರ್ಕಾರ ಗುರಿ ಇರಿಸಿಕೊಂಡಿದೆಎAದರು. ಈಗಾಗಲೇ ಶೇ.೮೧ ರಷ್ಟು ಜನರಿಗೆ ಮೊದಲ ಸುತ್ತಿನ ವ್ಯಾಕ್ಸಿನ್ ನೀಡಲಾಗಿದ್ದು, ಶೇ.೩೭ರಷ್ಟು ಜನರಿಗೆ ೨ನೇ ಸುತ್ತಿನ ವ್ಯಾಕ್ಸಿನ್ ನೀಡಲಾಗಿದೆ ಎಂದು ವಿವರಿಸಿದರು.

ಕಳೆದ ಒಂದು ತಿಂಗಳಲ್ಲಿ ರಾಜ್ಯದ ೧.೪೮ ಕೋಟಿ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದ ಅವರು,ಇನ್ನೂ ಐವತ್ತೊಂದು ಲಕ್ಷ ವ್ಯಾಕ್ಸಿನ್ ಅನ್ನು ಸಂಗ್ರಹಿಸಲಾಗಿದೆ ಎಂದು ನುಡಿದರು. ರಾಜ್ಯಕ್ಕೆ ಕೊರತೆಯಾಗಿರುವ ನಲವತ್ತೆರಡು ಸಾವಿರ ಮೆಟ್ರಿಕ್ ಟನ್ ರಸಗೊಬ್ಬರವನ್ನು ಒಂದು ವಾರದಲ್ಲಿ ಪೂರೈಸುವುದಾಗಿ ಭರವಸೆ ನೀಡಿದ್ದಾರೆ. ಹಿಂಗಾರು ಹಂಗಾಮಿನಲ್ಲಿ ರಾಜ್ಯಕ್ಕೆ ಮೂವತ್ತೆರಡು ಸಾವಿರ ಮೆಟ್ರಿಕ್ ಟನ್ ಡಿಎಪಿ ರಸಗೊಬ್ಬರದ ಅಗತ್ಯವಿದ್ದು,ಹತ್ತು ಸಾವಿರ ಮೆಟ್ರಿಕ್ ಟನ್‌ಗಳಷ್ಟು ಎಂಓಪಿ ರಸಗೊಬ್ಬರದ ಅಗತ್ಯವಿದೆ ಎಂದು ಅವರು ಹೇಳಿದರು. ಈ ಮಧ್ಯೆ ರಾಜ್ಯಕ್ಕೆ ಅಗತ್ಯವಾದ ೭೯೮೦೦ ಮೆಟ್ರಿಕ್ ಟನ್ ಯೂರಿಯಾ ಅನ್ನು ಪೂರೈಸುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ಭರವಸೆ ನೀಡಿದ್ದು, ಉಳಿದಂತೆ ಡಿಎಪಿ ಮತ್ತು ಎಂಓಪಿ ರಸಗೊಬ್ಬರ ಇನ್ನೊಂದು ವಾರದೊಳಗಾಗಿ ಪೂರೈಕೆಯಾಗಲಿದೆ ಎಂದು ಹೇಳಿದರು.

Translate »