ನಾನು ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲಿ ಎಂದರೆ ಕಾಂಗ್ರೆಸ್ ಒಪ್ಪದೆ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಿತು…!?
ಮೈಸೂರು

ನಾನು ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲಿ ಎಂದರೆ ಕಾಂಗ್ರೆಸ್ ಒಪ್ಪದೆ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಿತು…!?

October 9, 2021
  • ಕಳೆದ ಮೈತ್ರಿ ಸರ್ಕಾರ ರಚನೆ ಬುತ್ತಿ ಮತ್ತೆ ಬಿಚ್ಚಿದ ಮಾಜಿ ಪ್ರಧಾನಿ ದೇವೇಗೌಡರು
  • ಇದೀಗ ಕಾಂಗ್ರೆಸ್ ಜೆಡಿಎಸ್ಬಲಹೀನಗೊಳಿಸಲು ಮುಂದಾಗಿದೆ

ಬೆAಗಳೂರು, ಅ. ೮(ಕೆಎಂಶಿ)- ಕಳೆದ ವಿಧಾನ ಸಭಾ ಚುನಾವಣೆಯ ನಂತರ ನಾನು ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲಿ ಎಂದು ಹೇಳಿದರೆ, ಕಾಂಗ್ರೆಸ್ ಪಕ್ಷ ಒಪ್ಪದೆ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಹುದ್ದೆಗೇರಿಸಿತು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ೨೦೧೮ರಲ್ಲಿ ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ ವಾಯಿತು. ಹೆಚ್ಚು ಸ್ಥಾನಗಳು ಬಂದಿದ್ದರಿAದ ಕಾಂಗ್ರೆಸ್ ಪಕ್ಷದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ದೊರೆಯಲಿ ಎಂದು ನಾವು ಬಯಸಿದ್ದೆವು. ಈ ಸಂಬAಧ ಖರ್ಗೆ ಅವರ ಜತೆ ಮಾತನಾಡಿದಾಗ ಅವರೂ ಒಪ್ಪಿಗೆ ನೀಡಿದ್ದರು. ಇದಾದ ನಂತರ ಕಾಂಗ್ರೆಸ್ ನಾಯಕ ಗುಲಾಂನಬಿ ಆಜಾದ್ ಅವರ
ಜತೆ ಮಾತನಾಡಿ ಈ ವಿಷಯ ತಿಳಿಸಿದ್ದೆವು. ಅವರು ಕೂಡಾ ಈ ಬಗ್ಗೆ ಪಕ್ಷದ ನಾಯಕಿ ಸೋನಿಯಾಗಾಂಧಿ ಅವರ ಜತೆ ಮಾತನಾಡಿ ಒಪ್ಪಿಗೆ ಪಡೆಯುವುದಾಗಿ ಹೇಳಿದ್ದರು.ಹೀಗೆ ಹೇಳಿ ಹೋದವರು ನಂತರ ಬಂದು ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಆಗಲಿ ಎಂದರು ಎಂದು ಗೌಡರು ತಿಳಿಸಿದರು.

ಬಲಹೀನಗೊಳಿಸುವ ಯತ್ನ: ಕಾಂಗ್ರೆಸ್ ಇದೀಗ ನಮ್ಮ ಪಕ್ಷವನ್ನು ಬಲಹೀನ ಮಾಡಲು ಹೊರಟಿದೆ. ಆ ಪಕ್ಷಕ್ಕೆ ಶತಮಾನದ ಇತಿಹಾಸ ಇದ್ದರೂ, ಉಪಚುನಾವಣೆಗೆ ಅಭ್ಯರ್ಥಿಗಳು ದೊರೆಯದೇ ನಮ್ಮ ಜೆಡಿಎಸ್‌ನ ನಾಯಕರನ್ನು ಹೈಜಾಕ್ ಮಾಡಿ, ಚುನಾವಣಾ ಕಣಕ್ಕಿಳಿಸುತ್ತಾರೆ ಎಂದರು. ಆ ಪಕ್ಷದ ರಾಜ್ಯ ನಾಯಕರಿಗೆ ನಾಚಿಕೆಯಾಗಬೇಕು. ಇದು ಇಂದು ನಿನ್ನೆಯದಲ್ಲ, ಕೆಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಕೆಲವೊಮ್ಮೆ ಬಿಜೆಪಿ ಪಕ್ಷವೂ ಇದೇ ತಂತ್ರವನ್ನು ಅನುಸರಿಸುತ್ತಾ ಬಂದಿದೆ. ಹಾನಗಲ್ ಹಾಗೂ ಸಿಂದಗಿ ಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿದ್ದೇವೆ. ನಾರಾಯಣ ರಾವ್ ಮಾನೆ ಕೂಡ ನನ್ನ ಶಿಷ್ಯರೇ, ಜಾತಿ ನೋಡಿ ನಾನು ಬೆಳೆಸಲಿಲ್ಲ. ಬಸವ ಕಲ್ಯಾಣದಲ್ಲಿ ೫೦ ಸಾವಿರ ಮುಸ್ಲಿಂ ಮತಗಳಿವೆ. ಹೀಗಾಗಿ ಮುಸ್ಲಿಂ ಅಭ್ಯರ್ಥಿ ಹಾಕಿದ್ದೆವು ಎಂದು ಅವರು ಹೇಳಿದರು. ಸಿಂದಗಿಯಲ್ಲಿ ಮೊದಲು ಮನಗೂಳಿಗೆ ರಾಜಕೀಯವಾಗಿ ಅವಕಾಶ ಮಾಡಿಕೊಟ್ಟೆ, ಆದರೆ ಇವತ್ತು ಅವರ ಮಗ ಕಾಂಗ್ರೆಸ್‌ಗೆ ಹೋಗಿದ್ದಾರೆ. ಮನೆ ಮಗನಂತೆ ಬೆಳೆಸಿ ಕೊಂಡು ಬಂದೆ. ಸಂಕಷ್ಟ ದಲ್ಲೂ ಮಂತ್ರಿ ಮಾಡಿದ್ದೆವು. ಇಡೀ ಸಿಂದಗಿಗೆ ನೀರನ್ನು ಕೊಡಲೇಬೇಕು ಅಂತ ಮನಗೂಳಿ ಕಾಲವಾದ ನಂತರ ಅವರ ಮಗನನ್ನು ಕಾಂಗ್ರೆಸ್ ಕರೆದುಕೊಂಡು ಹೋದರು ಎಂದರು.
ನಿಮಗೆ ನಮ್ಮ ಅಭ್ಯರ್ಥಿಯೇ ಬೇಕಾ: ನಿಮಗೆ ನಮ್ಮ ಅಭ್ಯರ್ಥಿಯೇ ಬೇಕಾ, ನಮ್ಮ ಅಭ್ಯರ್ಥಿಯನ್ನು ಹೊತ್ತುಕೊಂಡು ಹೋದರೆ, ನಾವು ಸುಮ್ಮನಿರಬೇಕಾ, ಹೀಗಾಗಿ ನಮ್ಮ ಅಭ್ಯರ್ಥಿ ಹಾಕಿದ್ದೇವೆ. ಬಿಜೆಪಿ ಗೆಲ್ಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿಲ್ಲ. ಮುಸ್ಲಿಂರನ್ನು ನೀವು ಗುತ್ತಿಗೆ ಪಡೆದಿಲ್ಲ. ನಾನು ಶಕ್ತಿ ತುಂಬಿದ ನಿಮ್ಮ ಬಲಗೈ ಭಂಟ ಜಮೀರ್ ಯಾರು? ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.

೨೦೨೩ಕ್ಕೆ ಜೆಡಿಎಸ್ ಅಧಿಕಾರಕ್ಕೆ‘ಪಂಚರತ್ನ’ ಕಾರ್ಯಕ್ರಮ ಸಾಕಾರ
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆದ್ದು ಅಧಿ ಕಾರ ಹಿಡಿಯಲಿದೆ ಎಂದು ಇದೇ ಸಂದರ್ಭ ದಲ್ಲಿ ವಿಶ್ವಾಸ ವ್ಯಕ್ತಪಡಿ ಸಿದ ದೇವೇಗೌಡರು, ಇದಕ್ಕೆ ಪೂರಕವಾಗಿ ಇತ್ತೀಚೆಗೆ ಪಕ್ಷ ಸಂಘ ಟನೆ ಮಾಡಲು ಏಳು ದಿನಗಳ ಕಾರ್ಯಾಗಾರ ನಡೆಸ ಲಾಯಿತು ಎಂದರು. ಕಾರ್ಯಾಗಾರದಲ್ಲಿ ಕುಮಾರ ಸ್ವಾಮಿ ಅವರು ನಾಡಿಗೆ ಬಲ ತುಂಬುವ ಪಂಚರತ್ನ ಯೋಜನೆ ಬಗ್ಗೆ ತಿಳಿಸಿದರು. ಈ ಕಾರ್ಯಕ್ರಮದ ಬಗ್ಗೆ ಅವರೊಬ್ಬರೇ ಆಲೋಚಿಸಿ ಮಾಡಿದ ಅತ್ಯುತ್ತಮ ಕಾರ್ಯಕ್ರಮ ಎಂದರು. ೨೦೨೩ಕ್ಕೆ ನಮ್ಮ ಪಕ್ಷಕ್ಕೆ ಶಕ್ತಿ ನೀಡಿದರೆ ಈ ಪಂಚ ರತ್ನ ಕಾರ್ಯಕ್ರಮವನ್ನು ಕೊಡು ತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ನಾನು ಆರ್‌ಎಸ್‌ಎಸ್ ಬಗ್ಗೆ ಹೊಗಳಿದ್ದೇನೆ
ಎನ್ನುವುದು ಅಪ್ಪಟ ಸುಳ್ಳು. ,ಆಡ್ವಾಣ ಬಂದಾಗ ನಾವು ಸಮಾಲೋಚನೆ ಮಾಡಿದ್ದೆವು. ಎಮರ್ಜೆನ್ಸಿ ಸಮಯದಲ್ಲಿ ಜೈಲಿಗೆ ಹೋಗಿದ್ದರ ಬಗ್ಗೆ ಮಾತನಾಡಿದ್ದೆವು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು. ಬಾಂಕ್ವೆಟ್ ಹಾಲ್‌ನಲ್ಲಿ ಒಂದು ಕಾರ್ಯಕ್ರಮ ನಡೆದಿತ್ತು, ನಾನೇ ಬಾಂಕ್ವೆಟ್ ಹಾಲ್‌ನಲ್ಲಿ ಸಮಾರಂಭ ಮಾಡಲು ಅನುಮತಿ ನೀಡಿದ್ದೆ. ನನ್ನ ಅಧ್ಯಕ್ಷತೆಯಲ್ಲಿಯೇ ಕಾರ್ಯಕ್ರಮ ನಡೆದಿತ್ತು ನಾನು ಅಲ್ಲೇ ಸಭೆಯನ್ನು ದುರುಪ ಯೋಗ ಮಾಡುವುದು ಸರಿಯಲ್ಲ ಎಂದಿದ್ದೆ. ನಾವು ತುರ್ತು ಪರಿಸ್ಥಿತಿಗೆ ಬೆಂಬಲಿಸು ತ್ತೇವೆ ಎಂದು ಹೇಳಿ ಆರೆಸ್ಸೆಸ್‌ನ ಅನೇಕರು ಬರೆದುಕೊಟ್ಟರು.ಅಂತಹ ಆರೆಸ್ಸೆಸ್‌ಗೂ ನನಗೂ ಏನು ಸಂಬAಧ ಎಂದ ಅವರು, ಆರೆಸ್ಸೆಸ್ ಬಗ್ಗೆ ನನಗೆ ಗಂಧ ಗಾಳಿ ಗೊತ್ತಿಲ್ಲ ಸುಮ್ಮನೆ ಸುಳ್ಳು ಹೇಳುವುದನ್ನು ಬಿಡಬೇಕು ಎಂದು ಎದುರಾಳಿಗಳಿಗೆ ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಸ್ಥಿತಿ ಎಲ್ಲಿಂದ ಎಲ್ಲಿಗೆ ಬರ್ತಾ ಇದೆ ಅಂತ ಗೊತ್ತಿದೆ ಎಂದ ಅವರು,ಆ ಪಕ್ಷ ನೆಹರು ಅವರ ನಂತರ ಕಾಲದಿಂದ ಕಾಲಕ್ಕೆ ಯಾವ ಯಾವ ರಾಜ್ಯದಲ್ಲಿ ಎಲ್ಲಿಗೆ ಬಂದಿದೆ ಅಂತ ಎಲ್ಲರಿಗೂ ಗೊತ್ತಿದೆ ನನ್ನನ್ನು ಕೆಣಕಲು ಹೋಗಬೇಡಿ ಕೆಣಕಿದರೆ ಸರಿ ಇರಲ್ಲ ಎಂದು ಮಾಜಿ ಪ್ರಧಾನಿ ದೇವೆಗೌಡ ಅವರು ಗುಡುಗಿದರು.

Translate »